Breaking News

Yearly Archives: 2025

ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪನವರ ಸಮಾಧಿ ಕಾಯಕಲ್ಪ ಮರೆತ ಸರ್ಕಾರ

ಹಾವೇರಿ: ಕನ್ನಡದ ಕಟ್ಟಾಳು, ಕರ್ನಾಟಕ ಏಕೀಕರಣದ ರೂವಾರಿ, ನೇರ, ನಿಷ್ಠುರ ನುಡಿಗಳಿಗೆ ಮತ್ತೊಂದು ಹೆಸರೇ ಪಾಟೀಲ ಪುಟ್ಟಪ್ಪ. ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಪಾಪು’ ಎಂದೇ ಖ್ಯಾತರಾಗಿದ್ದ ಇವರು, ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಕನ್ನಡ ಪರ ಹೋರಾಟಗಳ ನೇತೃತ್ವ ವಹಿಸಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಇಂತಹ ವ್ಯಕ್ತಿತ್ವದ ಪಾಟೀಲ ಪುಟ್ಟಪ್ಪನವರ ಜನ್ಮಭೂಮಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ. ಇಲ್ಲಿಯೇ ಬಾಲ್ಯ ಕಳೆದ ಪುಟ್ಟಪ್ಪ …

Read More »

ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಕಾರಣ ಕಾರು ರಸ್ತೆ ಬದಿಯಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿರುವ ಘಟನೆ ಹಾಸನ ಪಟ್ಟಣದಲ್ಲಿ ನಡೆದಿದೆ.

ಹಾಸನ: ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಕಾರಣ ಕಾರು ರಸ್ತೆ ಬದಿಯಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿರುವ ಘಟನೆ ಹಾಸನ ಪಟ್ಟಣದಲ್ಲಿ ನಡೆದಿದೆ. ಹಳೇ ರಾಷ್ಟ್ರೀಯ ಹೆದ್ದಾರಿ 75ರ ಬಾಳೆಗದ್ದೆ ಬಡಾವಣೆಯಲ್ಲಿರುವ ಕುಬೇರ ಹೋಟೆಲ್​ ಸಮೀಪ ಹ್ಯುಂಡೈ​ ಐ20 ಕಾರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್​ ಅಡ್ಡ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ತರಕಾರಿ …

Read More »

ಅಥಣಿ ಸಿಪಿಐ ಸಂತೋಷ ಹಳ್ಳೂರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲ

ಅಥಣಿ : ಸೈಟ್ ಕೊಡಿಸುವ ವಿಚಾರವಾಗಿ ವ್ಯಕ್ತಿಗಳಿಬ್ಬರ ನಡುವಿನ ಹಣಕಾಸಿನ ವ್ಯವಹಾರ ಮುಗಿಸಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಅಥಣಿ ಸಿಪಿಐ ಸಂತೋಷ ಹಳ್ಳೂರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಕಚೇರಿಗೆ ಅಥಣಿ ನಿವಾಸಿ ಮೀರಸಾಬ ಮುಜಾವರ ಸಿಪಿಐ ಸಂತೋಷ ಹಳ್ಳೂರ ಮೇಲೆ ದೂರು ದಾಖಲಿಸಿದ್ದರು. ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬವರಿಗೆ ಮೀರಸಾಬ ಮುಜಾವರ ಎರಡು ಸೈಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ 20 ಲಕ್ಷ …

Read More »

ಹೊಸ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಭಾರತೀಯ ಟೆಲಿಕಾಂ ಮಜದುರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ :ಹೊಸ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಭಾರತೀಯ ಟೆಲಿಕಾಂ ಮಜದುರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು‌. ಹೊಸ ಗುತ್ತಿಗೆದಾರರು ಅಧಿಕಾರ ವಹಿಸಿಕೊಂಡ ಬಳಿಕ ಕೆಲಸದಿಂದ ವಂಚಿತರಾದ ಎಲ್ಲಾ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಬೇಕು. ಯಾವುದೇ ಕಾರ್ಮಿಕನು ಯೂನಿಯನ್ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಕೆಲಸ ಕಳೆದುಕೊಳ್ಳಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಾನೂನುಬದ್ಧ ಸೌಲಭ್ಯಗಳಾದ ವಾರದ ವಿಶ್ರಾಂತಿ ದಿನ, ರಾಷ್ಟ್ರೀಯ ಮತ್ತು ಹಬ್ಬದ ರಜ, …

