Breaking News

Yearly Archives: 2025

ಪಾರ್ಟಿಯ ವೇಳೆ ಸ್ನೇಹಿತರು ಯುವಕನೊಬ್ಬನ ಮೇಲೆ ಹಲ್ಲೆ

ಬೆಂಗಳೂರು : ಎಣ್ಣೆ ಪಾರ್ಟಿಯಲ್ಲಿ ಜೊತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ (24) ಎಂಬಾತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತನ ಸ್ನೇಹಿತರಿಂದ ಹಲ್ಲೆ : ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜೊತೆ ರುದ್ರಪ್ಪ …

Read More »

ಫಾಸ್ಟ್‌ಟ್ಯಾಗ್‌ ನಿಯಮ ಮತ್ತಷ್ಟು ಕಠಿಣ

FASTag Blacklist: ‘ಲೂಸ್ ಫಾಸ್ಟ್‌ಟ್ಯಾಗ್’ ಸಮಸ್ಯೆ ನಿಭಾಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಈಗ ಕಾರಿನಿಂದ ಫಾಸ್ಟ್‌ಟ್ಯಾಗ್ ತೆಗೆದು ಟೋಲ್ ಪ್ಲಾಜಾದಲ್ಲಿ ತೋರಿಸುವವರನ್ನು ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಲಾಗುತ್ತದೆ. ಕಾರಿನ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಸರಿಯಾಗಿ ಅಳವಡಿಸುವುದು ಅವಶ್ಯಕ. ಟೋಲ್ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಸಡಿಲವಾದ ಫಾಸ್ಟ್‌ಟ್ಯಾಗ್ ವರದಿ ಮಾಡುವಿಕೆಯನ್ನು ಬಲಪಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಟೋಲ್ ಸಂಗ್ರಹ ಏಜೆನ್ಸಿಗಳು ಮತ್ತು ರಿಯಾಯಿತಿ ನೀಡುವವರು ಲೂಸ್​ ಫಾಸ್ಟ್‌ಟ್ಯಾಗ್‌ಗಳನ್ನು …

Read More »

ಪಂಚಮಸಾಲಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಪ್ರಕರಣ: ಏಕ ಸದಸ್ಯ ಪಿಠದ ತನಿಖೆ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಚಿಕ್ಕೋಡಿ (ಬೆಳಗಾವಿ) : ಕಳೆದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಮಯದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ನಡೆಸಿದ ಲಾಠಿ ಚಾರ್ಜ್ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್​ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಈ ಮೂಲಕ ಸರ್ಕಾರದ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಇದರಿಂದ ನಮಗೆ ಎರಡನೇ ಬಾರಿಗೆ ಕಾನೂನಾತ್ಮಕವಾಗಿ ಜಯ ಸಿಕ್ಕಿದೆ ಎಂದು ಕೂಡಲಸಂಗಮ ಪೀಠದ ಪಂಚಮಸಾಲಿ ಸಮಾಜದ ಜಗದ್ಗುರು ಬಸವ …

Read More »

ಭರ್ತಿಗೂ ಮುನ್ನ ಭದ್ರಾ ಜಲಾಶಯದಿಂದ ನದಿಗೆ 1,200 ಕ್ಯೂಸೆಕ್ ನೀರು ಬಿಡುಗಡೆ

ಶಿವಮೊಗ್ಗ: ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ಜೀವನಾಡಿಯಾದ ಭದ್ರಾ ಜಲಾಶಯ ಭರ್ತಿಯಾಗುವ ಮುನ್ನವೇ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಿಂದ 1,200 ಕ್ಯೂಸೆಕ್ ನೀರನ್ನು ನದಿಗೆ ನಾಲ್ಕು ಕ್ರಸ್ಟ್ ಗೇಟ್​ಗಳ ಮೂಲಕ ಸುಮಾರು ಮೂರು ಅಡಿಯಷ್ಟು ನೀರು ಬಿಡುಗಡೆ ಮಾಡಲಾಗಿದೆ.  ಜಲಾಶಯವು 186 ಅಡಿ ಗರಿಷ್ಟ ಎತ್ತರ ಹೊಂದಿದೆ. ಇಂದಿನ ನೀರಿನ ಮಟ್ಟ 174.4 ಅಡಿ ಇದೆ. ಮಳೆಗಾಲ ಇನ್ನೂ ಇದೆ. ಕಳೆದ ವರ್ಷ …

