ಕಾರವಾರ: ಕಾರವಾರ-ಗೋವಾ ಗಡಿ ಭಾಗದಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಗೋವಾದಿಂದ ಕಾರವಾರಕ್ಕೆ ಸಾಗಿಸಲು ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಖಚಿತ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಗುರುವಾರ ಮುಂಜಾನೆ ಸುಮಾರು 6:30ರ ಹೊತ್ತಿಗೆ ಕಾರವಾರ ಉಪ ವಿಭಾಗದ ಅಧಿಕಾರಿಗಳು …
Read More »Daily Archives: ಏಪ್ರಿಲ್ 7, 2026
ಇಸ್ರೇಲ್, ಅಮೇರಿಕಾ ಹಾಗೂ ಇರಾನ್ ಯುದ್ಧ ಹಿನ್ನಲೆ, ಧಾರವಾಡದಲ್ಲಿ ಕಟ್ಟಿಗೆ ಸೌದೆ ಗೆ ಹೆಚ್ಚುದ ಡಿಮ್ಯಾಂಡ್ …
ಅಮೇರಿಕ ಇಸ್ರೇಲ್ ಇರಾನ್ ಯುದ್ಧ 38ನೇಯ ದಿನಕ್ಕೆ ಕಾಲಿಟ್ಟಿದ್ದು, ಇದರ ಪರಿಣಾಮ ಭಾರತದಲ್ಲಿ ಎಲ್ ಪಿ ಜಿ ಬಳಕೆದಾರರ ಮೇಲೆ ಬೀಳುತ್ತಿದೆ. ಯುದ್ಧದಿಂದ ಎಲ್ ಪಿ ಜಿ ಅಭಾವತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಧಾರವಾಡದಲ್ಲಿ ಸೌದೆ ಹಾಗೂ ಕಟ್ಟಿಗೆಗೆ ಫುಲ್ ಡಿಮ್ಯಾಂಡ್ ಉಂಟಾಗಿದೆ. ಹೌದು,… ಎಲ್ ಪಿ ಜಿ ಅಭಾತೆಯಿಂದಾಗಿ ಈಗ ಧಾರವಾಡದಲ್ಲಿ ಹೋಟೆಲ್ ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಮನೆಗಳಿಗೂ ಜನ ಈಗ ಸೌದೆ ಕಟ್ಟಿಗೆ ಒಲೆಯ ಕಡೆಗೆ ಮುಖ …
Read More »Love Jihadಗೆ ಹೊಸ ರೂಪ ಕೊಟ್ಟ ಸಮೀರ್ ಫ್ಯಾಮಿಲಿ! ಡೌಟೇ ಬರದಂತೆ ಮನೆಯಲ್ಲಿ ಹಿಂದೂ ದೇವರ ಪೂಜೆ
ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾನ ಕಾ*ಮಕಾಂಡಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಇದಾಗಲೇ ಆತನನ್ನು ನಂಬಿ ಹಲವಾರು ಬಾರಿ ಗರ್ಭಪಾತ ಮಾಡಿಸಿಕೊಂಡ ಯುವತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಸಮೀರ್ಗಳು ಅದೆಷ್ಟು ಮಂದಿ ಅಡಗಿಕುಳಿತಿದ್ದಾರೋ ಎನ್ನುವ ಬಗ್ಗೆ ಕರ್ನಾಟಕದ ಪೊಲೀಸರು ತನಿಖೆ ಮಾಡಬೇಕಿದೆಯಷ್ಟೇ. ಎಲ್ಲರಂತಲ್ಲ ನನ್ನ ಸಮೀರಾ ಎಂದು ತುಂಡುಡುಗೆ ತೊಟ್ಟು ಆತನ ಜೊತೆ ಈಜುಕೊಳದಲ್ಲಿ, ಅಕ್ಕ-ಪಕ್ಕ ನಿಂತು. ಇನ್ನೆಲ್ಲೋ ನಿಂತು ಫೋಟೋಗೇ ಪೋಸ್ ಕೊಟ್ಟ ಹಿಂದೂ ಹುಡುಗಿಯರು …
Read More »ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಲಿಂಗೈಕ್ಯ
ಬೆಳಗಾವಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದ ಧ್ರುವತಾರೆ ಅಸ್ತಮಿಸಿದೆ. ಬಸವ ಪಥದಲ್ಲಿ ನಡೆದು, ಅಕ್ಕನ ಬಳಗ ಹಾಗೂ ಲಿಂಗಾಯತ ಸಂಘಟನೆಗಳ ಮೂಲಕ ಮನೆಮಾತಾಗಿದ್ದ ಶರಣೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ನಿಧನರಾದರು. ಬೆಳಗಾವಿಯ ಹಿರಿಯ ಸಮಾಜ ಸೇವಕಿ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ವಿಶ್ವೇಶ್ವರಯ್ಯ ಪ್ರಶಸ್ತಿ’ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ಮಧ್ಯಾನ್ಹ ಲಿಂಗೈಕ್ಯರಾಗಿದ್ದಾರೆ. ಮಹಾಲಕ್ಷ್ಮಿ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಬಸವ ಸಮಿತಿಯ ಅಕ್ಕನ ಬಳಗದ …
Read More »ರಾಜ್ಯದಲ್ಲಿ ಅಂಗನವಾಡಿಗಳಿಗೆ ಕಳಪೆಯ ಆಹಾರ ಪೂರೈಕೆ, ತಹಶೀಲ್ದಾರ್ ಮಲ್ಲೇಶ್ ನೇತೃತ್ವದಲ್ಲಿ FSSI ಅಧಿಕಾರಿಗಳ ತಂಡದಿಂದ ರಿಯಾಲಿಟಿ ಚೆಕ್.
ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ ವರದಿ ಮಾಡ್ತಿದ್ದಂತೆ ಎಚ್ಚತ್ತ ಅಧಿಕಾರಿಗಳು.. ರಿಯಾಲಿಟಿ ಚೆಕ್ ಮಾಡ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ FSSI ಅಧಿಕಾರಿ, ರಿಯಾಲಿಟಿ ಚೆಕ್ ಬಗ್ಗೆ ತಹಶೀಲ್ದಾರ್ ಮಲ್ಲೇಶ್ ಅವರಿಗೆ ಮಾಹಿತಿ, ಫುಡ್ ಸೇಫ್ಟಿ ಆಫೀಸರ್ ನಾಗೇಶ್ ಹಾಗೂ ಎಸಿಡಿಪಿಓ ನಾಗೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ..! ಹುಳು, ಕಸ ಮಿಶ್ರಿತ ಅಕ್ಕಿಯ ಮೂಟೆಗಳು, ಆಹಾರ ಪದಾರ್ಥಗಳ ಗುಣಮಟ್ಟ ನೋಡಿ ಅಧಿಕಾರಿಗಳೇ ಶಾಕ್, ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಿಸುವ ಆಹಾರ ಪದಾರ್ಥಗಳು.. …
Read More »ಬೆಳಗಾವಿ ಜೆಎನ್‌ಎಂಸಿ ಆವರಣದಲ್ಲಿ ತಂಬಾಕು ನಿಯಂತ್ರಣ ಕೋಶದ ‘ಸರ್ಜಿಕಲ್ ಸ್ಟ್ರೈಕ್’: 40 ಪ್ರಕರಣ ದಾಖಲು!
ಬೆಳಗಾವಿಯ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿವೆ. ಕೋಟ್ಪಾ (COTPA) ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಗುಡುಗಿರುವ ಅಧಿಕಾರಿಗಳು, ಸ್ಥಳದಲ್ಲೇ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ನಗರದ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕೋಟ್ಪಾ-2003 ಕಾಯ್ದೆಯಡಿ ದಿಢೀರ್ ದಾಳಿ ನಡೆಸಲಾಯಿತು. ಜಿಲ್ಲಾ ಜಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ …
Read More »ಸಾವಿನಲ್ಲಿಯೂ ಒಂದಾದ ಗಂಡ, ಹೆಂಡತಿ,ಬೆಳಗಾವಿ ಜಿಲ್ಲೆಯಲ್ಲಿ ಹ್ರದಯವಿದ್ರಾವಕ ಘಟನೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಅವರ ಪತಿ ಕರೆಪ್ಪ …
Read More »
Laxmi News 24×7