ಅಥಣಿ: ‘ಮುಂದಿನ ವರ್ಷದ ಒಳಗಾಗಿ ನೀರು ಒದಗಿಸುವ ಕಾರ್ಯ ಮಾಡಲಾಗುವುದು, 17100ಎಚ್‌ಪಿ ಸಾಮರ್ಥ್ಯದ ಮೂರು ಮೋಟಾರ್ ಕೂಡಿಸಿ 14 ತಿಂಗಳಿನಲ್ಲಿ ಏಳು ಗ್ರಾಮಗಳಿಗೆ ನೀರು ಪೂರೈಸಲಾಗುವುದು, ಕೃಷ್ಣಾ ನದಿಯ ಪ್ರವಾಹ ಮಹಾಪೂರ ಬಂದರೂ ತೊಂದರೆಯಾಗದಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಿಕೊಂಡು, ರಾಜ್ಯದಲ್ಲೆ ಮಾದರಿ ಯೋಜನೆಯನ್ನಾಗಿಸಲಾಗಿದೆ’ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲ್ಲೂಕಿನ ಅರಟಾಳ ಕ್ರಾಸ್ ಹತ್ತಿರ ಜರುಗಿದ ಅಮ್ಮಾಜೇಶ್ವರಿ -ಕೊಟ್ಟಲಗಿ ಏತನೀರಾವರಿ ಯೋಜನೆಯ ಎಂ.ಎಸ್ ಪೈಪ್‌ಗಳ ಜೋಡಣೆಯ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ತುಬಚಿ ಬಬಲೇಶ್ವರಿ ಏತ ನೀರಾವರಿ ಮಂಜೂರು ಮಾಡುವ ವೇಳೆ ನಮ್ಮ ಭಾಗದ ಏಳು ಹಳ್ಳಿಗಳಿಗೆ ಆಡಳಿತಾತ್ಮಕವಾಗಿ ಮಂಜೂರು ಮಾಡಲಾಗಿತ್ತು. ಸರ್ಕಾರ ಬದಲಾದ ವೇಳೆ ಈ ಹಳ್ಳಿಗಳು ಯೋಜನೆಯಿಂದ ವಂಚಿತವಾಗಿದ್ದವು. ಇದೀಗ ಎಲ್ಲ ಹಳ್ಳಿಗಳಿಗೆ ಸುವರ್ಣಕಾಲ ಬಂದಿದೆ’ ಎಂದರು.