Breaking News

Daily Archives: ಮೇ 28, 2025

ಪ್ರೀತಿಸಿ ಮದ್ವೆಯಾಗಿದ್ದವಳನ್ನ 10 ಬಾರಿ ಇರಿದು ಕೊಂದ ಪತಿ

ಚಿಕ್ಕಮಗಳೂರು, (ಮೇ 28): ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಚಾಕು ಮನಸ್ಸೋ ಇಚ್ಛೆ ಇರಿದು ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಕೈಮರಾ ಚೆಕ್ ಪೋಸ್ಟ್ ಬಳಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಕೀರ್ತಿ (26) ಎಂದು ಗುರುತಿಸಲಾಗಿದೆ. ಇನ್ನು ಪತಿ ಅವಿನಾಶ್ (32) ಎನ್ನುವಾತ ಚಾಕುವಿನಿಂದ ಬರೋಬ್ಬರಿ ಹತ್ತು ಬಾರಿ ಚುಚ್ಚಿ ಕೊಂದು ಎಸ್ಕೇಪ್ ಆಗಿದ್ದಾನೆ. ಕೀರ್ತಿ ಪೋಷಕರ ವಿರೋಧದ ನಡುವೆಯೂ ಆಕೆಯನ್ನು ನಾಲ್ಕು ವರ್ಷದ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ, ಇಬ್ಬರು ನಡುವೆ ಶುರುವಾದ ಸಣ್ಣ …

Read More »

ಕೊಡಗು ಜಿಲ್ಲೆಯಾದ್ಯಂತ 2 ದಿನ ಶಾಲಾ-ಕಾಲೇಜುಗಳಿಗೆ ರಜೆ

ಕೊಡಗು, ಮೇ 28: ಜಿಲ್ಲೆಯಲ್ಲಿ ಮಳೆ (rain) ಅಬ್ಬರ ಕೊಂಚ ಕಡಿಮೆ ಆದರೂ ಅಲ್ಲಲ್ಲಿ ಅವಾಂತರಗಳು ಮುಂದುವರೆದಿವೆ. ಬಹಳಷ್ಟು ಗ್ರಾಮಗಳಲ್ಲಿ ಇನ್ನೂ ನದಿಗಳು ಅಪಾಯ ಮಟ್ಟದಲ್ಲೇ ಹರಿಯುತ್ತಿವೆ. ಹಾಗಾಗಿ ಪ್ರವಾಹದ ಆತಂಕದಿಂದ ಇನ್ನೂ ಜನರು ದೂರವಾಗಿಲ್ಲ. ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ನಾಳೆ, ನಾಡಿದ್ದು ಅಂದರೆ ಗುರುವಾರ, ಶುಕ್ರವಾರ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ 2 ದಿನ ರಜೆ (holiday) ನೀಡಿ ಡಿಸಿ ವೆಂಕಟರಾಜಾ ಆದೇಶಿಸಿದ್ದಾರೆ.ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಣೆ …

Read More »

ಇದು ಥೈಲ್ಯಾಂಡ್ ಟು ಕೊಪ್ಪಳ ಗಾಂಜಾ ಸ್ಟೋರಿ: ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದವರ ಬಂಧನ

ಕೊಪ್ಪಳ, ಮೇ 28: ಥೈಲ್ಯಾಂಡ್​ನಿಂದ (Thailand) ಅಕ್ರಮವಾಗಿ ಗಾಂಜಾ (ganja) ತಂದು ಮಾರಾಟ ಮಾಡುತ್ತಿದ್ದ 8 ಜನರನ್ನು  ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ಪೊಲೀಸರಿಂದ ಸೌಜೇಶ್, ಸಲೀಂ, ಬಿ.ದುರ್ಗಾ, ಬಾದ್​ ಷಾ, ಮದನ್, ಸೂರ್ಯ ಪ್ರತಾಪ್ ರೆಡ್ಡಿ, ಅಮೀದ್ ಮತ್ತು ಮಣಿಕಂಠ ಅನ್ನು ಬಂಧಿಸಿದ್ದು, ಇದರಲ್ಲಿ ಮೂವರು ಕೇರಳದವರು. 18 ಲಕ್ಷ ಮೌಲ್ಯದ 1806 ಗ್ರಾಂ ಹೈಡ್ರೋ ಗಾಂಜಾ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಿಷ್ಟು ಈ …

Read More »

ಬಂಟ್ವಾಳ ರಹಿಮಾನ್ ಹತ್ಯೆ..ಮತ್ತೆ ಪ್ರತೀಕಾರದ ಪೋಸ್ಟರ್: ಮಂಗಳೂರಿನಲ್ಲಿ ಏನೇನಾಯ್ತು?

