ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನಕ್ಕೆ 271 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 6,516ಕ್ಕೆ ಏರಿಕೆಯಾಗಿದೆ. 7 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಕಡುನಾಡಲ್ಲಿ ಕೊರೊನಾ ರಣಕೇಕೆ ಮುಂದುವರೆಸಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 24 ಗಂಟೆಯಲ್ಲಿ 271 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇಲ್ಲಿಯವರೆಗೆ 6516 ಸೋಂಕಿತರ ಪೈಕಿ 3,440 ಜನರು ಸಂಪೂರ್ಣ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 79 ಜನರು ಮೃತಪಟ್ಟಿದ್ದಾರೆ.
ಜಿಲ್ಲಾವಾರು ಇಂದಿನ ಸೋಂಕಿತರ ಮಾಹಿತಿ ಬಳ್ಳಾರಿ 97
ಬೆಂಗಳೂರು 36
ಉಡುಪಿ 22
ಕಲಬುರಗಿ 20
ಧಾರವಾಡ 19
ದಕ್ಷಿಣ ಕನ್ನಡ 17
ಬೀದರ್ 10
ಹಾಸನ 9
ಮೈಸೂರು 9
ತುಮಕೂರು 7
ಶಿವಮೊಗ್ಗ 6
ರಾಯಚೂರು 4
ಉತ್ತರ ಕನ್ನಡ 4
ಚಿತ್ರದುರ್ಗ 3
ರಾಮನಗರ 3
ಮಂಡ್ಯ 2
ಬೆಳಗಾವಿ 1
ವಿಜಯಪುರ 1
ಕೋಲಾರ 1
Laxmi News 24×7