ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು ದಿನಗಳು ಕಳೆದಿವೆ, ಆದರೆ ಹೊಸ ಮತದಾರರ ಪಟ್ಟಿಯ ಗೊಂದಲದ ಮೇಲೆ ಚುನಾವಣಾ ಫಲಿತಾಂಶಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಮತ ಎಣಿಕೆ ನಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಬಲ ಮಾಹಿತಿ ಪ್ರಕಾರ ಚುನಾವಣೆಯ ಮತ ಎಣಿಕೆಯು ಫೆಬ್ರವರಿ 4, 2025 ರ ಮಂಗಳವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮತ ಎಣಿಕೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿ ರವೀಂದ್ರ …
Read More »Yearly Archives: 2025
ಫೆ. 5 ರಿಂದ ಭದ್ರಾ ಜಲಾಶಯದಿಂದ ತುಂಗಾಭದ್ರಾ ನದಿಗೆ ನೀರು
ಶಿವಮೊಗ್ಗ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವರ 2024-25ನೇ ಸಾಲಿನ ಜಾತ್ರೆ ಮತ್ತು ಕಾರ್ಣಿಕೋತ್ಸವ ಇದೇ ತಿಂಗಳಲ್ಲಿ ಜರುಗಲಿದೆ. ಈ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ಫೆಬ್ರವರಿ 5 ರಿಂದ 11ರ ವರೆಗೆ 5,800 ಕ್ಯೂಸೆಕ್ ನೀರನ್ನು ಹರಿಸಲು ಆದೇಶಿಸಲಾಗಿದೆ. ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಫೆಬ್ರವರಿ 5ರ ರಾತ್ರಿ 100 ಕ್ಯೂಸೆಕ್ ಮತ್ತು ಫೆಬ್ರವರಿ 6 ರಿಂದ ಫೆಬ್ರವರಿ 11ರ ವರೆಗೆ ಪ್ರತಿದಿನ 800 …
Read More »ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ವಾಟಾಳ್ ನಾಗರಾಜ್ರಿಂದ ಒನಕೆ ಪ್ರತಿಭಟನೆ
ಮೈಸೂರು : ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲಗಾರರಿಗೆ ನೀಡುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ನಿಲ್ಲಬೇಕೆಂದು ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಒನಕೆ ಹಿಡಿದು ವಿನೂತನವಾಗಿ ಭಾನುವಾರ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ರಾಜ್ಯಗಳ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ಕೊಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ತಲೆ …
Read More »ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಅಭಿಯಾನಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ ಗುಲಾಬಿ ಹೂವು ನೀಡಿ ಹೆಲ್ಮೆಟ್ ಧರಿಸುವಂತೆ ವಿನಂತಿ
ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಅಭಿಯಾನಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ ಗುಲಾಬಿ ಹೂವು ನೀಡಿ ಹೆಲ್ಮೆಟ್ ಧರಿಸುವಂತೆ ವಿನಂತಿ ಬೆಳಗಾವಿ ನಗರ ಪೊಲೀಸ ವತಿಯಿಂದ ಹಮ್ಮಿಕೊಂಡ “ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಮತ್ತು ಜಾರಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು. ಬೆಳಗಾವಿ ನಗರ ಪೊಲೀಸನ ವತಿಯಿಂದ ಹಮ್ಮಿಕೊಂಡಿದ್ದ “ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಮತ್ತು …
Read More »ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ರಾಜೀನಾಮೆ
ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ರಾಜೀನಾಮೆ ಕಾರಣವೇನು ಗೊತ್ತಾ… ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಆಘಾತ ಎದುರಾಗಿದ್ದು ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸಚಿವ ಸ್ಥಾನಕ್ಕಾಗಿ ನಾನು ಕೆಳಮಟ್ಟದ ರಾಜಕಾರಣ ಮಾಡುತ್ತಿಲ್ಲ ಎಂದು ಬಿ.ಆರ್. ಪಾಟೀಲ್ ಸ್ಪರ್ಷಪಡಿಸಿದ್ದಾರೆ. ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೊದಲೇ ರಾಜೀನಾಮೆ ಕೊಡುವ ನಿರ್ಧಾರವನ್ನು …
