ಶ್ರೀ ರೇಣುಕಾ ಯಲ್ಲಮ್ಮನ ಸನ್ನಿಧಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ ಎಂಬ ನಿಖರ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಗುಡ್ಡ ಪ್ರದೇಶದ ವಿವಿಧ ಸ್ಥಳಗಳಲ್ಲಿ ಸಮನ್ವಯಿತ ಕಾರ್ಯಾಚರಣೆ ಕೈಗೊಂಡು, ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಕ್ರಮ ಸಾರಾಯಿ ಮತ್ತು ಸಂಬಂಧಿತ ಸಾಮಗ್ರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ಆರೋಪಿಗಳ ವಿರುದ್ಧ ಸಂಬಂಧಿತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು …
Read More »Daily Archives: ಏಪ್ರಿಲ್ 1, 2026
ಬೆಳಗಾವಿ ಹಾಲು ಸಂಘಕ್ಕೆ 12.59 ಕೋಟಿ ರೂ. ಲಾಭ, ಬೆಳಗಾವಿಗೆ ಮೆಗಾ ಡೈರಿ: ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ (ಕೆಎಂಎಫ್) 2025-26 ಆರ್ಥಿಕ ವರ್ಷದಲ್ಲಿ 12 ಕೋಟಿ ರೂ. 59 ಲಕ್ಷ ನಿಕರಿ ಲಾಭ ಗಳಿಸಿದ್ದು, 510 ಕೋಟಿ ರೂ. ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಮತ್ತು ಬೆಳಗಾವಿಗೆ ಮೆಗಾ ಡೈರಿ ನಿರ್ಮಾಣ ಮಾಡಲು ಈಗಾಗಲೇ ಒಂದು ಯೋಜನೆ ರೂಪಿಸಿದೆ ಎಂದು ಬೆಮುಲ್ ಅಧ್ಯಕ್ಷ, ಶಾಸಕಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ …
Read More »ಯಮಕನಮರಡಿ ಬಳಿ ದುರಂತ – 6 ಯುವಕರು ಈಜಲು ಹೋಗಿ 2 ಜನರ ದುರ್ಘಟನೆ ಮರಣ
ಯಮಕನಮರಡಿ ಸಮೀಪದ ಸಣಿಪ್ ಪ್ರದೇಶದಲ್ಲಿರುವ ಹೊಳೆಗೆ ಈಜಲು ತೆರಳಿದ್ದ 6 ಯುವಕರಲ್ಲಿ ಇಬ್ಬರು ದುರ್ಘಟನೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಉಳಿದ 4 ಯುವಕರು ಅತೀವ ಕಷ್ಟಪಟ್ಟು ತಮ್ಮನ್ನು ತಾವು ರಕ್ಷಿಸಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ. ಮಾಹಿತಿಯ ಪ್ರಕಾರ, ಯುವಕರು ಸ್ನೇಹಿತರಾಗಿ ಸೇರಿಕೊಂಡು ಹೊಳೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ನೀರಿನ ಆಳ ಹಾಗೂ ಪ್ರವಾಹದ ತೀವ್ರತೆ ಹೆಚ್ಚಿರುವುದರಿಂದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಮತ್ತು ರಕ್ಷಣಾ ತಂಡ ತಕ್ಷಣ …
Read More »ಹುಕ್ಕೇರಿಯಲ್ಲಿ ಬೀದಿ ನಾಯಿಗಳ ರಕ್ಕಸ ದಾಳಿ: ರೈತ ಬಸವರಾಜ ಸ್ಥಿತಿ ಗಂಭೀರ, ಗ್ರಾ.ಪಂ ವಿರುದ್ಧ ಜನರ ಕಿಡಿ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ರೈತನೊಬ್ಬನ ಮೇಲೆ ಏಳೆಂಟು ನಾಯಿಗಳು ಭೀಕರವಾಗಿ ದಾಳಿ ಮಾಡಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಈಗ ರಸ್ತೆಗೆ ಇಳಿಯಲೂ ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. \ಹುಕ್ಕೇರಿ ತಾಲೂಕಿನ ಕುಲ್ಲೋಳಹಟ್ಟಿ ಗ್ರಾಮದಲ್ಲಿ ಮಂಗಳವಾರ ಭೀಕರ ಘಟನೆಯೊಂದು ಸಂಭವಿಸಿದೆ. ಎಂದಿನಂತೆ ಬೈಕ್ ಮೇಲೆ ಜಮೀನು ಕೆಲಸಕ್ಕೆ ಹೊರಟಿದ್ದ ಬಸವರಾಜ ಎಂಬುವವರ ಮೇಲೆ ಏಕಾಏಕಿ ಏಳೆಂಟು ಬೀದಿ ನಾಯಿಗಳು ಮುಗಿಬಿದ್ದಿವೆ. ನಾಯಿಗಳ ಹಿಂಡು ಬಸವರಾಜ ಅವರ …
Read More »ಬಾಗಲಕೋಟೆ ರಣಕಣದಲ್ಲಿ ‘ಕುರಿಗಾಯಿ’ ಕಲಿ: ಸಿದ್ದರಾಮಯ್ಯಗೆ ‘ಟಗರು’ ಗಿಫ್ಟ್ ನೀಡಿದ ಅಭಿಮಾನಿಗಳು!
ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಣದಲ್ಲಿ ಇಂದು ವಿಶೇಷ ದೃಶ್ಯವೊಂದು ಕಂಡುಬಂದಿದೆ. ಮುಗಳೊಳ್ಳಿ ಗ್ರಾಮದಲ್ಲಿ ಎರಡನೇ ದಿನದ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ. ಬಾಗಲಕೋಟೆ ಉಪಸಮರದ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಮುಗಳೊಳ್ಳಿ ಗ್ರಾಮದ ವೇದಿಕೆಯಲ್ಲಿ ಅವರಿಗೆ ಗ್ರಾಮಸ್ಥರು ‘ಟಗರು’ ಉಡುಗೊರೆ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಕಂಬಳಿ ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದ ಬೆನ್ನಲ್ಲೇ ಸಿದ್ದರಾಮಯ್ಯನವರ ಆಪ್ತ ಗುರುತಾಗಿರುವ …
Read More »ಅಂಗನವಾಡಿ ಕಾರ್ಯಕರ್ತೆಯರ ಬೇಸಿಗೆ ರಜೆ ಕಡಿತಕ್ಕೆ ಆಕ್ರೋಶ: ಒಂದು ತಿಂಗಳ ರಜೆಗಾಗಿ ಬೆಳಗಾವಿ ತಾಲೂಕು ಸಮಿತಿ ಆಗ್ರಹ
ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಬಾರಿ ಬೇಸಿಗೆ ರಜೆ ಕಡಿತಗೊಳಿಸಿರುವ ಸರ್ಕಾರದ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಪೂರ್ಣ ಒಂದು ತಿಂಗಳ ರಜೆ ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ತಾಲೂಕು ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಗ್ರಹಿಸಿದೆ. ಬೆಳಗಾವಿ ತಾಲೂಕಿನ ಅಂಗನವಾಡಿ ನೌಕರರ ಸಂಘ (CITU) ಸರ್ಕಾರಕ್ಕೆ ಪ್ರಬಲ ಒತ್ತಾಯವೊಂದನ್ನು ಮಂಡಿಸಿದೆ. 2025ನೇ ಸಾಲಿನಲ್ಲಿ ನೀಡಲಾಗಿದ್ದ ಒಂದು ತಿಂಗಳ ಪೂರ್ಣ ಬೇಸಿಗೆ ರಜೆಯನ್ನು …
Read More »ಧಾರವಾಡದ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಅಧಿಕಾರಿಗಳಿಗೆ ಶಾಸಕ ವಿನಯ್ ಕುಲಕರ್ಣಿ ತರಾಟೆ
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಕೆಂಡಾಮಂಡಲವಾಗಿದ್ದಾರೆ. ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ ಶಾಸಕರು, ಇಲಾಖೆಯ ನಿರ್ಲಕ್ಷ್ಯಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಧಾರವಾಡದಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಯ ವೈಫಲ್ಯಗಳು ಅನಾವರಣಗೊಂಡವು. ಹಳ್ಳಿ ಹಳ್ಳಿಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ನಿತ್ಯ ನೂರಾರು ದೂರುಗಳು …
Read More »ಮನೆಗಳ ಕರ ಸುಲಾತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಗವಾಡ ತಾಲೂಕ ಪ್ರಥಮ ಸ್ಥಾನ.
