ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಕಪ್ ಮ್ಯಾನ್ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಸ್ವತಃ ನಟ ದರ್ಶನ್ ಅವರೇ ಟ್ವೀಟ್ ಮಾಡಿದ್ದು, ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ
ಮೇಕಪ್ ಆರ್ಟಿಸ್ಟ್ ಆಗಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಶ್ರೀನಿವಾಸ್ ಅವರು ದರ್ಶನ್ ಅವರ ಬಹುತೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ರಾಬರ್ಟ್ ಚಿತ್ರಕ್ಕೂ ಕೆಲಸ ಮಾಡಿರುವ ಇವರ ನಿಧನಕ್ಕೆ ಚಿತ್ರತಂಡ ಕೂಡ ಕಂಬನಿ ಮಿಡಿದಿದೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿ ನರ್ತನದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಈ ಮಧ್ಯೆ ಸಾಲು ಸಾಲು ಚಿತ್ರನಟರು ಇಹಲೋಕ ತ್ಯಜಿಸಿದ್ದಾರೆ. ಇದೀಗ ಇವರ ಸಾಲಿಗೆ ದರ್ಶನ್ ಅವರ ಮೇಕಪ್ ಮ್ಯಾನ್ ಕೂಡ ಸೇರಿದ್ದಾರೆ.