Breaking News

ಶನಿವಾರ ಬೆಂಗಳೂರಿನ ಹೆಚ್​ಎಎಲ್​ಗೆ ಪ್ರಧಾನಿ ಮೋದಿ ಭೇಟಿ

Spread the love

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಕರ್ನಾಟಕದ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸೈಟ್‌ಗೆ ಭೇಟಿ ನೀಡಲಿದ್ದಾರೆ.

ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಡಲಿರುವ ಮೋದಿ ಬೆಳಗ್ಗೆ 9.15 ಕ್ಕೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್​ಎಎಲ್​ ) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಹೆಚ್​ಎಎಲ್ ಆಯೋಜಿಸಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

ಅವರು ತೇಜಸ್ ಜೆಟ್‌ಗಳ ಸೌಲಭ್ಯ ಸೇರಿದಂತೆ ಅವುಗಳ ಉತ್ಪಾದನಾ ಸೌಲಭ್ಯಗಳನ್ನು ಹಾಗೂ ತಾಂತ್ರಿಕ ಸವಲತ್ತುಗಳ ಬಗ್ಗೆ ಪರಿಶೀಲಿಸಲಿದ್ದಾರೆ. ಭಾರತೀಯ ವಾಯುಪಡೆಯು ಇತ್ತೀಚೆಗೆ 12 ಸು-30MKI ಫೈಟರ್ ಜೆಟ್‌ಗಳ ಖರೀದಿಗಾಗಿ ಸರ್ಕಾರಿ ಸ್ವಾಮ್ಯದ ಹೆಚ್​ಎಎಲ್​​ಗೆ ಟೆಂಡರ್ ನೀಡಿತ್ತು.

“ಇತ್ತೀಚೆಗೆ 12 Su-30MKI ಯುದ್ಧವಿಮಾನಗಳನ್ನು ಖರೀದಿಸಲು ಹೆಚ್​ಎಎಲ್​ಗೆ ಟೆಂಡರ್ ನೀಡಲಾಗಿದೆ. ರಷ್ಯಾದ ಮೂಲದ ಉಪಕರಣ ತಯಾರಕರ ಸಹಭಾಗಿತ್ವದಲ್ಲಿ HAL ಸಹಭಾಗಿತ್ವದಲ್ಲಿ ಭಾರತದಲ್ಲಿಯೇ ತಯಾರಿಸಲಿದೆ” ಎಂದು ರಕ್ಷಣಾ ಮೂಲಗಳು ತಿಳಿಸಿವೆ.

”ಸಾರ್ವಜನಿಕ ವಲಯದ ಕಂಪನಿಯು ಮುಂದಿನ ತಿಂಗಳೊಳಗೆ ಯೋಜನೆಯ ವಿವರಗಳೊಂದಿಗೆ ಟೆಂಡರ್‌ಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಭಾರತದ ರಕ್ಷಣಾ ವಲಯಕ್ಕೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, LCA ಮಾರ್ಕ್ 2 ಮತ್ತು ಸ್ವದೇಶಿ ಸುಧಾರಿತ ಮಧ್ಯಮ ಯುದ್ಧ ವಿಮಾನದ (AMCA) ಮೊದಲ ಎರಡು ಸ್ಕ್ವಾಡ್ರನ್‌ಗಳ ಎಂಜಿನ್‌ಗಳನ್ನು ದೇಶೀಯವಾಗಿ ಉತ್ಪಾದಿಸಲಾಗುವುದು” ಎಂದು ಡಿಆರ್​ಡಿಒ ಮುಖ್ಯಸ್ಥ ಡಾ ಸಮೀರ್ ವಿ ಕಾಮತ್ ಹೇಳಿದ್ದಾರೆ.

“ಎಲ್‌ಸಿಎ ಮಾರ್ಕ್ 2 ರ ಇಂಜಿನ್‌ ಮತ್ತು ಸ್ವದೇಶಿ ಸುಧಾರಿತ ಮಧ್ಯಮ ಯುದ್ಧ ವಿಮಾನದ ಮೊದಲ ಎರಡು ಸ್ಕ್ವಾಡ್ರನ್‌ಗಳನ್ನು ಅಮೆರಿಕದ ಜಿಇ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ದೇಶದೊಳಗೆ ಉತ್ಪಾದಿಸಲಾಗುವುದು. ಈಗಾಗಲೇ ಅಮೆರಿಕದಿಂದ ಎಲ್ಲ ಅನುಮತಿಗಳನ್ನು ಪಡೆಯಲಾಗಿದೆ “ಎಂದು ಡಿಆರ್‌ಡಿಒ ಮುಖ್ಯಸ್ಥ ಡಾ ಸಮೀರ್ ವಿ. ಕಾಮತ್ ತಿಳಿಸಿದರು. ಅಮೆರಿಕದ ಜಿಇ ಹಾಗೂ ಹೆಚ್‌ಎಎಲ್ ಯುದ್ಧ ವಿಮಾನದ ಎಂಜಿನ್‌ಗಳನ್ನು ಭಾರತದಲ್ಲಿನ ಸೌಲಭ್ಯದಲ್ಲಿ ಜಂಟಿಯಾಗಿ ಉತ್ಪಾದಿಸಲಿವೆ ಎಂಬುದು ತಿಳಿದುಬಂದಿದೆ.

 


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