Read More »ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೆರವಣಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಅನಾರೋಗ್ಯದ ಮಧ್ಯೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರಿದಿವೆ. ನಿತ್ಯ ಒಂದಿಲ್ಲೊಂದು ಅಭಿವೃದ್ಧಿ ಯೋಜನೆಗಳಿಗೆ ಸಚಿವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇಲ್ಲವೇ, ಸ್ಥಳೀಯ ಜನಪ್ರತಿನಿಧಿಗಳು ಪೂಜೆ …
Read More »ಗ್ರಾಮೀಣ ಕ್ಷೇತ್ರದಲ್ಲಿ ಕ್ರೀಡೆಗೆ ಅತೀ ಹೆಚ್ಚು ಪ್ರೋತ್ಸಾಹ : ಚನ್ನರಾಜ ಹಟ್ಟಿಹೊಳಿ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜಗರಣಿ ಗ್ರಾಮದ ಶ್ರೀ ಬ್ರಹ್ಮಲಿಂಗ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿ, ಚಾಲನೆ ನೀಡಿದರು. ಗ್ರಾಮೀಣ ಕ್ಷೇತ್ರದಲ್ಲಿ ಕ್ರೀಡೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಸರಕಾರದಿಂದಷ್ಟೇ ಅಲ್ಲ, ವಯಕ್ತಿಕವಾಗಿ ಹಾಗೂ ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಸಹ ಸಾಕಷ್ಟು ಸಹಾಯ ಮಾಡಲಾಗುತ್ತಿದೆ. ಯುವಕರು ಹಾಗೂ ಮಕ್ಕಳು ಸರ್ವಾಂಗೀಣ ಅಭಿವೃದ್ಧಿಯಾಗಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ …
Read More »ಬಿಮ್ಸನಲ್ಲಿ ಆತಂಕ ಸೃಷ್ಠಿಸಿದ ನಕಲಿ ವಿದ್ಯಾರ್ಥಿ ಓಡಾಟ…!!! ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
ಪಿಜಿ ವಿದ್ಯಾರ್ಥಿ ಎಂದು ಹೇಳಿ ಬಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ. ಈತನ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯಕೀಯ ವಿದ್ಯಾರ್ಥಿ ವೇಷ ಧರಿಸಿ ಬೀಮ್ಸ್ ಆಸ್ಪತ್ರೆಯ ಈತ, ಕ್ಲಾಸ್ ರೂಂ, ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಓಡಾಟ ನಡೆಸಿದ್ದಾನೆ. ಬಿಮ್ಸ್ ನಲ್ಲಿ ಬಂದು ಕುಳಿತು ವಿದ್ಯಾರ್ಥಿಗಳಿಗೆ ಆತಂಕ ಸೃಷ್ಟಿಸಿದ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಮ್ಸ್ ನಲ್ಲಿ ನರ್ಸಿಂಗ್ ಸ್ಟಾಪ್, ವಿದ್ಯಾರ್ಥಿಗಳ ಜೊತೆಗೆ …
Read More »ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರೇ ಹುಷಾರ್: 10 ವರ್ಷದವರೆಗೆ ಶಿಕ್ಷೆ
ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡುವ ಕಸರತ್ತು ನಡೆಸುವ ಮಧ್ಯೆಯೇ ಇತ್ತ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರ ಮೇಲೆ 10 ವರ್ಷ ಶಿಕ್ಷೆ ವಿಧಿಸುವ ಕಠಿಣ ಕಾನೂನಿನ ತಿದ್ದುಪಡಿಗೆ ಸಹಕಾರ ಇಲಾಖೆಯೂ ಸಿದ್ಧತೆ ನಡೆಸಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿಗಾರರ ವಿರುದ್ಧ ನಿಯಂತ್ರಣ ಹೇರಲು ಇರುವ ಕಾನೂನನ್ನೇ ಪ್ರಯೋಗ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸುಗ್ರೀವಾಜ್ಞೆ …
Read More »ವೇಶ್ಯಾವಾಟಿಕೆ ದಂಧೆ: ಲಾಡ್ಜ್ ಮೇಲೆ ಪೊಲೀಸ್ ದಾಳಿ –
ಚಾಮರಾಜನಗರ: ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಳ್ಳೇಗಾಲ ಪೊಲೀಸರು ಶನಿವಾರ ರಾತ್ರಿ ಇಲ್ಲಿನ ಲಾಡ್ಜ್‌ವೊಂದರ ಮೇಲೆ ಮಾಡಿದ್ದು ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ಲಾಡ್ಜ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಕೊಳ್ಳೇಗಾಲ ಪಟ್ಟಣದ ಹೃದಯಭಾಗದಲ್ಲಿರುವ ಶೆಟ್ಟೀಸ್ ಫೋರಂನ ಜಶ್ವಂತ್ ರೆಸಿಡೆನ್ಸಿ ಲಾಡ್ಜ್ ಮೇಲೆ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
Read More »