ಬೆಳಗಾವಿ: ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಬೆಳಗಾವಿ ತಾಲೂಕಿನ ಚಚಡಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿಗರ ಆಗಮಿಸಿದ ಚಚಡಿ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದರು. ಗ್ರಾಮದಲ್ಲಿರೋ ಬಹುತೇಕ ಅಂಗಡಿಕಾರರು ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮ ಗ್ರಾಮದಲ್ಲಿರೋ ಕುಟುಂಬಗಳು ಬೀದಿಗೆ ಬುರುತ್ತಿವೆ. ಕುಟುಂಬಗಳ ಶಾಂತಿ, ನೆಮ್ಮದಿ ಹಾಳಾಗುತ್ತಿದೆ. ಗ್ರಾಮದಲ್ಲಿ ಆರೋಗ್ಯಕರ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಕುಡಿದುಬಂದು ನಮ್ಮ …
Read More »Daily Archives: ಮಾರ್ಚ್ 28, 2026
ಸ್ಮಾರಕಗಳು ಇತಿಹಾಸದ ಮೂಲ : ಹೊಸಕೇರಿ
ಬಾಗಲಕೋಟೆ : ಇತಿಹಾಸದ ಘಟನೆಗಳನ್ನು ಸ್ಮರಿಸುವುದು ಮುಖ್ಯ . ರಾಜರು ಸ್ಮರಣೆಗಾಗಿ ಕಟ್ಟಿದ ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕಲಾದಗಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸರೋಜಿನಿ ಹೊಸಕೇರಿ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಂದ ದತ್ತು ಗ್ರಾಮವಾದ ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧುಮಠದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ …
Read More »ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ: ಚರಂತಿಮಠ ಗೆಲುವಿಗೆ ಪೂರಕ ವಾತಾವರಣ
ಬಾಗಲಕೋಟೆ: ನಗರದ ಶಿವಾನಂದ ಜೀನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಅಮೀನಗಡ ಹಾಗೂ ಶಿರಗುಪ್ಪಿ ಭಾಗಗಳ ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಬಾಗಲಕೋಟ ಮತಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದರ ಜೊತೆಗೆ ಮುಳುಗಡೆ ಸಂತ್ರಸ್ತರಿಗೆ ಸಹಾಯ ಮಾಡಿರುವುದು ಗಮನಾರ್ಹವಾಗಿದೆ …
Read More »ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಚರಂತಿಮಠ
ಬಾಗಲಕೋಟೆ: ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಬಗ್ಗೆ ಮತದಾರರಿಗೆ ನಂಬಿಕೆ ಮತ್ತು ವಿಶ್ವಾಸ ಇದೆ. ಹೀಗಾಗಿ ಬಾಗಲಕೋಟೆ ಉಪ ಚುನಾವಣೆಯಲ್ಲಿ ಜನರು ಬಿಜೆಪಿಗೆ ಸ್ಪಷ್ಟ ಬೆಂಬಲ ನೀಡುವ ಮೂಲಕ ಗೆಲುವು ತಂದು ಕೊಡಲಿದ್ದಾರೆ ಎಂದು ಬಾಗಲಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಗರದ 5ನೇ ವಾರ್ಡ್ 7ನೇ ವಾರ್ಡ್, ಜೈನಪೇಟೆ, ಬಾದೋಡಗಿ ಚಾಳ, ಕುಂಬಾರ ಮಡುವು ಇತ್ಯಾದಿ ಪ್ರದೇಶಗಳಲ್ಲಿ ಬೆಳಗ್ಗೆ ಮನೆ …
Read More »ನುಡಿದಂತೆ ನಡೆದ ಕಾಂಗ್ರೆಸ್ ಬೆಂಬಲಿಸಿ
ಬಾಗಲಕೋಟೆ: ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳ ಮೂಲಕ ಜನ ಸಾಮಾನ್ಯರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಸಿಸುವAತೆ ಉಪ ಚುನಾವಣೆ ಅಭ್ಯರ್ಥಿ ಉಮೇಶ ಮೇಟಿ ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ಆಲೂರ, ಆಲೂರ ಎಲ್‌ಟಿ ಗ್ರಾಮದಲ್ಲಿ ಗುರುವಾರ ಪ್ರಚಾರ ಸಭೆ ನಡೆಸಿದ ಅವರು, ಗ್ರಾಮೀಣ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ನಮ್ಮ ತಂದೆ ದಿ.ಎಚ್.ವೈ.ಮೇಟಿ ಅವರು ಈ ಭಾಗದಲ್ಲಿ …
Read More »ಮಹಾಜನ ವರದಿಯೇ ಅಂತಿಮ ಎಂದು ನಿರ್ಣಯ ಕೈಗೊಳ್ಳಲು ಕನ್ನಡಪರ ಸಂಘಟನೆಗಳ ಒತ್ತಾಯ
