Breaking News

ರಿಲಯನ್ಸ್​ ಮಂಡಳಿಗೆ ಅಂಬಾನಿ ಪುತ್ರರ ನೇಮಕ.. ಕಂಪನಿಯ ಅಧಿಕಾರ ಹಸ್ತಾಂತರಕ್ಕೆ ಉದ್ಯಮಿ ಮುಖೇಶ್​ ಸಜ್ಜು?

Spread the love

ಮುಂಬೈ: ಜಿಯೋ ಮೂಲಕ ಎಲ್ಲರ ಮನೆಮಾತಾಗಿರುವ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಕಂಪನಿಯ ಅಧಿಕಾರವನ್ನು ತಮ್ಮ ಮಕ್ಕಳ ಕೈಗೆ ನೀಡಲು ಅಂತಿಮ ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷವಷ್ಟೇ ಆಕಾಶ್​ ಅಂಬಾನಿಯನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಿದ್ದರು. ಇದೀಗ ಇನ್ನಿಬ್ಬರು ಮಕ್ಕಳಾದ ಇಶಾ ಮತ್ತು ಅನಂತ್​ ಅಂಬಾನಿಯನ್ನೂ ಕಂಪನಿಗೆ ನೇಮಕ ಮಾಡಲಾಗಿದೆ.

ಅಂಬಾನಿ ಪುತ್ರರಾದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ಅವರನ್ನು ಸೋಮವಾರ ಎನರ್ಜಿ ಟು ಟೆಕ್ನಾಲಜಿ ಕಾಂಗ್ಲೋಮೆರೇಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಂಡಳಿಯಲ್ಲಿ ನೇಮಿಸಲಾಗಿದೆ. ಇದು ಅಧಿಕಾರ ಹಸ್ತಾಂತರದ ಮೊದಲ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.

ಸೋಮವಾರ ನಡೆದ ರಿಲಯನ್ಸ್‌ನ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಳಿ ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅವರನ್ನು ‘ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರು’ ಆಗಿ ನೇಮಿಸಿ ಅನುಮೋದಿಸಲಾಗಿದೆ ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರದಲ್ಲಿ ತಿಳಿಸಿದೆ.

ಆಕಾಶ್​ ಅಂಬಾನಿ ಜಿಯೋ ಇನ್ಫೋಕಾಮ್ ಅಧ್ಯಕ್ಷ: ಕಳೆದ ವರ್ಷ ಉದ್ಯಮಿ ಮುಖೇಶ್​ ಅಂಬಾನಿ ಅವರು ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿಗೆ ಭಾರತದ ಅತಿದೊಡ್ಡ ಮೊಬೈಲ್ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಿದ್ದರು. ಇದೀಗ ಇನ್ನಿಬ್ಬರು ಮಕ್ಕಳಿಗೂ ಕಂಪನಿಯಲ್ಲಿ ದೊಡ್ಡ ಹುದ್ದೆ ನೀಡಲಾಗಿದೆ.

ಇಲ್ಲಿಯವರೆಗೂ ತಮ್ಮ ಮೂವರು ಮಕ್ಕಳನ್ನು ವ್ಯಾಪಾರ ವಹಿವಾಟು ಮಟ್ಟದ ಕಾರ್ಯನಿರ್ವಹಣೆಯಲ್ಲಿ ಮಾತ್ರ ತೊಡಗಿಸಿಕೊಂಡಿದ್ದರು. ನೇರವಾಗಿ ಯಾವುದೇ ಹುದ್ದೆಯನ್ನು ನೀಡಿರಲಲ್ಲ. ಇದೀಗ ಅವರಿಗೆ ಕಂಪನಿಯ ನಿರ್ದೇಶಕ ಹುದ್ದೆಯನ್ನೇ ನೀಡಲಾಗಿದೆ.

ಜಿಯೋ ಇನ್ಫೋಕಾಮ್ ಜಿಯೋ ಪ್ಲಾಟ್‌ಫಾರ್ಮ್‌ಗಳ ಅಂಗಸಂಸ್ಥೆಯಾಗಿದೆ. ಮೆಟಾ ಮತ್ತು ಗೂಗಲ್ ಇದರಲ್ಲಿ ಪಾಲನ್ನು ಹೊಂದಿದೆ. ಇವೆಲ್ಲವೂ ಮುಖೇಶ್ ಅವರ ಅಧ್ಯಕ್ಷತೆಯಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜಿಯೋ ಪ್ಲಾಟ್‌ಫಾರ್ಮ್‌ಗಳ ಮೂಲವಾಗಿದೆ.

ಮುಖೇಶ್​ ನಿವೃತ್ತಿಯಾಗಲ್ಲ: ಮಕ್ಕಳಿಗೆ ಕಂಪನಿಯ ಅಧಿಕಾರ ನೀಡಲು ಮುಂದಾಗಿರುವ ಉದ್ಯಮಿ ಮುಖೇಶ್​ ಅಂಬಾನಿ ಅವರು ಸದ್ಯಕ್ಕೆ ತಮ್ಮ ಹುದ್ದೆಯಿಂದ ನಿವೃತ್ತರಾಗಲ್ಲ ಎಂದು ತಿಳಿದುಬಂದಿದೆ. ರಿಲಯನ್ಸ್ ಕಂಪನಿಯ ಎಲ್ಲ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರಾಗಿ ಅಂಬಾನಿ ಮುಂದುವರಿದ್ದಾರೆ. ಆಕಾಶ್ ಅಂಬಾನಿಗೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನ ನೀಡಲಾಗಿದ್ದರೆ, 31 ವರ್ಷದ ಇಶಾ ಅಂಬಾನಿಗೆ ರಿಲಯನ್ಸ್‌ನ ಚಿಲ್ಲರೆ ವ್ಯಾಪಾರ ವಹಿವಾಟು ಹೊಣೆ, ಕಿರಿಯ ಸಹೋದರ ಅನಂತ್ ಅಂಬಾನಿಗೆ ನ್ಯೂ ಎನರ್ಜಿ ಬ್ಯುಸಿನೆಸ್​ನ ಜವಾಬ್ದಾರಿ ನೀಡಲಾಗಿದೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