Breaking News

Yearly Archives: 2025

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು : ನಿಗದಿತ ವೇತನ, ಸರ್ಕಾರದಿಂದ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ‌. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದಲ್ಲಿರುವ 42,000 ಜನ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹಲವು ವರ್ಷಗಳಿಂದ ಈಡೇರಿಲ್ಲ. ಆದ್ದರಿಂದ ಕೆಲಸ ಸ್ಥಗಿತಗೊಳಿಸಿ ಧರಣಿಗೆ ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದರು. ಬೇಡಿಕೆಗಳೇನು? ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವಧನ ನೀಡಬೇಕು. ನಗರ ಪ್ರದೇಶದಲ್ಲಿ …

Read More »

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಎಲ್​ಆರ್​ಟಿ ಯೋಜನೆ ಜಾರಿಗೆ ತರಲು ಚಿಂತನೆ: ಸಂತೋಷ ಲಾಡ್

ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಬಿಆರ್​ಟಿಎಸ್ ಬಸ್​ ಬದಲು ಲಘು ರೈಲು (ಎಲ್​ಆರ್​ಟಿ) ಯೋಜನೆ ಜಾರಿಗೆ ತರಲು ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಪಿಪಿಪಿ ಮಾಡಲ್​ನಲ್ಲಿ ಬರಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಬರುವುದರಿಂದ ಅವರೇ ಬಂಡವಾಳ ಹೂಡಿಕೆ ಮಾಡಬೇಕು. ಕಾರಿಡಾರ್ ನಿರ್ಮಾಣ ಹಾಗೂ ಬಸ್ ನಿರ್ವಹಣೆ ಮಾಡಬೇಕು ಎಂಬ ಯೋಜನೆ ಇಟ್ಟುಕೊಂಡಿದ್ದೇವೆ …

Read More »

ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ:ಸತೀಶ್ ಜಾರಕಿಹೊಳಿ

ರಾಯಚೂರು : ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದು. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂತಾ ಚರ್ಚೆ ಯಾವುದೂ ಆಗಿಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಸಿಎಂ ಬದಲಾವಣೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಇದ್ದಾರೆ, ಅಂತಹ ಅವಶ್ಯಕತೆ ಬರಲ್ಲ. …

Read More »

ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪ್ರಕರಣ ರದ್ದು ಕೋರಿ ಅರ್ಜಿ, ಕೋರ್ಟ್ ಹೇಳಿದ್ದೇನು?

ಬೆಂಗಳೂರು, ಜನವರಿ 06: ನಗರದ ಮಾರತಹಳ್ಳಿಯಲ್ಲಿ ನೇಣಿಗೆ ಶರಣಾಗಿದ್ದ ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿ ವಿಚಾರ ಸುಪ್ರೀಂಕೋರ್ಟ್, ರಾಷ್ಟ್ರಪತಿಗಳ ಅಂಗಳ ತಲುಪುವ ಮೂಲಕ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣವನ್ನು ರದ್ದುಕೋರಿ ನಿಖಿತಾ,‌ ನಿಶಾ, ಅನುರಾಗ್, ಸುಶೀಲ್​ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅತುಲ್ ಸುಭಾಪ್​ ಪತ್ನಿ ಹಾಗೂ ಕುಟುಂಬದವರು ಸಲ್ಲಿಸಿದ್ದ …

Read More »

