Breaking News

ಬೇರೆಯವರಿಂದ ಎಕ್ಸಾಂ ಬರೆಸಿ ಅಸ್ಸಾಂ ಟಾಪರ್ ಎನಿಸಿಕೊಂಡಿದ್ದ ವಿದ್ಯಾರ್ಥಿ ಅರೆಸ್ಟ್

Spread the love

ಗುವಾಹಟಿ : ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆ ಜೆಇಇನಲ್ಲಿ ಉತ್ತಮ ಅಂಕ ಪಡೆದು ಅಸ್ಸಾಂಗೆ ಪ್ರಥಮ ಸ್ಥಾನ ಬಂದಿದ್ದ ಯುವಕನ ಬಣ್ಣ ಬಯಲಾಗಿದೆ.

ಆತ ತನ್ನ ಬದಲು ಬೇರೆಯವರಿಂದ ಎಕ್ಸಾಂ ಬರೆಸಿದ್ದ ಎಂಬ ವಿಷಯ ಬಹಿರಂಗವಾಗಿದೆ. ಈ ಹಿನ್ನೆಲೆ ಅಸ್ಸಾಂ ಟಾಪರ್ ಎನಿಸಿಕೊಂಡಿದ್ದ ವಿದ್ಯಾರ್ಥಿ ನೀಲ್​ ನಕ್ಷತ್ರ ದಾಸ್​​, ಆತನ ತಂದೆ ಹಾಗೂ ಇತರೆ ಮೂವರನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ.

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ಮಂದಿಗೆ ಶೇ.100 ಅಂಕ!

ನೀಲ್​ ನಕ್ಷತ್ರ ದಾಸ್ ಪರೀಕ್ಷೆಗೆ ಹಾಜರಾಗಿರಲಿಲ್ಲ. ಬದಲಾಗಿ ಟೆಸ್ಟಿಂಗ್​ ಸೆಂಟರ್​ವೊಂದರ ಸಹಾಯದಿಂದ ತನ್ನ ಬದಲಿಗೆ ಬೇರೊಬ್ಬರಿಂದ ಪರೀಕ್ಷೆ ಬರೆಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಪರೀಕ್ಷೆಯಲ್ಲಿ ನೀಲ್​ ನಕ್ಷತ್ರ ದಾಸ್ 99.8 ರಿಸಲ್ಟ್‌ನೊಂದಿಗೆ ಅಸ್ಸಾಂಗೆ ಟಾಪರ್ ಆಗಿದ್ದ.

ಈ ವಂಚನೆಯಲ್ಲಿ ಭಾಗಿಯಾದ ಆರೋಪದ ಮೇಲೆ ನೀಲ್ ತಂದೆ ಡಾ.

ಜ್ಯೋತಿರ್ಮೋಯ್​​ ದಾಸ್​ ಹಾಗೂ ಟೆಸ್ಟಿಂಗ್ ಸೆಂಟರ್​ನ ಸಿಬ್ಬಂದಿ ಹರ್ಮೇಂದ್ರ ನಾಥ್ ಶರ್ಮಾ, ಪ್ರಾಂಜಲ್​​ ಹಾಗೂ ಹೀರೂಲಾಲ್ ಎಂಬ ಮೂವರನ್ನ ಕೂಡ ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಅಝಾರಾ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಗುವಾಹಟಿ ಪೊಲೀಸ್​ ಆಯುಕ್ತರ ಪ್ರತಿಕ್ರಿಯೆ
ವಂಚನೆ ಜಾಲದಲ್ಲಿ ಏಜೆನ್ಸಿಯೊಂದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದು, ಅದರ ಸಹಾಯದಿಂದ ಅಭ್ಯರ್ಥಿ ನೀಲ್​​​​, ಬೇರೊಬ್ಬರನ್ನ ಪರೀಕ್ಷೆ ಬರೆಯಲು ಬಳಸಿಕೊಂಡಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಟೆಸ್ಟಿಂಗ್​ ಸೆಂಟರ್​ನ ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಮತ್ತಷ್ಟು ಆರೋಪಿಗಳಿಗಾಗಿ ನಾವು ಹುಡುಕಾಡುತ್ತಿದ್ದೇವೆ. ಆದ್ರೆ ಇದೊಂದು ದೊಡ್ಡ ಹಗರಣವಾಗಿರಬಹುದು ಎನ್ನುವ ಅನುಮಾನವಿದೆ. ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಗುವಾಹಟಿ ಪೊಲೀಸ್​ ಆಯುಕ್ತ ಎಂಪಿ ಗುಪ್ತಾ ತಿಳಿಸಿದ್ದಾರೆ.


Spread the love

About Laxminews 24x7

Check Also

ನಿರಂತರ ಮಳೆಗೆ ಧಾರವಾಡದಲ್ಲಿ ಮೊಳಕೆಯೊಡೆಯುತ್ತಿವೆ ಹೆಸರು ಬೆಳೆ.. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವರುಣರಾಯ.

Spread the love ನಿರಂತರ ಮಳೆಗೆ ಧಾರವಾಡದಲ್ಲಿ ಮೊಳಕೆಯೊಡೆಯುತ್ತಿವೆ ಹೆಸರು ಬೆಳೆ.. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