Breaking News

Yearly Archives: 2025

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

ಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋಎಂಟ್ರಾಲಾಜಿ ತಜ್ಞವೈದ್ಯರ ತಂಡವು ಯಶಸ್ವಿಯಾಗಿದೆ. ತಂದೆಯನ್ನು ಉಳಿಸಿಕೊಳ್ಳುವ ಛಲತೊಟ್ಟಿದ್ದ ಮಗ ಲಿವರ್ ದಾನ ಮಾಡಿ ತಂದೆ-ಮಗನ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ರಾಯಬಾಗ ತಾಲೂಕಿನ 56 ವರ್ಷದ ರೈತನ ಲಿವರ್ ಸಂಪೂರ್ಣವಾಗಿ ಕಾರ್ಯಕ್ಷಮತೆ ಕಳೆದುಕೊಂಡಿತ್ತು. ಲಿವರ್ …

Read More »

ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ!

ಬೆಂಗಳೂರು, (ಜೂನ್ 29): ಯುವತಿಯೋರ್ವಳು ತನ್ನ ಮನೆಯಲ್ಲಿದ್ದ ಸಾಕು ನಾಯಿಯನ್ನು (pet dog) ಕೊಂದು ಅದರ ಜೊತೆ ನಾಲ್ಕು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ  (Bengaluru) ನಡೆದಿದೆ. ಮಹದೇವಪುರದ ದೊಡ್ಡನಕ್ಕುಂದಿಯ ಅಕ್ಮೆ ಬಾಲ್ಲೇಟ್‌ ಅಪಾರ್ಟ್‌ಮೆಂಟ್‌ ನಿವಾಸಿ ತ್ರಿಪರ್ಣಾ ಪಾಯಿಕ್‌ ಮೇಲೆ ಈ ಆರೋಪ ಬಂದಿದ್ದು, ಆಕೆಯ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ಸಹಿಸಲಾರದೆ ಬಿಬಿಎಂಪಿ ಪಶುಸಂಗೋಪಾನಾ ಇಲಾಖೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದರು. ಈ ಅದರನ್ವಯ ಅಧಿಕಾರಿಗಳು ಆಕೆ ಫ್ಲ್ಯಾಟ್‌ನಲ್ಲಿ ಪರಿಶೀಲನೆ ಮಾಡಿದಾಗ ನಾಯಿ ಮೃತದೇಹ ಪತ್ತೆಯಾಗಿದೆ.ಮಹದೇವಪುರದ …

Read More »

ಶಿರಸಿ-ಕುಮಟಾ ಹೆದ್ದಾರಿ ನಿರ್ಮಾಣಕ್ಕೆ ದಿನಾಂಕ ನಿಗದಿ

ಉತ್ತರ ಕನ್ನಡ, ಜೂನ್​ 29: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ (Sirasi-Kumata National Highway) ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಾರ್ವಜನಿಕರೊಬ್ಬರು ಬರೆದ ಪತ್ರಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಉತ್ತರ ನೀಡಿದ್ದು, ಕಾಮಗಾರಿ 2025ರ ಡಿಸೆಂಬರ್​ 31 ರಂದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ. ಸಾರ್ವಜನಿಕರೊಬ್ಬರು ಕೇಂದ್ರ ಸಚಿವ ನಿತಿನ್​ ಗಡ್ಕರಿ (Nitin Gadkari) ಅವರಿಗೆ ಪತ್ರ ಬರೆದು, ತಮ್ಮ ಕಾರಿನಲ್ಲಿ ಶಿರಸಿ-ಕುಮಟಾ ಪ್ರಯಾಣಿಸಲು ಆಹ್ವಾನ ನೀಡಿದ್ದರು.ಆದರೆ, ಇವರ ಆಹ್ವಾನಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರತಿಕ್ರಿಯೆ …

Read More »

ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ ಕಲಬುರಗಿಯ ಖಡಕ್ ರೊಟ್ಟಿ

ಕಲಬುರಗಿ, (ಜೂಣ್ 29): ಪ್ರತಿ ತಿಂಗಳ ಕೊನೆ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್​​ ಕಿ ಬಾತ್’ ನಲ್ಲಿ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಯಾರೇ ಒಂದು ವಿಶಿಷ್ಟ ಸಾಧನೆ ಮಾಡಿದರೂ ಸಹ ಮೋದಿ ಮನ್​ ಕಿ ಬಾತ್​ ನಲ್ಲಿ ಮೆಲುಕಿ ಹಾಕಿ ಅಭಿನಂದನೆ ತಿಳಿಸುತ್ತಾರೆ. ಅದರಂತೆ ಇಂದಿನ ಮನ್​​ ಕಿ ಬಾಂತ್​ ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಸದ್ದು ಮಾಡಿದೆ. ಹೌದು…ಇಂದು (ಜೂನ್ 29) …

