Breaking News

ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

Spread the love

ಕೊಪ್ಪಳ(ಜುಲೈ.23): ಕಾಣೆಯಾಗಿದ್ದ ಬಾಲಕನೊಬ್ಬ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ದುರಂತ ಘಟನೆ ನಡೆದಿದ್ದು ಕೊಪ್ಪಳದ ತಾಲೂಕಿನ ಹಲಗೇರಿ ಹಳ್ಳದಲ್ಲಿ. ಆಡಿ ಬೆಳೆಯುವ ವಯಸ್ಸಿನ 4ನೇ ತರಗತಿಯಲ್ಲಿ ಓದುತ್ತಿದ್ದ ಆ ಬಾಲಕ ಮಂಜುನಾಥ ಬುರ್ಲಿ ಬದುಕಿನ ಬಗ್ಗೆ, ಹೆತ್ತವರು ಅಗಾಧ ಕನಸು ಕಂಡಿದ್ದರು. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಈ ಬಾಲಕ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ.

ಮಗನ ಶವವನ್ನು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕವಯಸ್ಸಿನ ಮಗನನ್ನು ಕಳೆದುಕೊಂಡ ತಾಯಿಯ ಸಂಕಟ ಎಂಥವರ ಕರುಳು ಕಿತ್ತು ಬರುವಂತಹ ದೃಶ್ಯಗಳಿಗೆ ಕೊಪ್ಪಳ ತಾಲೂಕಿನ ಹಲಗೇರಿ ಹಳ್ಳ ಸಾಕ್ಷಿಯಾಯಿತು.

ಅಷ್ಟಕ್ಕೂ ಆಗಿದ್ದಾದರೂ ಏನು?

ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಕೆಲ ದಿನಗಳ ಹಿಂದಷ್ಟೇ ಆಟ ಆಡಿ ಓಡಾಡಿಕೊಂಡಿದ್ದ ತಳಕಲ್ ಗ್ರಾಮದ ಮಂಜುನಾಥ ಬುರ್ಲಿ, ಇದ್ದಕ್ಕಿದ್ದಂತೆ ಕಾಣೆಯಾದ. ಮಗ ಕಾಣೆಯಾದಾಗಿನಿಂದ ಕೊಲೆಯಾಗಿರುವ ಅನುಮಾನವಿದ್ದ ಹೆತ್ತವರು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊನೆಗೂ ಹೆತ್ತವರ ಅನುಮಾನ ನಿಜವಾಯ್ತು. ಮಗ ಮಂಜುನಾಥ ಶವವಾಗಿ ಪತ್ತೆಯಾಗಿದ್ದ.

ತಳಕಲ್ ಗ್ರಾಮದವನೇ ಆಗಿರುವ ಅಣ್ಣಪ್ಪ ನಡುವಲಮನಿ ಎಂಬಾತ ಕಣ್ಣು, ಕಿಡ್ನಿ ಮಾಫಿಯಾಗೆ ನಮ್ಮ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಮೃತ ಬಾಲಕನ ಪಾಲಕರ ಆರೋಪಿಸುತ್ತಿದ್ದಾರೆ.

ಬಾಲಕ ತಳಕಲ್ ಗ್ರಾಮದವನಾಗಿದ್ದರೂ ಕೊಲೆ ಆರೋಪಿ ಅಣ್ಣಪ್ಪ ಶವವನ್ನು ಗ್ರಾಮದಿಂದ ಸುಮಾರು 8 ಕಿ.ಮೀ. ದೂರ ಇರುವ ಹಲಗೇರಿ ಹಳ್ಳದಲ್ಲಿ ಹೂತು ಹಾಕಿದ್ದ. ಜುಲೈ 19ರಂದು ಕಾಣೆಯಾಗಿದ್ದ ತಳಕಲ್​​​ ಗ್ರಾಮದ ಬಾಲಕ ಮಂಜುನಾಥ್, ಜುಲೈ 22 ರಂದು ಶವವಾಗಿ ಪತ್ತೆಯಾಗಿದ್ದಾನೆ. ಕಾಣೆಯಾದ ಪ್ರಕರಣದ ಜಾಡು ಹಿಡಿದು ಅಣ್ಣಪ್ಪನ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಮಾಡಿರುವ ಸತ್ಯ ಬಾಯಿ ಬಿಟ್ಟು ಶವ ಹೂತಿಟ್ಟಿರುವ ಜಾಗವನ್ನು ಪೊಲೀಸರಿಗೆ ತೋರಿಸಿದ್ದಾನೆ.


Spread the love

About Laxminews 24x7

Check Also

ಅನುದಾನವೆಲ್ಲಾ ಗ್ಯಾರಂಟಿಗೆ ಹೋಗ್ತಿದೆ, ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ! ರಾಯರೆಡ್ಡಿ

Spread the love ಕೊಪ್ಪಳ: 5 ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಮುಂದಿಟ್ಟುಕೊಂಡು ಕಾಂಗ್ರೆಸ್ (Congress) ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