Read More »

ಸಿಗ್ನಲ್‌ನಲ್ಲಿ ದಾರಿ ಬಿಡದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಮೂವರಿಂದ ಹಲ್ಲೆ

ಬೆಂಗಳೂರು: ರಸ್ತೆ ಸಿಗ್ನಲ್‌ನಲ್ಲಿ ದಾರಿ ಬಿಡಲಿಲ್ಲ ಎಂದು ಫುಡ್​​ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೋದಿ ಆಸ್ಪತ್ರೆ ಸಿಗ್ನಲ್ ಬಳಿ ನಡೆದಿದ್ದು, ಪೀಮ್‌ರಾಮ್ ಎಂಬಾತನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ರಾಜಸ್ಥಾನ ಮೂಲದ ಪೀಮ್‌ರಾಮ್ ನಗರದಲ್ಲಿ ಫುಡ್​​ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಭಾನುವಾರ ರಾತ್ರಿ ಮೋದಿ ಆಸ್ಪತ್ರೆ ಬಳಿ ರೆಡ್ ಸಿಗ್ನಲ್ ಇದ್ದಾಗ ಬೈಕ್ ನಿಲ್ಲಿಸಿದ್ದ. …

Read More »

ಯಲ್ಲಾಪುರ ಅರಣ್ಯದಲ್ಲಿ ಗುಂಡಿನ ಸದ್ದು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ ಸವಾಲಾಗಿದ್ದ, 16ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಪ್ರವೀಣ ಮನೋಹರ ಸುಧೀರ್ (37)ನನ್ನು ಸೋಮವಾರ ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಬಳಿಯ ದಟ್ಟ ಅರಣ್ಯದಲ್ಲಿ ಕಾಲಿಗೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಬಂಧಿಸಲಾಗಿದೆ. ಈ ಕಾರ್ಯಾಚರಣೆ ವೇಳೆ, ಪ್ರವೀಣ್ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಜೊಯಿಡಾ ತಾಲೂಕಿನ …

Read More »

ಮದುವೆಯಾದ ಖುಷಿಗೆ ಪಾರ್ಟಿ: ಚಿಕನ್ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ

ಬೆಳಗಾವಿ: ಮದುವೆಯಾದ ಖುಷಿಗೆ ಯುವಕನೊಬ್ಬ ತನ್ನ ಸ್ನೇಹಿತರಿಗೆ ಎಣ್ಣೆ ಹಾಗೂ ನಾನ್ ವೆಜ್ ಪಾರ್ಟಿ ಇಟ್ಟುಕೊಂಡಿದ್ದ. ಈ ಪಾರ್ಟಿಯಲ್ಲಿ ಚಿಕನ್ ಪೀಸ್ ಜಾಸ್ತಿ ಹಾಕಲಿಲ್ಲ ಅಂತಾ ಸಣ್ಣ ಕಾರಣಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯರಗಟ್ಟಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಯರಗಟ್ಟಿಯ ವಿನೋದ ಮಲಶೆಟ್ಟಿ(25) ಕೊಲೆಯಾದ ಯುವಕ. ವಿನೋದ ಸ್ನೇಹಿತ ಅಭಿಷೇಕ ಕೊಪ್ಪದ ಅವರ ಮದುವೆ ಎರಡು ತಿಂಗಳ ಹಿಂದೆಯಷ್ಟೇ ಆಗಿತ್ತು. ಅಂದಿನಿಂದ ಆತನ ಸ್ನೇಹಿತರು ಪಾರ್ಟಿ …

