Breaking News

Daily Archives: ಏಪ್ರಿಲ್ 13, 2025

ಡ್ರಗ್ಸ್ ಹಾವಳಿ ಹುಬ್ಬಳ್ಳಿ-ಧಾರವಾಡದಲ್ಲಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ, ಏಪ್ರಿಲ್​ 13: ಐದು ವರ್ಷದ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಆರೋಪಿ ಡ್ರಗ್ಸ್ ಮತ್ತಿನಲ್ಲಿ ಕೃತ್ಯವೆಸಗಿದ್ದಾನೆಂದು ಹೇಳುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಬೇಕು. ಆರೋಪಿ ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Read More »

ಯುವಕರು ಕ್ರೀಡೆಯಲ್ಲಿ ಭಾಗವಹಿಸಿ: ಉದ್ಯಮಿ ಸಂತೋಷ್ ಜಾರಕಿಹೊಳಿ

ಯುವಕರು ಕ್ರೀಡೆಯಲ್ಲಿ ಭಾಗವಹಿಸಿ: ಉದ್ಯಮಿ ಸಂತೋಷ್ ಜಾರಕಿಹೊಳಿ ಹಿರೇನಂದಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ; ವಿಜೇತರಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಬಹುಮಾನ ವಿತರಣೆ ಗೋಕಾಕ : ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಅಭಿಮಾನಿ ಬಳಗದಿಂದ ಹಿರೇನಂದಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು ವಿಜೇತರಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಬಹುಮಾನ ವಿತರಣೆ ಮಾಡಿದರು. ತಾಲೂಕಿನ ಹಿರೇನಂದಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ನಿಮಿತ್ತ ಶ್ರೀ ಸಂತೋಷ್ …

Read More »

ಬಳ್ಳಾರಿ: ಮಲಗಿರುವಾಗ ನಾಗರ ಹಾವು ಕಡಿದು 10ನೇ ತರಗತಿ ಬಾಲಕಿ ಸಾವು

ಬಳ್ಳಾರಿ: ಮಲಗಿದ್ದಾಗ ನಾಗರ ಹಾವು ಕಡಿದು 10ನೇ ತರಗತಿ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. 15 ವರ್ಷದ ಬಾಲಕಿ ಶ್ರಾವಣಿ ಹಾವು ಕಡಿತದಿಂದ ಮೃತಪಟ್ಟವಳು. ಬಾಲಕಿಯು ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ದಂಪತಿಯ ಮಗಳಾಗಿದ್ದಳು. ಶ್ರಾವಣಿ ಮೋಕಾ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ರಾತ್ರಿ ಮಲಗಿರುವಾಗ ಬಾಲಕಿಗೆ ಮೂರು ಸಲ ನಾಗರ ಹಾವು ಕಚ್ಚಿದೆ. …

Read More »

ವಕ್ಫ್ ಮಸೂದೆ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ: ಪ್ರಮುಖ ಆರೋಪಿ‌ ಕಬೀರ್ ಖಾನ್ ಬಂಧನ –

ದಾವಣಗೆರೆ: ವಕ್ಫ್ ಮಸೂದೆ ವಿರೋಧಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದ ಮೇಲೆ ಕಬೀರ್ ಖಾನ್ ಎಂಬವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸರ್ಕಾರ ವಕ್ಫ್ ಮಸೂದೆ ಮಂಡನೆ ಮಾಡಿದ ಬೆನ್ನಲ್ಲೇ ಕಬೀರ್ ಖಾನ್ ನೀಡಿದ್ದ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು.‌ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪ್ರಕಣದ ಪ್ರಮುಖ ಆರೋಪಿ ಕಾಂಗ್ರೆಸ್ ಮಾಜಿ‌ ಕಾರ್ಪೋರೇಟರ್ ಕಬೀರ್ ಖಾನ್ ನಾಪತ್ತೆಯಾಗಿದ್ದರು. ದಾವಣಗೆರೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. …

Read More »

ನಡು ರಸ್ತೆಯಲ್ಲೇ ಮಹಿಳೆಗೆ ಪೈಪ್, ದೊಣ್ಣೆಯಿಂದ ಮನಬಂದಂತೆ ಹಲ್ಲೆ: ಆರು ಆರೋಪಿಗಳ ಬಂಧನ

ದಾವಣಗೆರೆ : ಆರು ಜನ ಆರೋಪಿಗಳು ಮಹಿಳೆಯೋರ್ವರಿಗೆ ಮನಬಂದಂತೆ ಹಲ್ಲೆ‌ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ (ಏ.09) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಮಾಜ‌ವೇ ತಲೆ ತಗ್ಗಿಸುವ ಘಟನೆ ನಡೆಯುತ್ತಿದ್ದರೂ ಅಲ್ಲಿ ನೆರೆದಿದ್ದವರು ಅದನ್ನು ತಡೆಯಲು ಮುಂದಾಗದೇ ಗುಂಪು ಗುಂಪಿನಲ್ಲಿ ನಿಂತು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಮಹಿಳೆಗೆ ಥಳಿಸಿದ ಮೊಹಮ್ಮದ್ ನಯಾಜ್ (32), ಮೊಹಮ್ಮದ್ ಗೌಸ್ ಪೀರ್ (45), ಚಾಂದ್ ಪೀರ್(35), ಇನಾಯಿತ್ ಉಲ್ಲಾ(51), ದಸ್ತಗೀರ್(24) ಹಾಗೂ …

