Breaking News

Yearly Archives: 2025

ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ; ಪಕ್ಷದ ತೀರ್ಮಾನವೇ ಅಂತಿಮ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ನಾವು 2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಅಂತಾ ಈ ಮುಂಚೆಯೇ ಹೇಳಿದ್ದೇವೆ. ಅದನ್ನು ಪಕ್ಷ ತೀರ್ಮಾನ ಮಾಡಬೇಕು. ಇನ್ನು ಯತೀಂದ್ರ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಕಾಕತಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ …

Read More »

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿಯಲ್ಲಿ ಇಂದು ಕಿತ್ತೂರು ಉತ್ಸವ–2025 ಹಾಗೂ 201ನೇ ವಿಜಯೋತ್ಸವದ ಸಂಭ್ರಮಾಚರಣೆಗೆ ಅದ್ದೂರಿಯಾಗಿ ಚಾಲನೆ

ವೀರನಾರಿಯ ಧೈರ್ಯ, ತ್ಯಾಗ ಮತ್ತು ನಾಡಪ್ರೀತಿಯ ಸಂಕೇತವಾದ ರಾಣಿ ಕಿತ್ತೂರ ಚನ್ನಮ್ಮನ ಸ್ಮರಣಾರ್ಥವಾಗಿ, ಅವರ ಹುಟ್ಟೂರಾದ ನಮ್ಮ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿಯಲ್ಲಿ ಇಂದು ಕಿತ್ತೂರು ಉತ್ಸವ–2025 ಹಾಗೂ 201ನೇ ವಿಜಯೋತ್ಸವದ ಸಂಭ್ರಮಾಚರಣೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕಾಕತಿಯು ರಾಣಿ ಚೆನ್ನಮ್ಮನ ಇತಿಹಾಸದ ಪಾವನ ನೆಲವಾಗಿರುವ ಹಿನ್ನಲೆಯಲ್ಲಿ, ಪ್ರತಿವರ್ಷದಂತೆ ಕಿತ್ತೂರು ಉತ್ಸವದ ಸಾಂಕೇತಿಕ ಆರಂಭ ಇಲ್ಲಿ ನಡೆಯುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಬಾರಿ ಉತ್ಸವವನ್ನು ರಾಣಿ ಚನ್ನಮ್ಮಳ ಶೌರ್ಯ, …

Read More »

ಅಥಣಿ,ಅಕ್ಟೋಬರ್ 26ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಗೆ ಸಜ್ಜು

ಅಥಣಿ,ಅಕ್ಟೋಬರ್ 26ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಗೆ ಸಜ್ಜು — ಸ್ವಾಭಿಮಾನಿ ರೈತ ಪ್ಯಾನೆಲ್ ಮತಯಾಚನೆಗೆ ವೇಗ ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯು ಅಕ್ಟೋಬರ್ 26, 2025ರಂದು ನಡೆಯಲಿದ್ದು, ಚುನಾವಣೆಯನ್ನು ಮುನ್ನೆಚ್ಚರಿಕೆಯಿಂದ ಸ್ವಾಭಿಮಾನಿ ರೈತ ಪ್ಯಾನೆಲ್ ಸಜ್ಜಾಗಿದೆ. ಪ್ಯಾನೆಲ್‌ನ ನಾಯಕರು ಹಾಗೂ ಬೆಂಬಲಿಗರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದು, “ರೈತರ ಹಿತದೃಷ್ಟಿಯಿಂದ ನಿಷ್ಠಾವಂತ ಆಡಳಿತಕ್ಕಾಗಿ ಸ್ವಾಭಿಮಾನಿ ರೈತ ಪ್ಯಾನೆಲ್‌ಗೆ ಮತ ನೀಡಿ ಆಶೀರ್ವಾದ …

Read More »

ಸಿದ್ದರಾಮಯ್ಯರ ಸ್ಥಾನ ತುಂಬುವ ಶಕ್ತಿ ಸತೀಶ್​ ಜಾರಕಿಹೊಳಿ‌ ಅವರಿಗಿದೆ ;ಡಾ.ಯತೀಂದ್ರ ಸಿದ್ದರಾಮಯ್ಯ

