Breaking News

Monthly Archives: ಜೂನ್ 2025

ಶಾಂತಾಯಿ ವೃದ್ಧಾಶ್ರಮಕ್ಕೆ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಭೇಟಿ

ಶಾಂತಾಯಿ ವೃದ್ಧಾಶ್ರಮಕ್ಕೆ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಭೇಟಿ ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಅವರು ತಮ್ಮ ಕುಟುಂಬ ಮತ್ತು ಸೈನಿಕರೊಂದಿಗೆ ಇಂದು ಶಾಂತಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ವೃದ್ಧಾಶ್ರಮದ ಅಜ್ಜಿಯರು ಬ್ರಿಗೇಡಿಯರ್ ಮುಖರ್ಜಿಯವರನ್ನು ಸಾಂಪ್ರದಾಯಿಕ ಆರತಿಯೊಂದಿಗೆ ಸ್ವಾಗತಿಸಿದರು. ವೃದ್ಧಾಶ್ರಮದ ಹಸಿರು, ಸ್ವಚ್ಛ ಪರಿಸರ ಮತ್ತು ಸಂತೋಷದ ವಾತಾವರಣವನ್ನು ನೋಡಿ ಅವರು ತುಂಬಾ ಸಂತೋಷಪಟ್ಟರು. ಜೀವನ ಮತ್ತು ಸಂತೋಷದಿಂದ ತುಂಬಿರುವ ಇಂತಹ ವೃದ್ಧಾಶ್ರಮವನ್ನು ಹಿಂದೆಂದೂ …

Read More »

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ

ಬೆಂಗಳೂರು, ಜೂನ್​ 08: ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಗೃಹಸಚಿವಾಲಯ ರಾಷ್ಟ್ರೀಯ ತನಿಖಾ ದಳ (NIA) ಕ್ಕೆ ವಹಿಸಿ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆ …

Read More »

ಸವದತ್ತಿ ರಾಯಚೂರು ಜಿಲ್ಲೆಯಲ್ಲೂ ಅಬ್ಬರಿಸಿದ ಮಳೆಭಾರಿ ಮಳೆನದಿ ಸ್ವರೂಪ ಪಡೆದ ಹೊಲ-ಗದ್ದೆಗಳು

ಬೆಳಗಾವಿ: ಪೂರ್ವ ಮುಂಗಾರು ಬಳಿಕ ಸೈಲೆಂಟ್ ಆಗಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದು, ಸವದತ್ತಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹೌದು, ನಿನ್ನೆ ಸಂಜೆ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ಒಂದು ಗಂಟೆಗೂ ಅಧಿಕ ಕಾಲ‌ ಮಳೆ ಸುರಿಯಿತು. ಭಾರಿ ಮಳೆಗೆ ಇಲ್ಲಿನ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದವು. ರಸ್ತೆ ಮೇಲೆ ರಭಸವಾಗಿ ನೀರು ಹರಿದ ಪರಿಣಾಮ ಎರಡು ಗಂಟೆ ಸಂಚಾರ ಬಂದ್ ಆಗಿತ್ತು. ವಾಹನ ಸವಾರರು …

Read More »

ಕುಂಭಮೇಳದಲ್ಲಿ ಕಾಲ್ತುಳಿತದಿಂದ ಜನ ಸಾವನ್ನಪ್ಪಿದಾಗ ಹೆಚ್​ಡಿಕೆಯವರು ಮೋದಿ ರಾಜೀನಾಮೆ ಕೇಳಿದ್ರಾ: ಸಿಎಂ

ಮೈಸೂರು: ಕುಂಭಮೇಳದಲ್ಲಿ ಕಾಲ್ತುಳಿತದಿಂದ ಹಲವು ಜನರು ಸಾವನ್ನಪ್ಪಿದಾಗ ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಿದರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿಯವರು ವಿಧಾನಸೌಧದ ಆವರಣದಲ್ಲಿ ಧರಣಿ ನಡೆಸಿದ ವಿಚಾರವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕುಂಭಮೇಳದ ದುರ್ಘಟನೆ ನಡೆದಾಗ ಯಾರಾದರೂ ಪ್ರಧಾನಿಯನ್ನು ರಾಜೀನಾಮೆ ಕೇಳಿದರಾ? ಆಗ ಕುಮಾರಸ್ವಾಮಿ ರಾಜೀನಾಮೆ ಕೇಳಬಹುದಿತ್ತಲ್ಲವೇ? ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದರು. ಜೂನ್​ …

Read More »

ಮಗ ನಮ್ಮ ಜೊತೆಗಿದ್ದಿದ್ದರೆ ಸಾಕಾಗಿತ್ತು. ದುಡ್ಡು ಕೊಟ್ಟರೆ ಮಗ ಮತ್ತೆ ವಾಪಸ್​ ಬರೊಲ್ಲ ಸಾರ್.. ಮುನ್ನೆಚ್ಚರಿಕೆ ವಹಿಸಬೇಕು.. ಇದು ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ತಂದೆಯ ನುಡಿ..

