ಮೈಸೂರು: ಇನ್ನೂ ಮೂರು ತಿಂಗಳು ಶಾಲೆಗಳನ್ನು ತೆರೆಯಬಾರದು ಇದು ರಾಜ್ಯ ಸರ್ಕಾರಕ್ಕೆ ನನ್ನ ಸಲಹೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಧ್ಯವಾದರೆ ಎರಡು ಶಿಫ್ಸ್ನಲ್ಲಿ ಕ್ಲಾಸ್ ಮಾಡಬೇಕು. ಮಕ್ಕಳಿಗೆ ಕೊರೊನಾ ಏನಾದರು ತಗುಲಿದರೆ ಇಡೀ ಕುಟುಂಬಕ್ಕೆ ಹರಡುತ್ತೆ. ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಂಡು ಶಾಲೆ ತೆರೆಯಬೇಕು. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಈ ಬಗ್ಗೆ ಸೂಚನೆ ಕೊಡುತ್ತೇನೆ. ಎಲ್ಲ ರೀತಿಯ ಶಾಲೆಗಳಿಗೂ ಇದು ಅನ್ವಯ ಆಗಬೇಕು ಎಂದು ಸರ್ಕಾರಕ್ಕೆ ಅವರು ಸಲಹೆ ನೀಡಿದ್ದಾರೆ.
ಕೊರೊನಾಗೆ ಯಾವುದೇ ವಾಕ್ಸಿನೇಷನ್(ಲಸಿಕೆ) ಇಲ್ಲ, ಇದಕ್ಕೆ ಮಾಸ್ಕ್ ಹಾಕೋಳೋದು, ಸ್ಯಾನಿಟೈಸ್ ಮಾಡಿಕೊಳ್ಳೊದೆ ಮದ್ದು. ಇದಕ್ಕೆ ಔಷಧ ಕಂಡು ಹಿಡಿಯೋವರೆಗೂ ಇದೆ ಮದ್ದು. ಫ್ರಾನ್ಸ್ನಲ್ಲಿ ಇದೇ ರೀತಿ ಶಾಲೆ ತೆರೆದು ಮಕ್ಕಳಿಗೆ ಕೊರೋನಾ ಬಂದಿದೆ ಇದನ್ನು ನಾನು ಕೂಡ ನ್ಯೂಸ್ನಲ್ಲಿ ನೋಡಿದ್ದೇನೆ. ಹಾಗಾಗಿ ಸರ್ಕಾರ ಶಾಲೆ ತೆರೆಯಲು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಆದರೆ, ಶಾಲೆಯನ್ನು ಈಗ ಆರಂಭಿಸಬಾರದು ಎಂದರು.
ನಾನು ಸಿಎಂ ಆಗಿದ್ರೆ ಕುಟುಂಬಕ್ಕೆ 10 ಸಾವಿರ ನೀಡ್ತಿದೆ. ಬರೋಬ್ಬರಿ 1 ಕೋಟಿ ಜನರಿಗೆ 10 ಸಾವಿರ ಕೊಡುತ್ತಿದ್ದೆ ಇದನ್ನು ಯಡಿಯೂರಪ್ಪನವರಿಗೆ ಹೇಳುತ್ತಾ ಇದ್ದೇನೆ. ಸಾಲ ತೆಗೆದುಕೊಂಡು ಒಂದು ಕೋಟಿ ಜನರಿಗೆ ಸಾಲ ಕೊಡುತ್ತಿದೆ. 53 ಸಾವಿರ ಕೋಟಿ ಸಾಲಪಡಿತೀನಿ ಅಂತಾರೆ ಸಿಎಂ ಯಡಿಯೂರಪ್ಪ. ಅದರಲ್ಲಿ 10 ಸಾವಿರ ಕೋಟಿ ಬಡವರಿಗೆ 10 ಸಾವಿರ ನೀಡಲಿ. ಒಂದು ಕೋಟಿ ಜನರಿಗೆ 10 ಸಾವಿರ ನೀಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನುಡಿದರು.
ರಾಜ್ಯಸಭೆ ಚುನಾವಣೆಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದ ಕುರಿತು ಮಾತನಾಡಿದ ಅವರು, ನನ್ನ ಶಿಫಾರಸ್ಸು ಖರ್ಗೆ ಅಂತ ಈಗಾಗಲೇ ಹೇಳಿದ್ದೀನಿ. ವೇಣುಗೋಪಾಲ್ ಅವರಿಗೆ ಈ ಬಗ್ಗೆ ಹೇಳಿದ್ದೇನೆ. ಕೊಪ್ಪಳದಲ್ಲಿ ನಾನು ಆಸಕ್ತಿ ಇದ್ದರೆ ಖರ್ಗೆ ಹೆಸರು ಶಿಫಾರಸ್ಸು ಮಾಡ್ತಿವಿ ಎಂದಿದ್ದೆ ಅದಕ್ಕೆ ಖರ್ಗೆ ಅವರು ನನಗೆ ಆಸಕ್ತಿ ಇದೆ ಎಂದಿದ್ದಾರೆ. ಏನು ಹೇಳಬೇಕೋ ಎಲ್ಲವು ಹೈಕಮಾಂಡ್ಗೆ ತಿಳಿಸಿದ್ದೇನೆ ಎಂದು ನಗುತ್ತಲೇ ಖರ್ಗೆ ಹೆಸರು ಸೂಚಿಸಿರುವುದಾಗಿ ಹೇಳಿದರು.