ಮುಳಬಾಗಲು ಆರ್.ಎಫ್.ಓ ಅಧಿಕಾರಿಯ ಕುರ್ಚಿ ಫೈಟ್

ಕೋಲಾರ, : ಕುರ್ಚಿಗಾಗಿ (Chair) ಸರ್ಕಾರದ ಆದೇಶವನ್ನೇ ಅಧಿಕಾರಿಗಳು ಗಾಳಿಗೆ ತೂರಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರ ಹಸ್ತಾಂತರ ಮಾಡಲು ಇಚ್ಚಿಸಿದೆ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದ ಅಧಿಕಾರಿಯ ಕಾರ್ಯವೈಖರಿ ಕುರಿತು ದಿಶಾ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುರ್ಚಿಗಾಗಿ ಇಬ್ಬರ ಅಧಿಕಾರಿಗಳ ನಡುವೆ ನಡೆಯುತ್ತಿರುವ ಹೈಡ್ರಾಮಾ ಜಿಲ್ಲೆಯ ಜನರಿಗೆ ಪುಕ್ಕಟೆ ಮನರಂಜನೆ‌ ನೀಡುತ್ತಿದೆ. ಮುಳಬಾಗಲು ಆರ್.ಎಫ್.ಓ ಅಧಿಕಾರಿಯ ಕುರ್ಚಿ ಫೈಟ್ ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಮಲ್ಲೇಶ್ ಬಾಬು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ …

Read More »

ನಾಲ್ಕು ಮಂತ್ರಿಗಳು ಒಂದೆಡೆ ಊಟಕ್ಕೆ ಸೇರಿದರೆ ಮಾಧ್ಯಮದವರಿಗೆ ಅದೊಂದು ಸುದ್ದಿಯೇ?C.M

ಬೆಂಗಳೂರು: ಪತ್ರಿಕಾ ಗೋಷ್ಠಿ ನಡೆಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಮೂಡ್ ನಲ್ಲಿದ್ದರೆ ಜೋಕ್ ಗಳನ್ನು ಕಟ್ ಮಾಡುತ್ತ ಮಾತಾಡುತ್ತಾರೆ. ಸತೀಶ್ ಜಾರಕಿಹೊಳಿ ಮನೆಗೆ ಅವರು ಹೊಸ ವರ್ಷದಂದು ಊಟಕ್ಕೆ ಹೋಗಿದ್ದು ಬಹಳ ಚರ್ಚೆಯಾಗುತ್ತಿದೆ. ಏನ್ಸಾರ್ ವಿಶೇಷ ಅಂತ ಕೇಳಿದರೆ, ಮಂತ್ರಿಗಳು ಶಾಸಕರು ಜೊತೆಯಾಗಿ ಊಟ ಮಾಡಿದರೆ ನಿಮಗೆ ಅದೊಂದು ಸುದ್ದಿಯೇ ಎಂದು ವಾಪಸ್ಸು ಪ್ರಶ್ನಿಸುತ್ತಾರೆ. ಉಳಿದವರು ಔತಣದಲ್ಲಿ ಯಾಕಿರಲಿಲ್ಲ ಅಂದರೆ, ಯಾರನ್ನು ಅವರು ಕರೆದಿದ್ದರೋ, ಅವರು ಮಾತ್ರ ಇದ್ದರು, ಆಹ್ವಾನ …

Read More »

ಕಾ, ಜಿ ಸಿ ಬಯ್ಯಾರೆಡ್ಡಿ ರವರ ಅಂತೀಮ ದರ್ಶನ

ಕಾ, ಜಿ ಸಿ ಬಯ್ಯಾರೆಡ್ಡಿ ರವರ ಅಂತೀಮ ದರ್ಶನ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರು, ಸಂಯುಕ್ತ ಹೋರಾಟ – ಕರ್ನಾಟಕ ಸಂಚಾಲಕರು ಮತ್ತು ಸಿಪಿಐ ( ಎಂ) ಪಕ್ಷದ ಕಾರ್ಯದರ್ಶಿ, ಕಾ.ಜಿ ಸಿ ಬಯ್ಯಾರೆಡ್ಡಿ ಅನಾರೋಗ್ಯದಿಂದ ದಿನಾಂಕ :04/01/2025 ರಂದು ಬೆಳಿಗ್ಗೆ ಜಯನಗರ,3 ನೇ ಬ್ಲಾಕ್, ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎಡರಂಗದ ವಿಚಾರಗಳಿಗೆ ಮತ್ತು ರೈತಪರ ಚಳುವಳಿಗೆ ಹಿರಿಯನ್ನು ಕಳೆದುಕೊಂಡ ನಮಗೆ ತುಂಬಲಾರದ ನಷ್ಟವಾಗಿದೆ.ಅವರ ಅಗಲಿಕೆಯಿಂದ ಆಘಾತವಾಗಿದೆ. MES …

