Breaking News

Daily Archives: ಮೇ 1, 2025

ವೃದ್ಧೆಯ ಪ್ರಜ್ಞೆ ತಪ್ಪಿಸಿ, ಕೈಗೆ ಕಲ್ಲು ಕೊಟ್ಟು 40 ಗ್ರಾಂ ಚಿನ್ನಾಭರಣ ಹೊತ್ತೊಯ್ದ ಖತರ್ನಾಕ್ ದಂಪತಿ

ಆನೇಕಲ್(ಬೆಂಗಳೂರು): ರಾಜ್ಯದಲ್ಲಿ ಇತ್ತೀಚೆಗೆ ಹಗಲು ದರೋಡೆಗಳು ಹೆಚ್ಚಾಗುತ್ತಿದ್ದು, ಒಂಟಿ ಮಹಿಳೆಯರು ಸಿಕ್ಕಿದ್ರೆ ಸಾಕು ಯಾವುದೋ ನೆಪ ಹೇಳಿ ಕಳ್ಳರು ಚಿನ್ನಾಭರಣವನ್ನು ಕದ್ದು ಪರಾರಿಯಾಗುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ ತಾಲೂಕಿನ ಕೆಂಪಡ್ರಹಳ್ಳಿಯಲ್ಲಿ ನಡೆದಿದೆ. ಕೆಂಪಡ್ರಹಳ್ಳಿ ತೋಟದಲ್ಲಿ ಕೆಲಸ ಮುಗಿಸಿ ಒಬ್ಬಂಟಿಯಾಗಿ ಬರುತ್ತಿದ್ದ ಸಾವಿತ್ರಮ್ಮನನ್ನು ಕಂಡು ಇಬ್ಬರು ದಂಪತಿ ಅಡ್ರೆಸ್ಸ್ ಕೇಳುವ ನೆಪದಲ್ಲಿ ವೃದ್ಧೆಯ ಬಳಿ ತಮ್ಮ ಸ್ಕೂಟಿಯನ್ನು ನಿಲ್ಲಿಸಿದ್ದಾರೆ. ಬಳಿಕ ಅಡ್ರೆಸ್ಸ್ ಕೇಳಿ ಆಕೆಯೊಂದಿಗೆ ಇನ್ನಷ್ಟು ಸಮಯ ಮಾತನಾಡಿದ್ದಾರೆ.ಚಿನ್ನವನ್ನು ಹೀಗೆಲ್ಲ ಹಾಕಿಕೊಂಡು …

Read More »

ಸರ್ಕಾರದ ಸೌಲಭ್ಯಗಳನ್ನು ಬಳಸಿ ಪ್ರಗತಿ ಹೊಂದಿ- ಪೌರಕಾರ್ಮಿಕರಿಗೆ ಸಿಎಂ ಕಿವಿಮಾತು ಮುಂದಿನ ದಿನಗಳಲ್ಲಿ ಶುಚಿತ್ವದ ಇತರ ನೌಕರರನ್ನೂ ಖಾಯಂಗೊಳಿಸಲಾಗುವುದು- ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಸರ್ಕಾರದ ಸೌಲಭ್ಯಗಳನ್ನು ಬಳಸಿ ಪ್ರಗತಿ ಹೊಂದಿ- ಪೌರಕಾರ್ಮಿಕರಿಗೆ ಸಿಎಂ ಕಿವಿಮಾತು ಮುಂದಿನ ದಿನಗಳಲ್ಲಿ ಶುಚಿತ್ವದ ಇತರ ನೌಕರರನ್ನೂ ಖಾಯಂಗೊಳಿಸಲಾಗುವುದು- ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆಂಗಳೂರು : ಪೌರಕಾರ್ಮಿಕರು ಪ್ರಸ್ತುತ ಖಾಯಂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 9000 ಸಂಖ್ಯೆಯಷ್ಟಿರಬಹುದಾದ ವಾಹನಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್ ಗಳನ್ನೂ ಕೂಡ ಖಾಯಂ ಮಾಡಲಾಗುವುದು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಬಿಬಿಎಂಪಿ …

Read More »

