ಹುಕ್ಕೇರಿ : ಪೋಲಿಸರು ಸಮಾಜದ ಭದ್ರತಾ ಪ್ರತಿನಿಧಿಗಳಾಗಿದ್ದಾರೆ – ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ.
ಪೊಲೀಸರನ್ನು ಸಮಾಜದ ಭದ್ರತಾ ಪ್ರತಿನಿಧಿಗಳೆಂದು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಕರೆಂದು ಕರೆಯಲಾಗುತ್ತದೆ. ಅದರಂತೆ ಇಂದು ಹುಕ್ಕೇರಿ ನಗರದ ಗಾಂಧಿನಗರ ಮತ್ತು ಹಳ್ಳದಕೇರಿ ಭಾಗದಲ್ಲಿ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪೋಲಿಸ್ ಅಸಿಸಟ್ಟಂಟ ಸಬ್ ಇನ್ಸಪೇಕ್ಟರ ಎ ಸಿ ಮಠಪತಿ, ಮುಖ್ಯ ಪೇದೆಗಳಾದ ರವಿ ಢಂಗ ಮತ್ತು ಮಂಜುನಾಥ ಕಬ್ಬೂರಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಭೆ ಜರುಗಿಸಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಅಪರಾಧ ತಡೆ ಹಾಗೂ ಪತ್ತೆ , ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ರಚಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಕರ್ತವ್ಯ ಮತ್ತು ಗುರತರ ಪೊಲೀಸ್ ಇಲಾಖೆಯ ಜವಾಬ್ದಾರಿಗಳ ಮಾಹಿತಿ ನೀಡಿದರು.
ಮಹಿಳೆಯರ ಸುರಕ್ಷತೆ ಮಕ್ಕಳ ಸುರಕ್ಷತೆ ಮಾನವ ಕಳ್ಳ ಸಾಗಾಣಿಕೆ ಮಕ್ಕಳ ಭಿಕ್ಷಾಟನೆ ಹಾಗೂ ಪ್ರಸ್ತುತ ದಿನದಲ್ಲಿ ಪ್ರಚಲಿತ ತಿಳುವಳಿಕೆ ಅವಶ್ಯಕತೆ ಇರುವ ಇತರ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಮತ್ತು ಸೈಬರ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರದ ವಿವಿಧ ಬಡಾವಣೆಗಳ ಸದಸ್ಯರು ಉಪಸ್ಥಿತರಿದ್ದರು.