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 15 ತಾಲೂಕಿನ ತಾಲೂಕಾ ಪಂಚಾಯಿತಿಗಳ ಪೈಕಿ ಕಾಗವಾಡ ತಾಲೂಕ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿಗಳ ಮುಖಾಂತರ ಮನೆಗಳ ಕರ ವಸುಲಾತಿಎಲ್ಲಿ ಶೇಕಡಾ 122 ರಷ್ಟು ಸಾಧನೆ ಮಾಡಿ ಜಿಲ್ಲೆಯಲ್ಲಿ ಪುನ ಪ್ರಥಮ ಕ್ರಮಾಂಕ ಪಡೆದು ಸಾಧನೆ ಮಾಡಿದೆ. ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹಾಗೂ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಇವರ ಮಾರ್ಗದರ್ಶನದಲ್ಲಿ ಕಾಗವಾಡ ತಾಲೂಕ ಪಂಚಾಯತಿ …
Read More »ಮದುವೆಯಾಗಿ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತ
ಉಡುಪಿ : ಸಂಶಯದ ಸುಳಿಯಲ್ಲಿ ಯುವಕನ ಆತ್ಮಹತ್ಯೆ? ಮದುವೆಯಾಗಿ ಒಂದೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ ಸುದೀಪ್ ಶೆಟ್ಟಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದ ಘಟನೆ ಮೃತ ಸುದೀಪ್ ಮೂಲತಃ ನೆಲ್ಯಾಡಿ ನಿವಾಸಿ. ಮೃತನ ಪತ್ನಿಯ ವಿರುದ್ಧ ದೂರು ನೀಡಿದ ಸುದೀಪ್ ತಂದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸೊಸೆಯ ವಿರುದ್ಧವೇ ದೂರು ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸುದೀಪ್ ಹಾಗೂ ಸೌಮ್ಯ ಶೆಟ್ಟಿ ನಾಟಕ ಕಲಾವಿದೆ ಹಾಗೂ ಮೇಕಪ್ …
Read More »ಬೆಳಗಾವಿ-ಖಾನಾಪುರದಲ್ಲಿ ಅಕ್ರಮ ಗಣಿಗಾರಿಕೆ ದಂಧೆ: ಜಿಲ್ಲಾಧಿಕಾರಿಗೆ ರಾಜಕುಮಾರ ಟೋಪಣ್ಣವರ, ಸುಜೀತ್ ಮುಳಗುಂದ ದೂರು
ಖಾನಾಪುರ, ಬೆಳಗಾವಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವಂತೆ ಆಗ್ರಹಿಸಿ ಮಂಗಳವಾರ ರಾಜಕುಮಾರ ಟೋಪಣ್ಣವರ ಹಾಗೂ ಸುಜೀತ್ ಮುಳಗುಂದ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಾಕ್ಸೈಟ್, ಲೇಟರೈಟ್ ಮತ್ತು ಸಿಲಿಕಾ ಖನಿಜಗಳನ್ನು ವ್ಯಾಪಕವಾಗಿ ಅಕ್ರಮವಾಗಿ ತೆಗೆಯಲಾಗುತ್ತಿದೆ. ಬೆಳಗುಂಡಿ, ಬಕನೂರು, ಬೀಜಗರ್ಣಿ, ಗೋಳ್ಯಾಳಿ, ಅಮಟೆ, ಬೆಟಗೇರಿ, ಕಿಣಯೆ, ಇನಾಮ ಬಡಸ್ ಹಾಗೂ ಖಾನಾಪುರ ತಾಲ್ಲೂಕಿನ ತೋರಳಿ ಗ್ರಾಮಗಳಲ್ಲಿ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ. ರೈತರ ಅನುಮತಿ ಇಲ್ಲದೆ ಅವರ ಕೃಷಿಭೂಮಿಗಳಲ್ಲೇ ಗಣಿಗಾರಿಕೆ ನಡೆಸಲಾಗುತ್ತಿದ್ದು, …
Read More »
Laxmi News 24×7