Read More »

ಕಮಿಷನ್ ಕೊಟ್ಟರೂ ಅಧಿಕಾರಿಗಳು ಬಾಕಿ ಹಣ ಬಿಡುಗಡೆ ಮಾಡ್ತಿಲ್ಲ:ಗುತ್ತಿಗೆದಾರರ ಸಂಘ ಆಕ್ರೋಶ

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ಕೊಡದೇ ಯಾವುದೇ ಕೆಲಸ ಆಗಲ್ಲ ಎಂಬ ಪ್ರತಿಪಕ್ಷ ಬಿಜೆಪಿ ಆರೋಪದ ಬೆನ್ನಲ್ಲೇ ಹಾವೇರಿ ಗುತ್ತಿಗೆದಾರರ ಸಂಘ ಸಹ ಆಕ್ರೋಶ ಹೊರಹಾಕಿದೆ. “ಹಾವೇರಿ ಗುತ್ತಿಗೆದಾರರಿಗೆ ಬರಬೇಕಿದ್ದ ಕಾಮಗಾರಿಗಳ ನೂರಾರು ಕೋಟಿ ಹಣ ಪಾವತಿಸದೇ ಸರ್ಕಾರ ಸತಾಯಿಸುತ್ತಿದೆ. ಅಲ್ಲದೆ ಕೆಲವೊಂದು ಇಲಾಖೆಗಳಲ್ಲಿ 10 ರಿಂದ 13 ಪರ್ಸೆಂಟ್ ಕಮಿಷನ್ ಕೊಟ್ಟರೂ ಬಾಕಿ ಹಣ ಬಿಡುಗಡೆ ಮಾಡಿಸದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ” ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ …

Read More »

ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಪ್ರಕರಣದ ಆರೋಪಿ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿದ್ದಾನೆ.

ಹುಬ್ಬಳ್ಳಿ: ಇಲ್ಲಿನ ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂದು ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆಗೈದ ಆರೋಪಿ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ಬಿಹಾರದ ರಕ್ಷಿತ್​ ಕ್ರಾಂತಿ ಸಾವನ್ನಪ್ಪಿದ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಎಚ್ಚರಿಕೆ ನೀಡಿದರೂ ಹಲ್ಲೆಗೆ ಮುಂದಾಗಿದ್ದರಿಂದ ಗುಂಡು ಹಾರಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ, ಘಟನೆ ಖಂಡಿಸಿ ಸ್ಥಳೀಯರು ಅಶೋಕನಗರ ಪೊಲೀಸ್​ ಠಾಣೆ ಎದುರು …

Read More »

ಹುಬ್ಬಳ್ಳಿಯಲ್ಲಿ ಬಾಲಕಿ ಕೊಲೆ: ‘ಘಟನೆ ಬಗ್ಗೆ ಕೇಳಿ ಮೈ ಜುಮ್ ಅಂತು’- ಸಚಿವ ಜಮೀರ್

ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಪುಟ್ಟ ಕಂದಮ್ಮನ ಮೇಲಿನ ಅತ್ಯಾಚಾರ ಯತ್ನ ಮತ್ತು ಕೊಲೆ ದುಷ್ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. “ಈ ಘಟನೆಯ ಬಗ್ಗೆ ಕೇಳಿ ಮೈಯಲ್ಲ ಜುಮ್ ಅಂದಿದೆ. ನಾಲ್ಕು ವರ್ಷದ ಮಗುರೀ ಅದು. ಆ ಸಿಸಿಟಿವಿ ವಿಡಿಯೋ ನೋಡಲು ಆಗಲಿಲ್ಲ” ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಘಟನೆಯನ್ನು ಖಂಡಿಸಿದರು.”ಅಪರಾಧಿಗೆ ಕಾನೂನಿನಡಿ ಸರಿಯಾದ ಶಿಕ್ಷೆಯಾಗಬೇಕು. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳುವಂತೆ ಆಗಬಾರದು. ಕಾಯುತ್ತಾ ಕುಳಿತಂತೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ. …

Read More »

ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ

ಮಂಡ್ಯ, ಏಪ್ರಿಲ್​ 13: ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರವಾಗಲು (Conversion) ಒಪ್ಪದ ಪತ್ನಿ ಮತ್ತು ಅತ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ (Srirangapatna) ನಡೆದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಶ್ರೀಕಾಂತ್‌ ಎಂಬುವರು ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. 15 ವರ್ಷದ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಲಕ್ಷ್ಮೀ ಜೊತೆ ಶ್ರೀಕಾಂತ್ ವಿವಾಹವಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ …

Read More »

ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಕೇಂದ್ರ ಒಪ್ಪಿಗೆ

ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ. ಶೀ ಶಿವಕುಮಾರ ಸ್ವಾಮೀಜಿಯವರ ಹೆಸರು ಇಡಬೇಕು ಎಂಬುವುದು ತುಮಕೂರು ಜನರ ಬಹುದಿನಗಳ ಒತ್ತಾಯವಾಗಿದೆ. ಇದಕ್ಕೆ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. 89 ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣಕ್ಕೆ ಟೆಂಡರ್​ ಪೂರ್ಣಗೊಂಡಿದೆ. ಹೊಸ ರೈಲು ನಿಲ್ದಾಣ ನಿರ್ಮಾಣದ ಬಳಿಕ, …

Read More »