Read More »

ಗೋವಾ ಸೃಜನ್ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ

ಗೋವಾ ಸೃಜನ್ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ  ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಜಿ ಅವರೊಂದಿಗೆ ಆಯೋಜಿಸಿದ್ದ ‘ನೇತ್ರತ್ವ ಸೃಜನ್ ಕಾರ್ಯಾಗಾರ’ವನ್ನು ಆಯೋಜಿಸಿದ್ದು ಈ ಕಾರ್ಯಾಗಾರವನ್ನು ಅವರೊಂದಿಗೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಅಮಿತ್ ಪಾಟ್ಕರ್ ಜೀ,ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾದ ಯೂರಿ …

Read More »

ಜೆಸಿಇಆ‌ರ್ ನ ಸವಿಷ್ಕಾರ್‌ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಉದ್ಘಾಟನೆ ದೇಶದ ಅಭಿವೃದ್ಧಿಗೆ ಹೊಸ ಸಂಶೋಧನೆ ಅತ್ಯಗತ್ಯ: ಡಿಸಿಪಿ ನಾರಾಯಣ ಭರಮಣಿ

ಜೆಸಿಇಆ‌ರ್ ನ ಸವಿಷ್ಕಾರ್‌ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಉದ್ಘಾಟನೆ ದೇಶದ ಅಭಿವೃದ್ಧಿಗೆ ಹೊಸ ಸಂಶೋಧನೆ ಅತ್ಯಗತ್ಯ: ಡಿಸಿಪಿ ನಾರಾಯಣ ಭರಮಣಿ ಬೆಳಗಾವಿ: ‌ ದೇಶದ ಅಭಿವೃದ್ಧಿಗೆ ಸಂಶೋಧನೆ ಅತ್ಯಗತ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹೊಸ- ಹೊಸ ಸಂಶೋಧನೆಗಳ ಕಡೆಗೆ ಸಾಗಿದಾಗ ಮಾತ್ರ ಉದೋಗ ಗಳನ್ನು ಸೃಷ್ಟಿಯಾಗುತ್ತವೆ‌. ಜೊತೆಗೆ ನಮ್ಮ ದೇಶವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ನಾರಾಯಣ. ವಿ. …

Read More »

ನ.14 ರಂದು ಚಿಕ್ಕೋಡಿಯಲ್ಲಿ ಛಲವಾದಿ ಮಹಾನಸಭಾದ ಚಿಂತನ ಮಂಥನ ಕಾರ್ಯಕ್ರಮ

ಬೆಳಗಾವಿ :ರಾಜಕೀಯವಾಗಿ ಹಿಂದುಳಿದ ಛಲವಾದಿ ಸಮಾಜದ ಜಾಗೃತವಾಗುವ ನಿಟ್ಟಿನಲ್ಲಿ ನ.14 ರಂದು ಚಿಕ್ಕೋಡಿಯಲ್ಲಿ ಛಲವಾದಿ ಮಹಾನಸಭಾದ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾದ ಮುಖಂಡ ಸುರೇಶ್ ತಳವಾರ ಹೇಳಿದರು. ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಛಲವಾದಿ ಸಮಾಜ ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿದ್ದರೂ ಶೈಕ್ಷಣಿಕ, ರಾಜಕೀಯ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಎಲ್ಲ ಸಮಾಜದವರು ರಾಜಕೀಯವಾಗಿ ತಮ್ಮ ಸಮಾಜವನ್ನು ರಾಜಕೀಯದಲ್ಲಿ ಸುಭದ್ರವಾಗಿದ್ದಾರೆ. ಆದರೆ ಛಲವಾದಿ ಸಮಾಜದವರು ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಅವರನ್ನು …

