ಹುಬ್ಬಳ್ಳಿ: ಸದಾ ಒಂದಿಲ್ಲದೊಂದು ಯಡವಟ್ಟಿನಿಂದ ಹೆಸರುವಾಸಿಯಾಗಿರುವ ಕಿಮ್ಸ್ ಆಸ್ಪತ್ರೆ, ಇದೀಗ ಎಚ್ ಐವಿ ಇಲ್ಲದಿದ್ದರು ಪಾಸಿಟಿವ್ ವರದಿ ನೀಡಿ ಮಹಿಳೆಯೊಬ್ಬರನ್ನು ಗಂಡನಿಂದ ದೂರ ಮಾಡಿದೆ.

ಕಿಮ್ಸ್ ಆಸ್ಪತ್ರೆಯ ವೈದ್ಯರು ಬೇಜವಾಬ್ದಾರಿಯಿಂದ ಕೆಲಸದಿಂದ ದಿಕ್ಕು ತೋಚದೆ ಮಹಿಳೆ ಕಳೆದ ಒಂದು ವರ್ಷದಿಂದ ತವರು ಸೇರಿದ್ದಾಳೆ. ನಗರದ ಜನತಾ ಕಾಲೋನಿ ನಿವಾಸಿ ಚೆನ್ನಮ್ಮ ಬೇಲಿ ಎಂಬ ಮಹಿಳೆ ಕಳೆದ ವರ್ಷದ ಹಿಂದೆ ಸ್ಯಾಮಸನ್ ಎಂಬಾತನನ್ನು ಮದುವೆ ಮಾಡಿಕೊಂಡಿದ್ದರು.
ಬಳಿಕ ಕಿಮ್ಸ್ ಆಸ್ಪತ್ರೆಯಲ್ಲಿ ನವ ದಂಪತಿ ಎಚ್ ಐವಿ ಟೆಸ್ಟ್ ಗೆ ಒಳಗಾಗಿದ್ದರು. ಇಲ್ಲಿನ ವೈದ್ಯರು ಮಹಿಳೆಯ ವರದಿ ಎಚ್ ಐವಿ ಪಾಸಿಟಿವ್ ನೀಡಿದ್ದಾರೆ. ವರದಿ ನೋಡಿದ ಪತಿ ಚೆನ್ನಮ್ಮಳನ್ನು ದೂರ ಮಾಡಿದ್ದಾನೆ. ಇದರಿಂದ ಅನುಮಾನ ಬಂದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಂಡಿದ್ದಾಳೆ.

ಖಾಸಗಿ ಆಸ್ಪತ್ರೆ ವರದಿ ನೆಗಟಿವ್ ಬಂದಿದೆ. ಗಂಡನಿಗೆ ಖಾಸಗಿ ಆಸ್ಪತ್ರೆಯ ವರದಿ ನೀಡಿದರು ಆತ ನಂಬುತ್ತಿಲ್ಲ. ಮನೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಇದಕ್ಕೆಲ್ಲ ಕಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಅಂತಾ ಆರೋಪಿಸಿರುವ ಚನ್ನಮ್ಮ, ನನಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾಳೆ.
Laxmi News 24×7