Breaking News

Daily Archives: ಫೆಬ್ರವರಿ 22, 2026

ಸ್ಮಶಾನಕ್ಕೆ ಹೋಗಲು ಅಡ್ಡಿ; ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ

ರಾಮದುರ್ಗ: ತಾಲ್ಲೂಕಿನ ಲಿಂಗದಾಳ ಗ್ರಾಮದ ದಲಿತರಿಗೆ ಸ್ಮಶಾನ ಇದ್ದರೂ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದೇ ಸಮಸ್ಯೆಯಿಂದ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ಸಹಜ ಸ್ಥಿತಿಗೆ ಮರಳಿದೆ. ಲಿಂಗದಾಳ ಗ್ರಾಮದ ದಲಿತ ವ್ಯಕ್ತಿಯೊಬ್ಬರು ಶುಕ್ರವಾರ ನಿಧನರಾಗಿದ್ದರು. ಶನಿವಾರ ಶವಸಂಸ್ಕಾರಕ್ಕೆಂದು ಕೇರಿಯ ಜನ ಖಾಸಗಿಯವರ ಹೊಲದೊಳಗಿಂದ ದಾಟಿ ಹೋಗುವಾಗ ಹೊಲದ ಮಾಲೀಕರು ತಕರಾರು ಮಾಡಿದ್ದರು. ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, …

Read More »

ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪೌರಾಯುಕ್ತರಿಗೆ ಮನವಿ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಮುಖಂಡ ವಿಜಯ ಕುಮಾರ್ ಜಟ್ಟಪ್ಪ ನೇತೃತ್ವದಲ್ಲಿ ನಗರಸಭೆ ಕಚೇರಿಯಲ್ಲಿ ಪೌರಾಯುಕ್ತ ಪರಶುರಾಮ ಛಲವಾದಿ ಅವರಿಗೆ ಮನವಿ ಸಲ್ಲಿಸಲಾಯಿತು. 2020-21ರಿಂದಲೂ ಚಾಮರಾಜನಗರದಲ್ಲಿ ಸುಸಜ್ಜಿತ ವಿದ್ಯುತ್ ಚಾಲಿತ ಚಿತಾಗಾರ ನಿರ್ಮಾಣಕ್ಕೆ ಹೋರಾಟ ಮಾಡಲು ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಸಹಿತ ಎಲ್ಲರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. 2024-25ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಆಡಳಿತಾಧಿಕಾರಿಗಳು …

Read More »

ಬೆಳಗಾವಿ:  ರಾಯಣ್ಣನ ಪ್ರತಿಮೆ ಮೇಲೆ ಬಿದ್ದಿದ್ದು ಮಸಿಯಲ್ಲ ಮರದ ದ್ರವ

ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಈಚೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಎಸೆದಿದ್ದಾರೆ ಎಂಬ ಸಂಗತಿ ಈಗ ತಿರುವು ಪಡೆದಿದೆ. ನೈಜವಾಗಿ ಅಲ್ಲಿ ಯಾರೂ ಮಸಿ ಬಳಿದು ಅವಮಾನ ಮಾಡಿಲ್ಲ. ಬದಲಾಗಿ, ಮರದಿಂದ ಸುರಿದ ದ್ರಾವಣವು ಪ್ರತಿಮೆ ಮೇಲೆ ಬಿದ್ದಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ಸ್ಪಷ್ಟಪಡಿಸಿದ್ದಾರೆ. ಗುರುವಾರ ರಾತ್ರಿ ಪ್ರತಿಮೆ ಮೇಲೆ ದ್ರವರೂಪದ ವಸ್ತು ಬಿದ್ದಿತ್ತು. ಅದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ …

Read More »

ವಿಶೇಷ ಚೇತನರಿಗೆ ವಿಶೇಷ ಯೋಜನೆ ಪ್ರಸ್ತಾವನೆ ಸಲ್ಲಿಕೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಬೆಳಗಾವಿ: ಮುಂಬರುವ ಬಜೆಟ್‌ನಲ್ಲಿ ವಿಶೇಷ ಚೇತನರಿಗೆ ವಿಶೇಷ ಯೋಜನೆಗಳನ್ನು ನೀಡುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ 2025ರ ಪ್ರಯುಕ್ತ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ 2025-26 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸರ್ಕಾರ ಸಮಾಜದ ಭಾಗವಾಗಿ ವಿಕಲಚೇತನರನ್ನು ತೆಗೆದುಕೊಂಡು ಹೋಗಲಿದೆ. ಯಾರನ್ನೂ …

Read More »

ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ನತ್ತ : ಜಾರಕಿಹೊಳಿ

ನವದೆಹಲಿ : ಸದ್ದಿಲ್ಲದೆ ದೆಹಲಿಗೆ ತೆರಳಿ ಎರಡು ದಿನ ಅಲ್ಲೇ ಬೀಡು ಬಿಟ್ಟು, ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಟೀಮ್‌ಗೆ ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸುವ ಭರವಸೆ ಹೈಕಮಾಂಡ್‌ನಿಂದ ದೊರಕಿದೆ. ಮಾಜಿ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಪರಿಶಿಷ್ಟ ಪಂಗಡದ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದ ಸತೀಶ್‌ ಜಾರಕಿಹೊಳಿ ತಂಡ ಶನಿವಾರ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದ …

Read More »