Breaking News

Daily Archives: ಮಾರ್ಚ್ 22, 2026

ಹೊಸ ಟ್ರ್ಯಾಕ್ಟರ್ ಖರೀದಿಸಿ ಮನೆಗೆ ತೆರಳುವಾಗ ಅಪಘಾತ: ವ್ಯಕ್ತಿ ಸಾವು

ಬೆಳಗಾವಿ: ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ ಖುಶಿಯಲ್ಲಿ ಮನೆಗೆ ತೆರಳುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸುಧಾಕರ ರಾವಸಾಹೇಬ ಕೊಂಡೆಕರ (47) ದಾವನ್ನಪ್ಪಿದ ವ್ಯಕ್ತಿ.  ಕೊಲ್ಲಾಪೂರ ಜಿಲ್ಲೆಯ ಕಾಗಲ್ ನಿಂದ ಹೊರ ಟ್ರ್ಯಾಕ್ಟರ್ ಖರಿದಿ ಮಾಡಿ ಮರಳಿ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮಕ್ಕೆ ಹಿಂತಿರಗುವಾಗ ಕಾರದಗಾ-ಭೋಜಕ್ರಾಸ ರಸ್ತೆಯ ಮೇಲೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆಯ  ತಗ್ಗಿನಲ್ಲಿ ಉರುಳು ಬಿದ್ದಿದೆ. ಈ ವೇಳೆ ಸುಧಾಕರ ರಾವಸಾಹೇಬ ಕೊಂಡೆಕರ ಸಾವನ್ನಪ್ಪಿದ್ದು,ಟ್ರ್ಯಾಕ್ಟರ್ …

Read More »

ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆ ಸಂಪರ್ಕ

ಬಾಗಲಕೋಟೆ: ಅಭಿವೃದ್ಧಿಗಾಗಿ ಬಾಗಲಕೋಟೆ ಜನ ಈ ಬಾರಿ ಬಿಜೆಪಿಗೆ ಮತ ನೀಡಲು ಸಿದ್ದರಾಗಿದ್ದು ಉಪಚುನಾವಣೆಯ ಸಮರಕ್ಕೆ ಬಿಜೆಪಿ ಸಂಘಟಿತವಾಗಿ ಸಜ್ಜಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹೇಳಿದರು. ಅವರು ನಗರದ 22,23, 15 ಮತ್ತು 2 ನೇ ವಾರ್ಡನಲ್ಲಿ ಉಪ ಚುನಾವಣಿ ನಿಮಿತ್ಯ ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆ ಸಂಪರ್ಕ ಮಾಡಿ ಮತಯಾಚನೆ ಮಾಡಿ ಮಾತನಾಡಿದ ಅವರು ಬಾಗಲಕೋಟೆ ಮತಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿದ್ದು, …

Read More »

ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿ 5 ಕೋಟಿ ರೂ. ಆಸ್ತಿ ಒಡೆಯ

ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್‌ ದಾಸಕರಿಯಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಶುಕ್ರವಾರ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 9ರಂದು ಉಪ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 23ರ ಸೋಮವಾರ ಪುನಃ ಬಿಜೆಪಿ ನಾಯಕರ ಜೊತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ದಾವಣಗೆರೆ ಬಿಜೆಪಿಯಲ್ಲಿ ಬಣ ರಾಜಕೀಯವಿದೆ ಎಂಬ ಆರೋಪಗಳ ನಡುವೆಯೇ ಮಾಜಿ ಸಚಿವ …

Read More »

ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ – 30 ಲಕ್ಷ ಪಡೆದು ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್

ಬಳ್ಳಾರಿ: ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಚಿನ್ನ ಕೊಡೋದಾಗಿ ವಂಚಿಸಿ, 30 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೂಡ್ಲಿಗಿಯ ಲಿಂಗನಹಳ್ಳಿ ಗ್ರಾಮದ ಸುರೇಶ್ ಹಾಗೂ ಸೋಮಣ್ಣ ಬಂಧಿತ ಆರೋಪಿಗಳು. ಚೆನ್ನೈ ಮೂಲದ ಗುತ್ತಿಗೆದಾರನಿಂದ 30 ಲಕ್ಷ ರೂ. ಪಡೆದು ಪರಾರಿಯಾಗಿದ್ದರು. ಆರೋಪಿಗಳು ಚೆನ್ನೈ ಮೂಲದ ಗುತ್ತಿಗೆದಾರ ಜಿ ಕುಮಾರ್ ಅವರಿಗೆ ಕಡಿಮೆ ಬೆಲೆಗೆ ಬಂಗಾರ ಕೊಡೋದಾಗಿ ಹೇಳಿದ್ದರು. ಅದರಂತೆ ಗುತ್ತಿಗೆದಾರನನ್ನು ಚೆನ್ನೈನಿಂದ ಕೂಡ್ಲಿಗಿಯ ಕ್ಯಾಸನಕೆರೆ …

Read More »

ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ!

ಬೆಳಗಾವಿ : ಜಿಲ್ಲೆಯಲ್ಲಿ ಸೈಬರ್ ವಂಚಕರು ವೃದ್ಧ ಉದ್ಯಮಿಯನ್ನು ಗುರಿಯಾಗಿಸಿಕೊಂಡು ₹15 ಕೋಟಿ ದೋಚಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಬೆಳಗಾವಿ ನಗರದ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ. ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ವಿಡಿಯೋ ಕರೆ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ ಎಂದು ಬೆದರಿಕೆ ಹಾಕಿ ಭಯ ಹುಟ್ಟಿಸಿದ್ದರು. ತನಿಖೆ ನಡೆಯುತ್ತಿದೆ ಎಂದು ಹೇಳಿ, ಹಣವನ್ನು ಸುರಕ್ಷತೆಯ ಹೆಸರಿನಲ್ಲಿ ಬೇರೆ ಖಾತೆಗೆ …

Read More »