ದೇಶದಲ್ಲಿ ಜನಗಣತಿಯ ಜೊತೆಗೆ ಜಾತಿಗಣತಿ ಸ್ವಾಗತಿಸುತ್ತೇನೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಮೂಡಲಗಿ: ದೇಶದಲ್ಲಿ ಜನಗಣತಿಯ ಜೊತೆಗೆ ಜಾತಿಗಣತಿ ಮಾಡುವ ಐತಿಹಾಸಿಕ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಕ್ರಮ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಹಲವು ವರ್ಷಗಳಿಂದ ವೈಜ್ಞಾನಿಕವಾಗಿ ದೇಶದಾದ್ಯಂತ ಜಾತಿಗಣತಿ ಸಮೀಕ್ಷೆಗೆ ಯಾವ ಸರ್ಕಾರವೂ ಮುಂದಾಗಿರಲಿಲ್ಲ. ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ಈ ನಿರ್ಧಾರದಿಂದ ದೇಶದಲ್ಲಿ ಹಿಂದುಳಿದವರು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕ …

Read More »

ತುಮಕೂರು: ಕೊಳಕುಮಂಡಲ ಹಾವು ಮತ್ತು 43 ಮರಿಗಳ ರಕ್ಷಣೆ

ತುಮಕೂರು : ನಗರದ ಮಹಾಲಕ್ಷ್ಮಿ ಬಡಾವಣೆಯ ವಾಸಿ ಶಿವಣ್ಣ ಟೈರ್ಸ್ ಮಾಲೀಕರಾದ ಕಾರ್ತಿಕ್ ಅವರ ಕಟ್ಟಡ ಕಾರ್ಮಿಕರ ಶೆಡ್​ನಲ್ಲಿ 4 ಅಡಿ ಉದ್ದದ ಕೊಳಕುಮಂಡಲ ಹಾವು ಹಾಗೂ ಅದರ 43 ಮರಿಗಳು ಕಾಣಿಸಿಕೊಂಡಿವೆ. ಈ ವಿಷಯ ತಿಳಿದ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ಚಂದನ್, ಮನು ಅಗ್ನಿವಂಶಿ ಮತ್ತು ಕಾರ್ತಿಕ್ ಸಿಂಗ್ ಅವರು ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಿಸಿ, ಸಮೀಪದ ದೇವರಾಯನ ದುರ್ಗಾ …

Read More »

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ?

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ ಬೇರೆ ರೀತಿ ಮಾತನಾಡಲು ಆಗಲ್ಲ ಎಂದು ಹೇಳಿದರು. ಅಂದು ಇಂದಿರಾ ಗಾಂಧಿಗೆ ಇಡೀ ದೇಶದ ಬೆಂಬಲ ಸಿಕ್ಕಿತ್ತು: 1971ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದಾಗ ಇಡೀ ದೇಶ ಹಾಗೂ ವಿರೋಧ ಪಕ್ಷದವರು ಅವರ ಜೊತೆಗಿದ್ದು ಬೆಂಬಲ ಕೊಟ್ಟರು ಎಂಬುದನ್ನು …

Read More »

ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು’ : ಎಂಎಲ್​ಸಿ ಹೆಚ್ ವಿಶ್ವನಾಥ್ –

ಮೈಸೂರು : ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್. ವಿಶ್ವನಾಥ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಕಾರ್ಮಿಕ ದಿನಾಚರಣೆ, ಎಲ್ಲಾ ಕಾರ್ಮಿಕರಿಗೂ ಶುಭಾಶಯ ಎಂದರು. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ …

Read More »