Read More »

ಆಹಾರ ಮತ್ತು ಪಾನೀಯ ವಿಭಾಗದಲ್ಲಿ ‘ನಂದಿನಿ’ ಬ್ರ್ಯಾಂಡ್​ಗೆ ದೇಶದಲ್ಲೇ ಟಾಪ್-4 ಸ್ಥಾನ

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆಮಾತಾಗಿರುವ ಕೆಎಂಎಫ್​ನ ‘ನಂದಿನಿ’ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ದೇಶದಲ್ಲಿಯೇ ಅತ್ಯುತ್ತಮ ಟಾಪ್​​​​-4 ಬ್ರ್ಯಾಂಡ್​ ಆಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, ಭಾರತೀಯ ಟಾಪ್​​-100 ಬ್ರ್ಯಾಂಡ್​ಗಳಲ್ಲಿ ನಂದಿನಿಯು 38ನೇ ಸ್ಥಾನ ಅಲಂಕರಿಸಿದೆ. ವಿಶ್ವದಾದ್ಯಂತ ಬ್ರ್ಯಾಂಡ್​ಗಳ ಮೌಲ್ಯಮಾಪನಕ್ಕೆ ಹೆಸರಾಗಿರುವ ಬ್ರ್ಯಾಂಡ್​ ಫೈನಾನ್ಸ್​ ಸಂಸ್ಥೆ ಲಂಡನ್​ನಲ್ಲಿ ಬಿಡುಗಡೆ ಮಾಡಿದ ಈ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಸಹಕಾರಿ ಕ್ಷೇತ್ರದ ನಂದಿನಿಯು ದೇಶದ ಅತ್ಯುತ್ತಮ ಬ್ರ್ಯಾಂಡ್​ಗಳ ಪಟ್ಟಿಗೆ ಸೇರಿದೆ. ದೇಶದ ಆಹಾರ …

Read More »

ಹಳೆ ವೈಷಮ್ಯಕ್ಕೆ ವ್ಯಕ್ತಿಯ ಕೊಲೆ ಪ್ರಕರಣ: ಅಪ್ರಾಪ್ತ ಸೇರಿ ಮೂವರ ಬಂಧನ

ಬೆಂಗಳೂರು: ಹಳೆಯ ವೈಷಮ್ಯದ ಕಾರಣದಿಂದ ವ್ಯಕ್ತಿಯೋರ್ವನನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಜಿನಪ್ಪ (35) ಎಂಬವರನ್ನು ಕೊಂದಿದ್ದ ಆರೋಪದಡಿ ಪ್ರೇಮ್, ದರ್ಶನ್ ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಥಣಿಸಂದ್ರದ ಆಕಾಶವಾಣಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಆಂಜಿನಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಕುರಿ ಮೇಯಿಸುವ ವಿಚಾರಕ್ಕೆ ಗಲಾಟೆ, ಹತ್ಯೆಯಲ್ಲಿ ಅಂತ್ಯ: ಪತ್ನಿಯಿಂದ ದೂರವಾಗಿದ್ದ ಆಂಜಿನಪ್ಪ ಉಚಿತವಾಗಿ ಊಟ ತಿಂಡಿ ಸಿಗುವ ಕಡೆಗಳಲ್ಲಿ ಹೊಟ್ಟೆ ತುಂಬಿಸಿಕೊಂಡು …

Read More »

ಪೆಟ್ರೋಲ್ ಸುರಿದು ಎಟಿಎಂ ದರೋಡೆಗೆ ಯತ್ನ

ದಾವಣಗೆರೆ: ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಖದೀಮರು ಮುಂದಾಗಿದ್ದು, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಬಳಿಕ ಪರಾರಿಯಾದ ಘಟನೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ಮಧ್ಯರಾತ್ರಿ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ.‌ ಮೊದಲು ಕಬ್ಬಿಣದ ಸರಳು ಬಳಸಿ ಎಟಿಎಂ ಒಡೆಯಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಶಾರ್ಟ್‌ ಸರ್ಕ್ಯೂಟ್​ನಿಂದ …