ಚಿಕ್ಕೋಡಿ(ಬೆಳಗಾವಿ): “ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ” ಎಂದು ವಿಧಾನ ಪರಿಷತ್​ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. “ನಮ್ಮ ತಂದೆಯವರು ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. ಈ ಸಮಯದಲ್ಲಿ ವೈಚಾರಿಕವಾಗಿ, ಪ್ರಗತಿಪರವಾದ ಸಿದ್ಧಾಂತ ಇಟ್ಟುಕೊಂಡಿರುವ ಅವರಿಗೆ ಮಾರ್ಗದರ್ಶನ ನೀಡಲು ನಾಯಕರು ಬೇಕು. ಆ ಜವಾಬ್ದಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ವಹಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಮೇಲೆ ನಂಬಿಕೆ …

Read More »

ಕರಾವಳಿಯಲ್ಲಿ ಜನಪದ ದೀಪಾವಳಿ: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ ಆಚರಣೆ

ಕಾಪು: ತುಳುನಾಡು ಹಲವಾರು ಆಚರಣೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಅದರದ್ದೇ ಆದ ಮಹತ್ವವಿದೆ. ತುಳುವರ ಹಲವಾರು ಜಾನಪದ ಆಚರಣೆಗಳಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿಯಂದು ನಡೆಸುವ ಮುಳ್ಳಮುಟ್ಟೆ ಆಚರಣೆಯೂ ಒಂದು. ಕಾಪು ತಾಲೂಕಿನ ವಿವಿಧೆಡೆ ದೀಪಾವಳಿ ಪ್ರಯುಕ್ತ ಮುಂಜಾನೆ ಮುಳ್ಳಮುಟ್ಟೆ ಸಂಭ್ರಮಾಚರಣೆ ನಡೆಯುತ್ತದೆ. ವಿಶೇಷವಾಗಿ ಕೊಪ್ಪಲಂಗಡಿ, ಮಲ್ಲಾರು, ಮಜೂರು, ಉಳಿಯಾರು, ಕರಂದಾಡಿ, ಇನ್ನಂಜೆ, ಕಲ್ಯಾಲು, ಪಾಂಗಾಳ, ಕಟಪಾಡಿ, ಮಣಿಪುರ, ಪಡುಬೆಳ್ಳೆ, ಬೆಳಪು ಪರಿಸರದಲ್ಲಿ …

Read More »

ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದ ಮರ ಇದೇ ನೋಡಿ

ಬೆಳಗಾವಿ: ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಹಿಡಿದು ಗಲ್ಲಿಗೇರಿಸಲಾಗಿತ್ತು. ಅವರ ಜೊತೆಗೆ ಇನ್ನೂ ಆರು ಜನರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಮತ್ತೆ ಆರು ಮಂದಿ ಜೀವಾವಧಿ(ಕರಿನೀರಿನ) ಶಿಕ್ಷೆಗೆ ಒಳಗಾಗಿದ್ದರು. ಕಿತ್ತೂರು ನಾಡಿನ ಈ ಹುತಾತ್ಮ ವೀರರು ಬೆಳಕಿಗೆ ಬಾರದೇ ಇರುವುದು ಇತಿಹಾಸಪ್ರಿಯರ ನೋವಿಗೆ ಕಾರಣವಾಗಿದೆ. ಕಿತ್ತೂರು ಪುಟ್ಟ ಸಂಸ್ಥಾನ ಆದರೂ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಆಂಗ್ಲರಿಗೆ ಮೊಟ್ಟ ಮೊದಲ ಬಾರಿ ಸೋಲಿನ …

Read More »

ಭಾರಿ ಮಳೆಗೆ ಬೆಳೆ ನಾಶ; ಕೆರೆಯಲ್ಲಿ ಮುಳುಗಿ ಮೂವರು ಸಾವು

ತುಮಕೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇನ್ನೊಂದೆಡೆ, ಹಳ್ಳ-ಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿದು ಹೋಗುತ್ತಿರುವುದರಿಂದ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಬ್ಬಿ, ತಿಪಟೂರು, ತುರುವೇಕೆರೆ ಸೇರಿದಂತೆ ಇತರೆ ಭಾಗದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಕೆರೆಗಳೆಲ್ಲ ಭರ್ತಿಯಾಗಿದ್ದು, ನೀರು ತುಂಬಿ ಹೊರ ಹೊರಹೋಗುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ನೀರಿನ ರಭಸಕ್ಕೆ ತೇಲಿ ಹೋದ ಕಾರು: ಗುಬ್ಬಿ ತಾಲೂಕಿನ ಭಾಗದಲ್ಲಿ ಹಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ …

Read More »

ಹೋರಿ ತಿವಿದು ವೃದ್ಧ ಸಾವು, ಇಬ್ಬರು ಗಂಭೀರ

ಹಾವೇರಿ: ಕೊಬ್ಬರಿ ಹೋರಿ ತಿವಿದು ಓರ್ವ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ಇಂದು ನಡೆಯಿತು. ಮೃತರನ್ನು 70 ವರ್ಷದ ಚಂದ್ರಶೇಖರ್​​​ ಕೊಡಿಹಳ್ಳಿ ಎಂದು ಗುರುತಿಸಲಾಗಿದೆ. ಚಂದ್ರಶೇಖರ ಕೋಡಹಳ್ಳಿ ಅವರು ಹಾವೇರಿಯ ದಾನೇಶ್ವರಿನಗರದ ನಿವಾಸಿ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್​ಗೆ ರವಾನಿಸಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಿ ವಾಪಸ್ ಮನೆಗೆ ಹೋಗುತ್ತಿದ್ದ ವೇಳೆ, ಹಿಂದಿನಿಂದ ಹೋರಿ ತಿವಿದು ಘಟನೆ ನಡೆದಿದೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ …

Read More »

ಭಾವಪೂರ್ಣ ಶ್ರದ್ಧಾಂಜಲಿ ಆತ್ಮೀಯ ವಿರೂಪಾಕ್ಷ ಕವಟಗಿ ಇನ್ನಿಲ್ಲ

ಭಾವಪೂರ್ಣ ಶ್ರದ್ಧಾಂಜಲಿ ಆತ್ಮೀಯ ಗೆಳೆಯ, ವಿರೂಪಾಕ್ಷ ಕವಟಗಿ ಇನ್ನಿಲ್ಲ ಮೂಡಲಗಿ ಪಟ್ಟಣದ ಬಳಿ ಅಪಘಾತಕ್ಕೀಡಾಗಿ, ಕಳೆದ ಒಂದು ತಿಂಗಳಿನಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕೋಡಿಯ ಪತ್ರಕರ್ತ ಮಿತ್ರ ವಿರೂಪಾಕ್ಷ ಕವಟಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂಬ ಸುದ್ದಿ ಅತ್ಯಂತ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ಪತ್ರಿಕೋದ್ಯಮ ಲೋಕಕ್ಕೆ ಹಾಗೂ ಅವರ ಸ್ನೇಹಿತರ ಬಳಗಕ್ಕೆ ತುಂಬಲಾರದ ನಷ್ಟ. ಬದುಕು ಮತ್ತು ವ್ಯಕ್ತಿತ್ವ: ವಿರೂಪಾಕ್ಷ ಕವಟಗಿ ಅವರು ತಮ್ಮ …

Read More »

ದೀಪಾವಳಿ ಹಬ್ಬದ ನಿಮಿತ್ತ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಅಭಿಮಾನಿಗಳಿಂದ ರಾಮದುರ್ಗ, ಸವದತ್ತಿ ಯರಗಟ್ಟಿ ಗೋಕಾಕ, ಮೂಡಲಗಿ, ತಾಲೂಕಿನಲ್ಲಿ ಸಿಹಿ ಹಂಚಿದರು.

ದೀಪಾವಳಿ ಹಬ್ಬದ ನಿಮಿತ್ತ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಅಭಿಮಾನಿಗಳಿಂದ ರಾಮದುರ್ಗ, ಸವದತ್ತಿ ಯರಗಟ್ಟಿ ಗೋಕಾಕ, ಮೂಡಲಗಿ, ತಾಲೂಕಿನಲ್ಲಿ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿಗಳು, ಸ್ನೇಹಿತರು ಉಪಸ್ಥಿತರಿದ್ದರು

Read More »