ಪಕ್ಕದ ಮನೆಯವನ ಕಿರುಕುಳದಿಂದ ನೊಂದು ಬಾಲಕಿ ಆತ್ಮಹತ್ಯೆ

ಪಕ್ಕದ ಮನೆಯವನ ಕಿರುಕುಳದಿಂದ ನೊಂದು ಬಾಲಕಿ ಆತ್ಮಹತ್ಯೆ ಬಳ್ಳಾರಿ: ಪಕ್ಕದ ಮನೆಯಾತನ ಮಾನಸಿಕ, ದೈಹಿಕ ಕಿರುಕುಳದಿಂದ ನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ತನ್ನ ಪಕ್ಕದ ಮನೆಯ ವ್ಯಕ್ತಿ ಸುರೇಶ ಎಂಬವನ ಹೆಸರನ್ನು ಡೆತ್ ನೋಟ್​ನಲ್ಲಿ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಭಂಗ ಮಾಡಿ, ಕಿರುಕುಳ ನೀಡಿದ್ದಾನೆ, ಅವನನ್ನು ಬಿಡಬೇಡಿ ಎಂದು ಅಪ್ರಾಪ್ತೆ ತಿಳಿಸಿದ್ದಾಳೆ. ಈ ಕುರಿತು ಬಾಲಕಿಯ ತಂದೆ ಮಾತನಾಡಿದ್ದು, “ನಾನು ಮದುವೆಗೆ ಹೋಗಿದ್ದೆ, …

Read More »

ಎಸ್​ಎಸ್ಎಲ್​ಸಿ ಫಲಿತಾಂಶ ನಾಳೆ ಪ್ರಕಟ:

ಬೆಂಗಳೂರು: ಎಸ್​​ಎಸ್​ಎಲ್​ಸಿ ಪರೀಕ್ಷೆ -1ರ ಫಲಿತಾಂಶ ಶುಕ್ರವಾರ ಘೋಷಣೆಯಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಳೆ ಬೆಳಗ್ಗೆ 11.30 ಗಂಟೆ ಸುಮಾರು ಸುದ್ಧಿಗೋಷ್ಟಿಯಲ್ಲಿ ಫಲಿತಾಂಶದ ವಿವರಗಳನ್ನು ಪ್ರಕಟಿಸಲಿದ್ದಾರೆ. ಕಳೆದ ಮಾರ್ಚ್ 21ರಿಂದ ಏಪ್ರಿಲ್ 4ನೇ ತಾರೀಖಿನವರೆಗೆ ನಡೆದ ಹತ್ತನೇ ತರಗತಿ ಪರೀಕ್ಷೆಯ ಎಲ್ಲಾ ಉತ್ತರಪತ್ರಿಕೆಗಳ ಮೌಲ್ಯಮಾಪನವು ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ನಾಳೆ ಪ್ರಕಟಿಸಲು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಶಿಕ್ಷಣ …

Read More »

ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರೊಬ್ಬರು ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾದರಿ ರೈತನ ಹಾವೇರಿ ತಾಲೂಕು ಬಸಾಪುರದಲ್ಲಿದ್ದಾರೆ.

ಹಾವೇರಿ: ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರೊಬ್ಬರು ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾದರಿ ರೈತನ ಹಾವೇರಿ ತಾಲೂಕು ಬಸಾಪುರದಲ್ಲಿದ್ದಾರೆ. ಹೌದು, ಬಸಾಪುರದ ನಾಗಪ್ಪ ಮುದ್ದಿ ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾವು ಬೆಳೆಗಾರ. ವರ್ಷದಿಂದ ವರ್ಷಕ್ಕೆ ಇವರ ತೋಟದಲ್ಲಿ ಅತ್ಯಧಿಕ ಪ್ರಮಾಣದ ಮಾವಿನ ಇಳುವರಿ ಸಿಗುತ್ತಿದೆ. ಸಂಪೂರ್ಣ ಸಾವಯವವಾಗಿ ಮಾವು ಬೆಳೆಯುವ ನಾಗಪ್ಪ ಮುದ್ದಿ ಅವರಿಗೆ ಮಾವಿನ ತೋಟಕ್ಕೆ ವರ್ತಕರು ವರ್ಷದ ಗುತ್ತಿಗೆ ಪಡೆಯಲು ಮುಗಿಬೀಳುತ್ತಾರೆ. ಸಂಪೂರ್ಣವಾಗಿ ಸಾವಯವವಾಗಿರುವ ಮಾವಿನ ತೋಟಕ್ಕೆ ವರ್ಷದಿಂದ ವರ್ಷಕ್ಕೆ ಅತ್ಯಧಿಕ …

Read More »

ಸಂಪರ್ಕ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸಂಪರ್ಕ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೋಜಗa, ಕೋವಾಡ್, ಹಿಂಡಲಗಾ, ಮಣ್ಣೂರ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಸ್ತೆಯ ಗುಣಮಟ್ಟ ಕಾಪಾಡಲು ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು. …

Read More »