Breaking News

ಸ್ಯಾಂಡಲ್‍ವುಡ್ ಡ್ರಗ್ಸ್ ಗೆ ಬಾಲಿವುಡ್ ನಂಟು : ಸಂಬರಗಿ

Spread the love

ಬೆಂಗಳೂರು, ಸೆ.3- ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟಿಗೂ ಬಾಲಿವುಡ್‍ಗೂ ಸಂಬಂಧವಿದೆ. ಈ ಬಗ್ಗೆ ತನಿಖೆಯಾಗಬೇಕು. ಬಾಲಿವುಡ್‍ನ ನಂಟು ಹೊಂದಿರುವ ಇಮ್ತಿಯಾಜ್ ಖಾತ್ರಿ ಎಂಬುವವರ ಬಗ್ಗೆ ತನಿಖೆ ನಡೆಸಿದರೆ ಮತ್ತಷ್ಟು ವಿಷಯಗಳು ಹೊರ ಬರಲಿವೆ ಎಂದು ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇಮ್ತಿಯಾಜ್ ಖಾತ್ರಿ ಎಂಬುವ ವರಿಗೆ ಬಾಲಿವುಡ್‍ನ ನಟ-ನಟಿಯರು, ನಿರ್ಮಾಪಕರ ನಂಟಿದೆ. ಮುಂಬೈನಲ್ಲಿ ನಡೆದ ಇವರ ಬರ್ತಡೆಗೆ ನಮ್ಮ ಕನ್ನಡದ ನಟ-ನಟಿಯರು, ರಾಜಕಾರಣಿಗಳೂ ಹೋಗಿದ್ದಾರೆ. ಈ ಬಗ್ಗೆ ತನಿಖೆಯಾದರೆ ಡ್ರಗ್ಸ್‍ನ ವಿಷಯ ಹೊರ ಬರಲಿದೆ ಎಂದು ಅವರು ತಿಳಿಸಿದ್ದಾರೆಇತ್ತೀಚೆಗೆ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಹೋಗಿ ಗೆಲುವು ಸಾಧಿಸಿದ ಶಾಸಕ ರೊಬ್ಬರ ಅದ್ಧೂರಿ ಹುಟ್ಟುಹಬ್ಬದ ಕಾರ್ಯ ಕ್ರಮದಲ್ಲಿ ಬಾಲಿವುಡ್‍ನ ನಟ-ನಟಿಯರು ಪಾಲ್ಗೊಂಡಿ ದ್ದರು. ಇದರಲ್ಲಿ ಇಮ್ತಿಯಾಜ್ ಖಾತ್ರಿ ಕೂಡ ಇದ್ದರು. ಈ ಬಗ್ಗೆ ತನಿಖೆಯಾದರೆ ಹೆಚ್ಚಿನ ಮಾಹಿತಿಗಳು ಕೂಡ ಸಿಗಲಿವೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