Read More »

ಪ್ರಾಡ ಕೊಲ್ಹಾಪುರಿ ಪಾದರಕ್ಷೆಗೆ GI ಟ್ಯಾಗ್ ಇದ್ದರೆ ಸಾಲದು:ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪ್ರಾಡ ಕೊಲ್ಹಾಪುರಿ ಪಾದರಕ್ಷೆಗಳಿಗೆ ಕೇವಲ ಜಿಐ(ಜಿಯಾಗ್ರಾಫಿಕಲ್ ಇಂಡಿಕೇಷನ್) ಟ್ಯಾಗ್ ಇದ್ದರೆ ಸಾಲದು, ಜಾಗತಿಕ ವೇದಿಕೆ ನೀಡುವುದು ನಮ್ಮ ಜವಾಬ್ದಾರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಂತಾರಾಷ್ಟ್ರೀಯ ಫ್ಯಾಷನ್ ಸಂಸ್ಥೆಗಳು ನಮ್ಮ ವಿನ್ಯಾಸಗಳನ್ನು ಅಳವಡಿಸಿಕೊಂಡಾಗ, ಅವರ ಹೆಸರುಗಳು, ಕೆಲಸ ಮತ್ತು ಪರಂಪರೆಯನ್ನು ಪ್ರದರ್ಶಿಸಬೇಕು. ಬದಿಗಿಡಬಾರದು. ಜಿಐ ಟ್ಯಾಗ್ ಅವರಿಗೆ ಕಾನೂನು ಹಕ್ಕುಗಳನ್ನು ಮಾತ್ರ ನೀಡುತ್ತದೆ. ಅವರಿಗೆ ಜಾಗತಿಕ ವೇದಿಕೆಗಳನ್ನು ನೀಡುವುದು ಈಗ …

Read More »

ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕೊಯ್ದಿರುವುದು

ಶಿವಮೊಗ್ಗ: ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ವಿಜಾಪುರ ಗ್ರಾಮದ ತೋಟದಕೊಪ್ಪ ಎಂಬಲ್ಲಿ ಶನಿವಾರ ನಡೆದಿದೆ. ಹಸುವಿನ ಮಾಲೀಕ ನವೀನ್ ಎಂಬವರು ಹೊಸನಗರ ಠಾಣೆಗೆ ದೂರು ನೀಡಿದ್ದಾರೆ. “ಎಂದಿನಂತೆ ನಮ್ಮ ದನಗಳನ್ನು ಮೇಯಲು ಬಿಟ್ಟಿದ್ದೆವು. ಶನಿವಾರ ಸಂಜೆ ಊರಿನ ಜನರು ಫೋನ್ ಕರೆ ಮಾಡಿ, ನಿಮ್ಮ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿದೆ ಎಂದು ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ 9 ವರ್ಷ …

Read More »

ಬಿಬಿಎಂಪಿ ಕಸದ ಲಾರಿಯಲ್ಲಿ ಶವ ಇಟ್ಟು ಪರಾರಿ!

ಬೆಂಗಳೂರು : ಮಹಿಳೆಯೊಬ್ಬರನ್ನು ಹತ್ಯೆಗೈದು ಆಕೆಯ ಮೃತದೇಹವನ್ನು ಕಸದ ಲಾರಿಯಲ್ಲಿ ಹಾಕಿರುವ ಬೆಚ್ಚಿಬೀಳಿಸುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಕೇಟಿಂಗ್‌ ಗ್ರೌಂಡ್ ಬಳಿ ನಡೆದಿದೆ. ಸುಮಾರು 30-35 ವಯಸ್ಸಿನ ಮಹಿಳೆಯ ಮೃತದೇಹ ಮೂಟೆಕಟ್ಟಿರುವ ಸ್ಥಿತಿಯಲ್ಲಿ ಬಿಬಿಎಂಪಿಯ ಕಸದ ಲಾರಿಯಲ್ಲಿ ಪತ್ತೆಯಾಗಿದೆ. ಶನಿವಾರ ತಡರಾತ್ರಿ ಆಟೋ ರಿಕ್ಷಾದಲ್ಲಿ ಮೃತದೇಹ ತಂದಿರುವ ದುಷ್ಕರ್ಮಿಗಳು ಕಸದ ಲಾರಿಯಲ್ಲಿರಿಸಿ ಪರಾರಿ ಆಗಿರುವ ಕುರಿತು ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮೃತಳ ಗುರುತು ಇನ್ನೂ …

Read More »