ಬೆಂಗಳೂರು: ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಜನ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಮಾಂಸ ಖರೀದಿಸುತ್ತಿದ್ದು, ಒಂದು ತಿಂಗಳಿಂದ ಬಿಕೋ ಎನ್ನುತ್ತಿದ್ದ ಮಟನ್ ಅಂಗಡಿಗಳು ಇಂದು ಫುಲ್ ಆಗಿವೆ.ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಲೇ ಸಾಲುಗಟ್ಟಿ ನಿಂತು ಗ್ರಾಹಕರು ಮಾಂಸ ಖರೀದಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸೈನಿಟಸರ್ ಬಳಸುತ್ತಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಪಾಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶ್ರಾವಣ ಮಾಸ ಹಿನ್ನೆಲೆ ಕಳೆದ ನಾಲ್ಕು ವಾರದಿಂದ ಮಟನ್ ಶಾಪ್ ಗಳು ಖಾಲಿ ಖಾಲಿಯಾಗಿದ್ದವು. ಶ್ರಾವಣ ಮಾಸ ಅಂತ್ಯ ಹಿನ್ನೆಲೆ ಜನ ಸಾಲುಗಟ್ಟಿ ನಿಂತು ಮಟನ್ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರಿನ ಮೈಸೂರು ರಸ್ತೆಯ ಹಲವು ಮಟನ್ ಶಾಪ್‍ಗಳು ಜನಜಂಗುಳಿಯಿಂದ ಕೂಡಿದ್ದು, ಪಾಪಣ್ಣ ಮಟನ್ ಶಾಫ್ ಗೆ ಜನರ ದಂಡು ಹರಿದು ಬರುತ್ತಿದೆ. ಮಾಂಸ ಮಾರಾಟದ ಭರಾಟೆ ಜೋರಾಗಿದೆ. ಇತ್ತ ಸದಾಶಿವನಗರದಲ್ಲಿ ಸಹ ಮಾಂಸ ಖರೀದಿ ಜೋರಾಗಿದೆ.