Read More »

ಶಕ್ತಿ ಯೋಜನೆಗೆ ಕಾಲ‌ಕಾಲಕ್ಕೆ ಹಣ ಕೊಟ್ಟಿಲ್ಲ.ಡಿಸೇಲ್ ಗೆ ಹಣವೂ ಇಲ್ಲ

ಬಸ್ ದರ ಏರಿಕೆ ಜನ ವಿರೋಧಿ. ಶಕ್ತಿ ಯೋಜನೆಗೆ ಕಾಲ‌ಕಾಲಕ್ಕೆ ಹಣ ಕೊಟ್ಟಿಲ್ಲ.ಡಿಸೇಲ್ ಗೆ ಹಣವೂ ಇಲ್ಲ ಎಂದು ಮಾಜಿ ಸಿಎಂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿ ಅವರು ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಕಾಲ‌ಕಾಲಕ್ಕೆ ಹಣ ಕೊಟ್ಟಿಲ್ಲ. ಕಾಲ‌ಕಾಲಕ್ಕೆ ಹಣ ಕೊಟ್ಟಿಲ್ಲ. ನಾನು ಸಿಎಂ ಆದಾಗ 4500 ಜೊಸ ಬಸ್ ಗಳಿಗೆ ಆದೇಶ ಮಾಡಿದ್ದೇ,ಅದೇ ಬಸ್ ಇವಾಗ ಬರ್ತಿವೆ. ಕೋವಿಡ್ ಸಮಯದಲ್ಲಿ ಲಾಸ್ ಆದರೂ ಯಡಿಯೂರಪ್ಪ …

Read More »

ಸಿದ್ದಿ ಸಾಧನೆಗಾಗಿ ಬಬಲಾದಿ ಅಜ್ಜನವರು ಮದ್ಯವನ್ನು ಸೇವಿಸುತ್ತಿದ್ದರು,ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದು:ಗುರು ಸಿದ್ದರಾಮಯ್ಯ ಅಜ್ಜನವರು

ಚಿಕ್ಕೋಡಿ:ಬಬಲಾದಿಯ ಸದಾಶಿವ ಅಜ್ಜನವರು ಮುಂದೆ ಆಗುವುದನ್ನು ಹೇಳಿದ್ದಾರೆ. ಹಿಂದೆ ಆಗಿ ಹೋಗಿದ್ದನ್ನು ಬರೆದಿಟ್ಟಿದ್ದಾರೆ. ಅವರ ಕಾರ್ಯಸಿದ್ದಿಗಾಗಿ ಮದ್ಯವನ್ನು ಸೇವಿಸುತ್ತಿದ್ದರು. ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದೆಂದು ಮೂಲಮಹಾ ಸಂಸ್ಥಾನ ಮಠದ ಬಬಲಾದಿಯ ಒಡೆಯರಾದಂತಹ ಶ್ರೀಗುರು ಸಿದ್ದರಾಮಯ್ಯ ಅಜ್ಜನವರು ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ರುದ್ರ ಭೂಮಿಯ ಉದ್ಘಾಟನೆ ಹಾಗೂ ಬಿಲ್ವಪತ್ರೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಲಕ್ಷ್ಮೀದೇವಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸದ್ಯದ ಪ್ರಪಂಚದಲ್ಲಿ ಒಂದು …

Read More »

ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ; ಲಾಕಡೌನ್ ಆಗುತ್ತಾ???

ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ; ಲಾಕಡೌನ್ ಆಗುತ್ತಾ??? ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದೇನು?? ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ಯಾವುದೇ ರೀತಿ ಭಯ ಪಡುವ ಅಗತ್ಯತೆಯಿಲ್ಲ ಎಚ್ಚರಿಕೆಯಿಂದ ಇರಬೇಕು ಅಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್ಎಂಪಿವಿ ಪ್ರಕರಣವಲ್ಲ. . 2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 …

Read More »