Read More »

ಶಾಸಕರ ಜೊತೆಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಸುರ್ಜೇವಾಲರಿಂದ ಮಿನಿಸ್ಟರ್​​​ ಜೊತೆ One to One ಸಭೆ

ಬೆಂಗಳೂರು: ಶಾಸಕರೊಟ್ಟಿಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಚಿವರ ಜೊತೆ ಒನ್ ಒನ್ ಸಭೆ ಆರಂಭಿಸಿದ್ದಾರೆ.‌ ಸಚಿವರುಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಅನ್ನೋ ಶಾಸಕರ ಆರೋಪದ ಬೆನ್ನಲ್ಲೇ ಸಚಿವರ ಜೊತೆ ಸಭೆಗೆ ನಡೆಸುತ್ತಿರೋ ಸುರ್ಜೇವಾಲ ಸೋಮವಾರ ನಾಲ್ವರು ಸಚಿವರ ಜೊತೆ ಮಾತುಕತೆ ನಡೆಸಿದರು. ಶಾಸಕರ ಜೊತೆಗಿನ ಸಭೆಯಲ್ಲಿ ಸಚಿವರು ಸರಿಯಾಗಿ ಸ್ಪರ್ಧಿಸುತ್ತಿಲ್ಲ, ಉಸ್ತುವಾರಿ ಸಚಿವರುಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ತಿಲ್ಲ, ನಮ್ಮ ಲೆಟರ್ ಗಳಿಗೆ ಬೆಲೆ …

Read More »

ಕಾಗವಾಡದಲ್ಲಿ ನಾರಿಶಕ್ತಿ ಸಡಗರ ಸಂಭ್ರಮ ಶಾಸಕ ರಾಜು ಕಾಗೆ ಭಾಗಿ

ಕಾಗವಾಡದಲ್ಲಿ ನಾರಿಶಕ್ತಿ ಸಡಗರ ಸಂಭ್ರಮ ಶಾಸಕ ರಾಜು ಕಾಗೆ ಭಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಇವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ನೀಡಿದ್ದು ಅದರಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆ, ಯಶಸ್ವಿಯಾಗಿದ್ದೆ. ರಾಜ್ಯದ ಒಟ್ಟು ಜನಸಂಖ್ಯೆ 6 ಕೋಟಿ ಅದರಲ್ಲಿಯ 3.50 ಕೋಟಿ ಮಹಿಳೆಯರಿದ್ದು ಕಳೆದ 20 ತಿಂಗಳದಲ್ಲಿ 500 ಊಟಿ ಮಹಿಳೆಯರು ಬಸವದಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ಸರ್ಕಾರದ …

Read More »

ಮಹಾಲಿಂಗಪೂರ ಪಟ್ಟಣ ನೂತನ ತಾಲ್ಲೂಕು ಘೋಷಣೆಗಾಗಿ ಆಗ್ರಹಿಸಿ ಪ್ರತಿಭಟನೆ

ಮಹಾಲಿಂಗಪೂರ ಪಟ್ಟಣ ನೂತನ ತಾಲ್ಲೂಕು ಘೋಷಣೆಗಾಗಿ ಆಗ್ರಹಿಸಿ ಪ್ರತಿಭಟನೆ ಹೊಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕೆಂದು ತಾಲೂಕು ಹೋರಾಟ ಸಮೀತಿ ಕೈಗೊಂಡಿರುವ ಪ್ರತಿಭಟನೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಬಾಗವಹಿಸಿದ್ದರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಾ ಬಂದರು ಹೋರಾಟಕ್ಕೆ ಸ್ಪಂಧಿಸದ ಸರ್ಕಾರ ಹೋರಾಟಗಾರರು ಮಹಾಲಿಂಗಪೂರ ಪಟ್ಡಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ …

Read More »