ಬೆಂಗಳೂರು: ಖ್ಯಾತ ಕಿರುತೆರೆ ನಟ ಕೃಷ್ಣಮೂರ್ತಿ ನಾಡಿಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಡ ರಾತ್ರಿ ಎದೆನೋವಿನಿಂದ ಬಳಲುತ್ತಿದ್ದ ನಾಡಿಗ್ ಅವರನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದರು.
ಹಿರಿಯ ನಟರಾಗಿರುವ ಕೃಷ್ಣಮೂರ್ತಿ ನಾಡಿಗ್ ನಾಲ್ಕು ದಶಕಗಳಿಂದ ಹಿರಿತೆರೆ ಹಾಗೂ ಕಿರಿತೆರೆಯಲ್ಲಿ ಅಭಿನಯಿಸಿದ್ದಾರೆ. ಲಗ್ನ ಪತ್ರಿಕೆ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ನಾಡಿಗ್, ಪಲ್ಲವಿ ಅನು ಪಲ್ಲವಿ, ಮಾಹಾದೇವಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದರು.
ಇನ್ನು ಪೈಲ್ವಾನ್, ಆದಿಲಕ್ಷ್ಮಿ ಪುರಾಣ, ಮಾಂಗಲ್ಯಂ ತಂತುನಾನೇನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Laxmi News 24×7