Breaking News

ಇಂಡಿಯನ್ ಬ್ಯಾಂಕ್ ದರೋಡೆ: ಆರೋಪಿ ಬಂಧನ, ₹14 ಲಕ್ಷ ಮೌಲ್ಯದ ಆಭರಣ ವಶ

Spread the love

ಬೆಳಗಾವಿ ಇಂಡಿಯನ್ ಬ್ಯಾಂಕ್ ದರೋಡೆ: ಆರೋಪಿ ಬಂಧನ, ₹14 ಲಕ್ಷ ಮೌಲ್ಯದ ಆಭರಣ ವಶ
ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾಗ್ಯನಗರದ 2ನೇ ಕ್ರಾಸ್‌ನಲ್ಲಿ ರುವ ಇಂಡಿಯನ್ ಬ್ಯಾಂಕ್ ಲಾಕರ್‌ ದರೋಡೆ ಮಾಡಿದ್ದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಟಿಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಉಪ ಪೊಲೀಸ್ ಆಯುಕ್ತ ರೋಹನ್ ಜಗದೀಶ್, ಉಪ ಪೊಲೀಸ್ ಆಯುಕ್ತ ಎನ್. ನಿರಂಜನ್ ರಾಜೇಅರಸ್ ಹಾಗೂ ಖಡೇಬಜಾರ್ ಉಪವಿಭಾಗದ ಎಸಿಪಿ ಶೇಖರಪ್ಪ ಎಚ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಟಿಳಕವಾಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದ ತಂಡವು, ಚಂದ್ರಕಾಂತ ಬಾಲಾಜಿ ಜೋರ್ಡ್ ಎಂಬಾತನನ್ನು ಬಂಧಿಸಿದ್ದು, ಅವನಿಂದ ಒಟ್ಟು 143.9 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಭರಣಗಳ ಮೌಲ್ಯ ಸುಮಾರು ₹14 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಪ್ರಕರಣ ಭೇದಿಸುವಲ್ಲಿ ಟಿಳಕವಾಡಿ ಪಿಎಸ್‌ಐ ವಿಶ್ವನಾಥ ಘಂಟಾಮಠ, ಪಿಎಸ್‌ಐ ಪ್ರಭಾಕರ ಡೊಳ್ಳ, ಹಾಗೂ ಸಿಬ್ಬಂದಿಗಳಾದ ಮಹೇಶ ಪಾಟೀಲ, ಎಸ್.ಎಂ. ಕರಗಣ್ಣವರ, ಲಾಡಜಿಸಾಬ ಮುಲ್ತಾನಿ, ನಾಗೇಂದ್ರ ತಳವಾರ, ಅರುಣ ಪಾಟೀಲ ಮತ್ತು ನವೀನಕುಮಾರ್ ಜಿ. ಒಳಗೊಂಡ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.
ತಂಡದ ಕಾರ್ಯತತ್ಪರತೆಬಗಾಗಿ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿ, ಅವರಿಗೆ ಬಹುಮಾನ ಘೋಷಿಸಿದ್ದಾರೆ.

Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