ಮಂಗಳೂರು, (ಮೇ 29): ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಯಾಗಿ ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಕಡಲನಗರಿ ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ನಿನ್(ಮೇ 27) ಮಧ್ಯಾಹ್ನ ಮುಸ್ಲಿಂ ಯುವಕನೊಬ್ಬನನ್ನ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಅಬ್ದುಲ್ ರಹಿಮಾನ್ (32) (Bantwal Abdul Rehman) ಎಂಬಾತ ದಕ್ಷಿಣ ಕನ್ನಡ  (Dakshina Kannada) ಜಿಲ್ಲೆ ಬಂಟ್ವಾಳ ತಾಲೂಕಿನ ಕೂರಿಯಾಳ ಸಮೀಪದ ಈರಕೋಡಿಯ ಕೊಳತ್ತಮಜಲ್ ನಿವಾಸಿ. ಪಿಕಪ್ ವಾಹನ ಓಡಿಸಿ ಜೀವನ ಸಾಗಿಸುತ್ತಿದ್ದ. ನಿನ್ನೆ (ಮೇ 27) ಒಂದು ಲೋಡ್ ಮರಳು ಬೇಕು ಎಂದು …

Read More »

ಮುಂದಿನ ತಿಂಗಳಿನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಸಿಗಲ್ವಾ?

ಬೆಂಗಳೂರು, (ಮೇ 28): ಪಂಚ ಗ್ಯಾರಂಟಿಗಳನ್ನ (guarantee scheme) ಐದು ವರ್ಷವೂ ನೀಡುತ್ತೇವೆ ಎನ್ನುವ ವಾಗ್ದಾನದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ ಅದೇ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ವಿಚಾರ ಸಚಿವರು, ಶಾಸಕರ ನೀಡುತ್ತಿರುವ ಹೇಳಿಕೆಗಳು ಗೊಂದಲವನ್ನ ಸೃಷ್ಟಿಸುತ್ತಿವೆ. ಫಲಾನುಭವಿಗಳಿಗೂ ಈ ರೀತಿಯ ಹೇಳಿಕೆಯಿಂದ ಆತಂಕ ಹೆಚ್ಚಾಗಿದೆ. ಅನರ್ಹರಿಗೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ ಎಂಬ ಶಾಸಕರು, ಸಚಿವರ ಗೊಂದಲದ ಹೇಳಿಕೆಗಳು ಇದೇ ಹೊಸದೇನಲ್ಲ. ಆದರೆ ಸಿಎಂ ಸಿದ್ದರಾಮಯ್ಯ …

Read More »

KPTCL ಎಇ, ಜೆಇ ಹುದ್ದೆಗಳ ಆಯ್ಕೆಪಟ್ಟಿ ರದ್ದು: ಮರುಪರೀಕ್ಷೆಗೆ ಹೈಕೋರ್ಟ್ ಆದೇಶ

ಬೆಂಗಳೂರು, ಮೇ 28: 2024 ಮೇ 8ರ ಕೆಪಿಸಿಎಲ್​​​ನ (KPCL) ಎಇ, ಜೆಇ ಹುದ್ದೆಗಳ ಆಯ್ಕೆಪಟ್ಟಿ ರದ್ದುಪಡಿಸಿ ಮರುಪರೀಕ್ಷೆಗೆ ಹೈಕೋರ್ಟ್ (High Court)​​ ಬುಧವಾರ ಆದೇಶ ಹೊರಡಿಸಿದೆ. 2024 ಫೆ.18ರಂದು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ನೆಗೆಟಿವ್ ಮಾರ್ಕಿಂಗ್ ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್​ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ಮಾಡಿದ ಹೈಕೋಟ್​​ ಮರುಪರೀಕ್ಷೆಗೆ ಆದೇಶಿಸಿದೆ. ಜೊತೆಗೆ ನೆಗೆಟಿವ್ ಮಾರ್ಕಿಂಗ್ ಬಗ್ಗೆ ಪೂರ್ವ ಮಾಹಿತಿ ನೀಡಲು ಸಿಜೆ ಎನ್.ವಿ.ಅಂಜಾರಿಯಾ …

Read More »