ತುಮಕೂರು: ಇತ್ತೀಚಿಗೆ (ಜೂನ್​ 4) ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ ತುಮಕೂರು ಮೂಲದ ವಿದ್ಯಾರ್ಥಿ ಮನೋಜ್ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 25 ಲಕ್ಷ ರೂಪಾಯಿ ಹಣದ ಚೆಕ್ಅನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭಾನುವಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೃತ ವಿದ್ಯಾರ್ಥಿ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದಾರೆ ಸರ್.. ಮಗ ಬರೊಲ್ವಲ್ಲ. ಚೆಕ್ ಕೊಟ್ಟರೆ ಮಗಾ ಬರ್ತಾನಾ, ಇದ್ದೋನು ಒಬ್ಬನೇ ಮಗ ಎಂದು ನೊಂದು …

Read More »

ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳೋಣ :

ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳೋಣ : ಕಾಗವಾಡ ಜೈನ ಸಮಾವೇಶದಲ್ಲಿ ರಾಜ್ಯಪಾಲ ಥಾವರಚೆಂದ ಗೆಹ್ಲೊಟ್ ಕರೆ… ವರ್ಷದೊಳಗೆ ಜೈನ ಸಮಾಜದ ಬೇಡಿಕೆಗಳು ಈಡೇರದಿದ್ದರೆ ಸಲ್ಲೇಖನ ವ್ರತ : ಗುಣಧರನಂದಿ ಸ್ವಾಮೀಜಿ ಪ್ರಸ್ತುತ ಇಡೀ ಜಗತ್ತು ಸ್ವ-ಕಲ್ಯಾಣ, ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಭಾರತದ ಕಡೆಗೆ ನೋಡುತ್ತಿದೆ. ಮಹಾವೀರ ಸ್ವಾಮಿಗಳ ಜೀವನ-ತತ್ವ ಮತ್ತು ಬೋಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸಮಾಜ ಮತ್ತು ಜಗತ್ತಿನಲ್ಲಿ ಶಾಂತಿ, ಸಾಮರಸ್ಯ …

Read More »

ಗೌಂಡವಾಡದಲ್ಲಿ ಸುಮಾರು 40 ಲಕ್ಷ ಅನುದಾನದಲ್ಲಿ ರಸ್ತೆ , ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ:ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಅವರ ವಿಶೇಷ ಅನುದಾನ ಬಳಸಿ ಗೌಂಡವಾಡದಲ್ಲಿ ಅಭಿವೃದ್ಧಿ ಸುಮಾರು 40 ಲಕ್ಷ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ಸಚಿವ ಸತೀಶ್ ಜಾರಕಿಹೊಳಿ ಅವರ ವಿಶೇಷ ಅನುದಾನ ಸುಮಾರು 40 ಲಕ್ಷ ಅನುದಾನದಲ್ಲಿ ಕಾಮಗಾರಿರಸ್ತೆ ಹಾಗೂ ಚರಂಡಿ ನಿರ್ಮಾಣ ಗಣ್ಯರಿಂದ ಕಾಮಗಾರಿಗೆ ಚಾಲನೆ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ವಿಶೇಷ ಅನುದಾನದಲ್ಲಿ …

Read More »

10 ಕೋಟಿ ರೂ. ವೆಚ್ಚದಲ್ಲಿ ವೈಭವನಗರ ಅಭಿವೃದ್ದಿ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

10 ಕೋಟಿ ರೂ. ವೆಚ್ಚದಲ್ಲಿ ವೈಭವನಗರ ಅಭಿವೃದ್ದಿ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಾದ್ಯಂತ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡುತ್ತಿರುವ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇದೀಗ ವೈಭವ ನಗರ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಶುಕ್ರವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ನ್ಯೂ ವೈಭವ ನಗರದ ರಸ್ತೆ, ಚರಂಡಿ ಹಾಗೂ …

Read More »

ವಿಠ್ಠಲ -ರುಕ್ಮಿಣಿ ದೇವಸ್ಥಾನ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ

ವಿಠ್ಠಲ -ರುಕ್ಮಿಣಿ ದೇವಸ್ಥಾನ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಿಣಿಯೆ ಗ್ರಾಮದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ನೂತನ ಕಟ್ಟಡದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು. ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. ಗ್ರಾಮಸ್ಥರ ಬೇಡಿಕೆಯಂತೆ ವಿಶೇಷ ಪ್ರಯತ್ನ ಮಾಡಿ ಅನುದಾನ ಮಂಜೂರು ಮಾಡಿಸಲಾಗಿದೆ. …

Read More »

ಬೈಕ್​ಗೆ ಕಾರು ಡಿಕ್ಕಿ – ಇಬ್ಬರು ಸವಾರರು ಸಾವು

ರಾಯಚೂರು: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ರಾಯಚೂರಿನ ಯರಗೇರಾ ಬಳಿ ಘಟನೆ ಸಂಭವಿಸಿದೆ. ಯರಗೇರಾದ ಮಂತ್ರಾಲಯ – ರಾಯಚೂರು ಸಂಪರ್ಕ ಕಲ್ಪಿಸುವ ರಸ್ತೆಯ ರಾಯಚೂರು ವಿಶ್ವವಿದ್ಯಾಲಯ ಬಳಿ ಈ ಅಪಘಾತ ನಡೆದಿದೆ. ಕರೆಬೂದೂರು ಗ್ರಾಮದ ಉರುಕುಂದ ಈರಣ್ಣ (42) ಹಾಗೂ ಲಕ್ಷ್ಮಣ ತಿಮ್ಮಪ್ಪ ಮೃತಪಟ್ಟವರು. ಉರುಕುಂದ ಅವರು ಅಪಘಾತವಾದ ಕೆಲಹೊತ್ತಲ್ಲೇ ಮೃತಪಟ್ಟರೆ, ಲಕ್ಷ್ಮಣ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. …

Read More »