Read More »

ಹುಲಿ ದಾಳಿ ಮಾಡಿದರೂ ಮನುಷ್ಯನನ್ನು ತಿನ್ನಲ್ಲ: ಕಾರಣ ತಿಳಿಸಿದ ವನ್ಯಜೀವಿ ಛಾಯಾಗ್ರಾಹಕ

ಮೈಸೂರು: ಹುಲಿ ದಾಳಿಯಿಂದಾಗುತ್ತಿರುವ ಪ್ರಾಣ ಹಾನಿ ಹಾಗೂ ಇತರ ಹಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಬಂಡೀಪುರ ಹಾಗೂ ನಾಗರಹೊಳೆಯ ವ್ಯಾಪ್ತಿಯ ವನ್ಯಜೀವಿ ಸಫಾರಿಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದೆ. ಈ ಬಗ್ಗೆ ವನ್ಯಜೀವಿ ಛಾಯಾಗ್ರಾಹಕರು ಹಾಗೂ ರೈತ ಮುಖಂಡರು  ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ಮಧುಸೂದನ್ ಮಾತನಾಡಿ, “ಹುಲಿ ದಾಳಿಗೆ ತುಂಬಾ ಕಾರಣಗಳಿರುತ್ತವೆ. ಒಂದು ಹುಲಿಗಳ ಸಂಖ್ಯೆ ಅಧಿಕವಾಗಿದೆ. ಹಾಗೆಯೇ ಕಾಡಿನೊಳಗೆ ಅವುಗಳ ಹೊಡೆದಾಟ ಮತ್ತು ಕೆಲ ಗಾಯಗೊಂಡ ಹುಲಿಗಳು ಕಾಡಂಚಿನ …

Read More »

ಬೆಳಗಾವಿ ಎಸ್ಪಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.

ಬೆಳಗಾವಿ ಎಸ್ಪಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ. ಎಸ್ಪಿ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ, ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ಖಂಡಿಸಿ ಬಿಜೆಪಿ ಪ್ರತಿಭಟನೆಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಎಸ್ಪಿ ಕಚೇರಿ ಮುತ್ತಿಗೆಗೆ ಬಿಜೆಪಿ ಕಾರ್ಯಕರ್ತರ ಯತ್ನ ಗೃಹ ಸಚಿವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಈ ವೇಳೆ ಎಸ್ಪಿ ಕಚೇರಿ ಮುತ್ತಿಗೆಗೆ ನುಗ್ಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ವಶಕ್ಕೆ ಪಡೆದ …

Read More »

ತಂದೆಯನ್ನ ಒನಕೆಯಿಂದ ಹೊಡೆದು ಕೊಂದ ಮಗ

ವಿಜಯನಗರ: ತಂದೆ-ತಾಯಿ ಗಲಾಟೆ ಬಿಡಿಸುವ ವೇಳೆ ಕೆಳಗೆ ಬಿದ್ದ ತಂದೆಗೆ ಒನಕೆಯಿಂದ ಹೊಡೆದು ಮಗನೇ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ನಡೆದಿದೆ. ಜವಳಿ ಶಿವಲಿಂಗಪ್ಪ (60) ಹತ್ಯೆಯಾದ ವ್ಯಕ್ತಿ, ಶಂಕ್ರಪ್ಪ ಕೊಲೆ ಆರೋಪಿ ಆಗಿದ್ದು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಮೃತನ ಪತ್ನಿ ಗಂಗಮ್ಮ ಹೆಚ್​ಬಿ ಹಳ್ಳಿ ಪೊಲೀಸ್​​​ ಠಾಣೆಗೆ ದೂರು ನೀಡಿದ್ದರು.ಘಟನೆ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಸ್. …

Read More »