ಪ್ರತಿ ತಾಲೂಕಿನಲ್ಲೂ ಕನಿಷ್ಟ ಬೆಂಬಲ‌ ಬೆಲೆಯ ಖರೀದಿ ಕೇಂದ್ರ ಸ್ಥಾಪಿಸಲು ಹೈಕೋರ್ಟ್ ಆದೇಶ

ಬೆಂಗಳೂರು, ಮೇ 28: ಪ್ರತಿ ತಾಲೂಕಿನಲ್ಲೂ ಖರೀದಿ ಕೇಂದ್ರ ಸ್ಥಾಪಿಸಲು ಕರ್ನಾಟಕ ಹೈಕೋರ್ಟ್ (High Court) ಬುಧವಾರ ಆದೇಶ ಹೊರಡಿಸಿದೆ. ರೈತ ಸೇನೆ ಸಲ್ಲಿಸಿದ್ದ ಪಿಐಎಲ್ ಅರ್ಜಿ (PIL application) ವಿಚಾರಣೆ ಮಾಡಿದ ಹೈಕೋಟ್​​, ಕನಿಷ್ಟ ಬೆಂಬಲ‌ ಬೆಲೆಯ ಖರೀದಿ ಕೇಂದ್ರ ಆರಂಭಿಸಲು ಸಿಜೆ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್​​ರಿದ್ದ ಪೀಠ ಆದೇಶ ನೀಡಿದೆ.ಜಿಲ್ಲಾಧಿಕಾರಿ ಬೆಳೆಗಳ ಲಭ್ಯತೆಯ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಅಗತ್ಯವಿದ್ದಷ್ಟು ಕನಿಷ್ಟ ಬೆಂಬಲ ಬೆಲೆಯ ಖರೀದಿ ಕೇಂದ್ರ ಸ್ಥಾಪಿಸಬೇಕು. ಪ್ರತಿ ತಾಲೂಕಿನಲ್ಲೂ ಒಂದು ಖರೀದಿ ಕೇಂದ್ರ …

Read More »

ಕನ್ನಡಿಗರ ಪ್ರೀತಿಗೆ ಸದಾ ಋಣಿ’: ಬೆಂಗಳೂರಿಗೆ ಆಗಮಿಸಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನ ಇತ್ತೀಚೆಗೆ ಬೂಕರ್ ಪ್ರಶಸ್ತಿ ಪಡೆದಿದೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ಈ ಗೌರವ ಸಂದಿದೆ. ದೀಪಾ ಭಾಸ್ತಿ ಅವರು ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಕನ್ನಡ ಕಸ್ತೂರಿ ಕಂಪು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಸರಿಸಿದ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಲಂಡನ್​ನಲ್ಲಿ ಪ್ರಶಸ್ತಿ ಸ್ವೀಕರಿಸಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ …

Read More »

ರಾಜಕಾಲುವೆಗೆ ಬಿದ್ದ ಕಾರು, ಮೃತಪಟ್ಟ ಮಹಿಳೆ

ಮಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ವರ್ಷಧಾರೆಯ ಅಬ್ಬರ ಮುಂದುವರೆದಿದೆ. ಮಳೆ ಅವಾಂತರಕ್ಕೆ ಮಂಗಳೂರಿನಲ್ಲಿ ಕಾರೊಂದು ರಾಜಕಾಲುವೆಗೆ ಬಿದ್ದರೆ, ಮೂಡಬಿದಿರೆಯಲ್ಲಿ ಮಹಿಳೆಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿಯ ರಾಜಕಾಲುವೆಗೆ ಸಂಚಾರದಲ್ಲಿದ್ದ ಕಾರೊಂದು ಬಿದ್ದಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಕೋಡಿಕಲ್ ಕ್ರಾಸ್ ಬಳಿ ರಾಜಕಾಲುವೆಯ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ರಾಜಕಾಲುವೆ ಬದಿಯಲ್ಲಿ ಬೆಳೆದಿದ್ದ ಪೊದೆಗಿಡಗಳನ್ನು ತೆಗೆದು, ಮರಳು ತುಂಬಿದ …

Read More »

ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ, ಕ್ಷಮೆ ಕೇಳುವಂತೆ ಆಗ್ರಹ

ಬೆಂಗಳೂರು: “ತಮಿಳು ಕನ್ನಡಕ್ಕೆ ಜನ್ಮ ನೀಡಿದೆ” ಎಂಬ ವಿವಾದಿತ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಹಿರಿಯ ನಟ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರಿಗೂ ದೂರು ನೀಡಲಾಗಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೂ ಮುನ್ನ ಕಮಲ್ ಹಾಸನ್‌ ಮೇಲೆ ನಿಷೇಧ ಹೇರುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ಚರ್ಚಿಸಲು ಮುಂದಾಗಿದೆ. ಕಮಲ್ ಹಾಸನ್ ಮೇಲೆ ಸಂಭಾವ್ಯ ನಿಷೇಧ …

Read More »