ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್ಗಳ ಜಯ ಸಾಧಿಸಿದೆ.
ಆರಂಭದಲ್ಲಿ ಹೈದರಾಬಾದ್ ಕಡೆ ಗೆಲುವನ್ನು ಪಂಜಾಬ್ ತನ್ನೆಡೆ ಸೆಳೆದುಕೊಂಡಿತ್ತು.
ಈ ಮಧ್ಯೆ ಪಂಜಾಬ್ ತಂಡದಲ್ಲಿ ಓಪನರ್ ಆಗಿ ಇಳಿದಿದ್ದ ಮಂದೀಪ್ ನೋವಿನ ನಡುವೆಯೂ ಬ್ಯಾಟ್ ಬೀಸಿದ್ದಾರೆ! ಅತ್ತ ಮನೆಯಲ್ಲಿ ಅವರ ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದರು!
ಹೌದು, ಮಂದೀಪ್ ತಂದೆ ಹರ್ದೇವ್ ತಂದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಆದಾಗ್ಯೂ ಮಂದೀಪ್ ಮನೆಗೆ ತೆರಳದೇ ಪಂಜಾಬ್ ಪರ ಓಪನರ್ ಆಗಿ ಆಡಿದ್ದಾರೆ.
ಮಂದೀಪ್ ಸಿಂಗ್ ಈ ಮೊದಲು ಮೂರು ಪಂದ್ಯಗಳನ್ನಾಡಿದ್ದಾರು. ಆದರೆ, ಅವರಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ.
Laxmi News 24×7