ಬೆಳಗಾವಿ: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಮಹಾಜನ ವರದಿಯೇ ಅಂತಿಮ ಎಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್‌ಗೆ ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಪಾಲಿಕೆಯಲ್ಲಿ ಗುರುವಾರ ಕನ್ನಡ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹಣಮಂತ ಕೊಂಗಾಲಿ ಅವರನ್ನು ಸನ್ಮಾನಿಸಿ ಹಲವು ಬೇಡಿಕೆ ಒಳಗೊಂಡಿರುವ ಮನವಿ ಸಲ್ಲಿಸಿದರು. 2005 ಅಕ್ಟೋಬರ್ 10ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಮೇಯರ್, ಉಪಮೇಯರ್ ಅವರು ಪರಿಷತ್ …
Read More »ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ ಆಸ್ತಿ ಸಂಖ್ಯೆ (ಪಿಐಡಿ) ನೀಡಿ ಅಕ್ರಮ ಎಸಗಿರುವ ಮೂವರು ಅಧಿಕಾರಿ, ಕಟ್ಟಡ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು. ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದಲ್ಲಿ ಅನಧಿಕೃತ ಆಸ್ತಿಗಳಿಗೆ ಅಕ್ರಮವಾಗಿ ಪಿಐಡಿ ನೀಡುವ ಕೃತ್ಯ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕೂಡಲೇ ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು. ಆ …
Read More »SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ
ಬೆಂಗಳೂರು : ಕರ್ನಾಟಕದಲ್ಲಿ ಮಾರ್ಚ್ 30ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶಿಸಿದೆ. ಇನ್ನೊಂದೆಡೆ ಹಿಂದಿ ಪರೀಕ್ಷಾ ವಿಚಾರವಾಗಿ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳು ಹಿಂದಿ ಪರೀಕ್ಷೆ ಬರೆಯದೇ ಇದ್ದರೂ ಪಾಸ್ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಒಂದು ವೇಳೆ ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ …
Read More »ಮಾನಸಿಕ ಕಿರುಕುಳ ಆರೋಪ – ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ
ಚಿಕ್ಕಮಗಳೂರು: ಹೊಸ ಕಮಿಟಿಯವರು 2020ರ ಲೆಕ್ಕಾಚಾರ ಕೇಳಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಉಷಾ (45) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ 3 ಪುಟಗಳ ಡೆತ್ ನೋಟ್ ಬರೆದಿಟ್ಟು, 25 ನಿಮಿಷದ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. 2010ರಿಂದ ಉಷಾ ಹಾಲು ಉತ್ಪಾದಕರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದರು. ಹಾಲು ಉತ್ಪಾದಕರ …
Read More »ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದುರ್ಮರಣ
ರಾಯಚೂರು: ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕೊಸಗಿ ಮಂಡಲದ ಕಂದಕೂರು ಬಳಿ ನಡೆದಿದೆ. ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ದಾಸರಿ ಉಮಾವತಿ (35), ದಾಸರಿ ರತ್ನಮ್ಮ (26) ಮಹೇಶ (24) ಮತ್ತು ಶಿವಾನಂದ (28) ಮೃತ ದುರ್ದೈವಿಗಳು. ಸಂಬಂಧಿಕರ ಮದುವೆಗೆ ತೆರಳಿದ್ದವರು ಮಧ್ಯಾಹ್ನ ಸ್ನಾನಕ್ಕೆ ನದಿಗೆ ಇಳಿದಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ಆಂಧ್ರಪ್ರದೇಶ ಕರ್ನಾಟಕ ಗಡಿ ಭಾಗದ ರಾಜೊಳ್ಳಿಬಂಡಾ …
Read More »
Laxmi News 24×7