Breaking News

ಕುಸಿದು ಬಿದ್ದ ಯತ್ನಾಳ್

Spread the love

ಬೆಂಗಳೂರು: ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿ ಆದೇಶಿಸಿದ್ದಾರೆ. ಇನ್ನು ಈ ವೇಳೆ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಮಾರ್ಷಲ್​ಗಳು ಹೊತ್ತೊಯ್ದಿದ್ದಾರೆ. ಮತ್ತೊಂದು ಕಡೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅಸ್ವಸ್ಥಗೊಂಡು ಕುಸಿದು ಬಿದ್ದ ಪ್ರಕರಣವೂ ನಡೆಯಿತು. ಅಸ್ವಸ್ಥಗೊಂಡ ಅವರನ್ನು ತಕ್ಷಣ ಸ್ಟ್ರೆಚರ್​ನಲ್ಲಿ ಮಾರ್ಷಲ್​ಗಳು ಹೊತ್ತು ಕೊಂಡು ಹೋಗಿ, ಆಸ್ಪತ್ರೆಗೆ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಗೆ ತೆರಳಿ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಆರೋಗ್ಯ ವಿಚಾರಿಸಿದ್ರು.

ಇನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್​ ಯುಟಿ ಖಾದರ್​ ಆಸ್ಪತ್ರೆಗೆ ತೆರಳಿ ಯತ್ನಾಳ್​ ಅವರ ಆರೋಗ್ಯವನ್ನು ವಿಚಾರಿಸಿದರು. ಯತ್ನಾಳ್​ ಆರೋಗ್ಗೆ ಸ್ಥೀರವಾಗಿದ್ದು, ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರವೇಶದ್ವಾರದ ಗ್ಲಾಸ್ ಪೀಸ್ ಪೀಸ್: ಅಮಾನತು ಆದೇಶವನ್ನು ಖಂಡೀಸಿ ಪ್ರತಿಪಕ್ಷ ಸದಸ್ಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. ಸ್ಪೀಕರ್ ಚೇಂಬರ್​​​ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮಾರ್ಷಲ್​ಗಳು ಮಧ್ಯಪ್ರವೇಶಿಸಿದರು. ಈ ವೇಳೆ, ವಿಧಾನಸಭೆ ಪ್ರವೇಶ ದ್ವಾರದ ಬಳಿ ಮಾರ್ಷಲ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ನೂಕು ನುಗ್ಗಲು ವೇಳೆ ವಿಧಾನಸಭೆ ಪ್ರವೇಶ ದ್ವಾರದ ಗ್ಲಾಸ್ ಬಾಗಿಲು ಪುಡಿ ಪುಡಿಯಾಯಿತು.

ಕಲಾಪ ರಣಾಂಗಣ: ಇದಕ್ಕೂ ಮುನ್ನ, ಭೋಜನ‌ ವಿರಾಮದ ಬಳಿಕ ವಿಧಾನಸಭೆ ಕಲಾಪ ರಣಾಂಗಣವಾಗಿ ಮಾರ್ಪಟ್ಟಿತು. ಅಮಾನತಾದ 10 ಶಾಸಕರಾದ ಅಶ್ವತ್ಥನಾರಾಯಣ್, ಅರವಿಂದ ಬೆಲ್ಲದ್, ವೇದ ವ್ಯಾಸ್ ಕಾಮತ್, ಆರಗ ಜ್ಞಾನೇಂದ್ರ, ಧೀರಜ್ ಮುನಿರಾಜು, ಆರ್.ಅಶೋಕ್​ರನ್ನು ಮಾರ್ಷಲ್​ಗಳು ಹರಸಾಹಸ ಪಟ್ಟು ಸದನದಿಂದ ಹೊತ್ತೊಯ್ದು, ಹೊರಗೆ ಕಳುಹಿಸಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ. ವೀರೇಂದ್ರಗೆ ಸೇರಿದ ಕೆಜಿಗಟ್ಟಲೇ ಚಿನ್ನ, ಐಷಾರಾಮಿ ಕಾರುಗಳು ಸೇರಿ 100 ಕೋಟಿ ರೂ. ಗೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ

Spread the loveಶಾಸಕ ಕೆ.ಸಿ. ವೀರೇಂದ್ರಗೆ ಸೇರಿದ ಕೆಜಿಗಟ್ಟಲೇ ಚಿನ್ನ, ಐಷಾರಾಮಿ ಕಾರುಗಳು ಸೇರಿ 100 ಕೋಟಿ ರೂ. ಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