Breaking News

ವಾರದ ಹಿಂದೆ ಗಾಂಜಾ ಕೇಸಲ್ಲಿ ಅಂದರ್ ಆಗಿದ್ದ ಖೈದಿಗೂ ಕೊರೊನಾ ಪಾಸಿಟಿವ್

Spread the love

ಚಿಕ್ಕಮಗಳೂರು: ವಾರದ ಹಿಂದೆ ಗಾಂಜಾ ಕೇಸಲ್ಲಿ ಅಂದರ್ ಆಗಿದ್ದ ಖೈದಿಗೂ ಕೊರೊನಾ ಪಾಸಿಟಿವ್ ಬಂದು ಜೈಲಿನಿಂದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾರುತಿ 800 ಕಾರಿನಲ್ಲಿ 50 ಕೆ.ಜಿ. ಗಾಂಜಾವನ್ನ ಸಾಗಿಸುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಬಂಧಿತ ನಾಲ್ವರನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆ ನಾಲ್ವರಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತ ಖೈದಿಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ನಾಲ್ವರು ಆಂಧ್ರಪ್ರದೇಶದದಿಂದ 80 ಕೆ.ಜಿ. ಗಾಂಜಾ ತರಿಸಿ 30 ಕೆಜಿಯನ್ನ ಹಾಸನ ಹಾಗೂ ಸಖಲೇಶಪುರದಲ್ಲಿ ಮಾರಾಟ ಮಾಡಿದ್ದರು. ಉಳಿದ 50 ಕೆ.ಜಿ. ಗಾಂಜಾವನ್ನ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮಾರುತಿ 800 ಕಾರಿನಲ್ಲಿ ಮಂಗಳೂರಿಗೆ ಸಾಗಿಸುವಾಗ ಪೊಲೀಸರ ಅಥಿತಿಯಾಗಿದ್ದರು.ಇದೀಗ ಆ ನಾಲ್ವರಲ್ಲಿ ಓರ್ವನಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ದೊಡ್ಡ ಗಾಂಜಾ ರೇಡ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಸಿಬ್ಬಂದಿಯನ್ನ ಶ್ಲಾಘಿಸಿದ್ದರು. ಈಗ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಗಾಂಜಾ ಕಳ್ಳನಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ಹಾಕಬೇಕಾಗಿದೆ. ಸಾಲದಕ್ಕೆ ಆ ನಾಲ್ವರನ್ನ ಬಂಧಿಸಿದ ಸುಮಾರು ಎಂಟಕ್ಕೂ ಅಧಿಕ ಪೊಲೀಸರು ಕೂಡ ಕ್ವಾರಂಟೈನ್ ಗೆ ಒಳಗಾಗಬೇಕಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