Breaking News

Yearly Archives: 2024

ಸತೀಶ್ ಸೈಲ್ ಸೇರಿ ಇತರರಿಗೆ ರಿಲೀಫ್: ನಾಳೆ ಬಿಡುಗಡೆ ಸಾಧ್ಯತೆ

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಹೈಕೋರ್ಟ್ ಬುಧವಾರ (ನ)ಆದೇಶ ನೀಡಿದೆ.   ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಆದೇಶ ನೀಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತದಲ್ಲಿ ಶೇ 25 ರಷ್ಟು ಕೋರ್ಟ್ ನಲ್ಲಿ ಠೇವಣಿ ಇಡುವಂತೆ ಷರತ್ತು ವಿಧಿಸಿದೆ. 6 ವಾರದಲ್ಲಿ …

Read More »

ರಾಜ್ಯದ 3 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ : 3 ಗಂಟೆ ವೇಳೆಗೆ ಶೇ.62ರಷ್ಟು ವೋಟಿಂಗ್

ಬೆಂಗಳೂರು,ನ.13- ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು ಬಿರುಸಿನಿಂದ ನಡೆದಿದ್ದು, ಎಲ್ಲೆಡೆ ಉತ್ಸಾಹದಿಂದ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.   ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.55ಕ್ಕೂ ಹೆಚ್ಚು ಮತದಾನವಾಗಿದ್ದು, ಮತದಾನ ಮುಕ್ತಾಯವಾಗುವ ವೇಳೆಗೆ ಶೇ.70ಕ್ಕೂ ಹೆಚ್ಚು ದಾಖಲೆ ಪ್ರಮಾಣದ ಮತದಾನವಾಗುವ ಸಾಧ್ಯತೆ ಇದೆ. …

Read More »

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ ಮಾಡಿದ್ದಾರೆ. ‘ನಮಗೆ ಮನೆಯ ಹಕ್ಕುಪತ್ರ ನೀಡಿಲ್ಲ’ ಎಂದು ಆರೋಪಿಸುತ್ತಿರುವ ದೂರುದಾರರು, ಮನೆ ಮುಂದೆ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಚುನಾವಣಾ ಬಹಿಷ್ಕಾರ ಪ್ರದೇಶ’ ಎಂದು ಫಲಕ ಹಾಕಿರುವ ಮತದಾರರು, ‘ಉಳುವವನೇ ಭೂಮಿ ಒಡೆಯ ದಲಿತನ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾಡಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳ ಸುಳ್ಳು …

Read More »

ಖಾವಿಧಾರಿಗಳಿಂದ ದೇಹದಾನ ಜಾಗೃತಿ

ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ಮಠಾಧೀಶರು ಧರ್ಮ ಪ್ರಸಾರದ ಜತೆಗೆ ದೇಹದಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ‘ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಮೌಢ್ಯದಿಂದ ಹೊರಬನ್ನಿ’ ಎಂದು ಕರೆ ಕೊಟ್ಟಿದ್ದಾರೆ.  2017ರಲ್ಲಿ ಇಲ್ಲಿನ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, 2019ರಲ್ಲಿ ರಾಮದುರ್ಗ ತಾಲ್ಲೂಕಿನ ನಾಗನೂರಿನ ಗುರುಬಸವ ಮಠದ ಬಸವಪ್ರಕಾಶ ಸ್ವಾಮೀಜಿ ದೇಹದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.   2011ರಲ್ಲಿ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ನೇತ್ರದಾನ, 2019ರಲ್ಲಿ ನಾಗನೂರಿನ ಬಸವಗೀತಾ ತಾಯಿ ಚರ್ಮ ಮತ್ತು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಇದರಿಂದ ಪ್ರೇರಣೆಗೊಂಡ …

Read More »

ಚಾಲಕರಿಗೆ ತಲೆನೋವಾದ ‘ಪ್ಯಾನಿಕ್ ಬಟನ್’

ಕಲಬುರಗಿ: ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ಜಿಲ್ಲೆಯ ಸಾರ್ವಜನಿಕ ಸೇವಾ ವಾಹನಗಳ ಪೈಕಿ 197 ವಾಹನಗಳಿಗೆ ಮಾತ್ರವೇ ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಮತ್ತು ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ಉಪಕರಣ ಅಳವಡಿಕೆಯಾಗಿದೆ.   ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಡಿವೈಸ್ ಅಳವಡಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸೂಚಿಸಿದ್ದಾರೆ. ಅದರಂತೆ ಶಾಲಾ ವಾಹನ, …

Read More »

ಕರ್ನಾಟಕ ವಿಧಾನಸಭೆ ಉಪಚುನಾವಣೆ : ಬೆಳಗ್ಗೆ11.30 ರವರೆಗೆ 3 ಕ್ಷೇತ್ರಗಳ `ಮತದಾನ’ದ ಶೇಕಡವಾರು ವಿವರ ಹೀಗಿದೆ!

ಕರ್ನಾಟಕ ವಿಧಾನಸಭೆ ಉಪಚುನಾವಣೆ : ಬೆಳಗ್ಗೆ11.30 ರವರೆಗೆ 3 ಕ್ಷೇತ್ರಗಳ `ಮತದಾನ’ದ ಶೇಕಡವಾರು ವಿವರ ಹೀಗಿದೆ! ಬೆಂಗಳೂರು : ಇಂದು ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮೂರು ಕ್ಷೇತ್ರಗಳಲ್ಲಿ ಈವರೆಗೆ 26.33 ರಷ್ಟು ಮತದಾನವಾಗಿದ್ದು, ಶಿಗ್ಗಾಂವಿ, ಶೇ.27.02ರಷ್ಟು ಮತದಾನ, ಸಂಡೂರು: ಬೆಳಿಗ್ಗೆ 11.30 ಗಂಟೆಯವರೆಗೆ ಶೇ.26.01ರಷ್ಟು ಮತದಾನ, ಚೆನ್ನಪಟ್ಟಣ: ಬೆಳಿಗ್ಗೆ 11.30 ಗಂಟೆವರೆಗೆ ಶೇ.25.96ರಷ್ಟು ಮತದಾನವಾಗಿದೆ.   …

Read More »

ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು “ಕರಿಯ’ ಎಂದು ಕರೆದಿದ್ದ ವಸತಿ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರು ರಾಜ್ಯದ ಹಲವೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು.   ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್‌ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್‌ ಸರಕಾರ, ಮುಖ್ಯಮಂತ್ರಿ, ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. …

Read More »

3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

ಬೆಂಗಳೂರು: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಒಂದಡೆಯಾಗಿದ್ದರೆ, ಈ 3 ಕ್ಷೇತ್ರಗಳಲ್ಲಿ ಚುನಾವಣೆ ಅಕ್ರಮಗಳ ಭರಾಟೆಯೂ ಜೋರಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿವರೆಗೆ 3 ಕ್ಷೇತ್ರಗಳಲ್ಲಿ ನಗದು ಹಣ, ಅಕ್ರಮ ಮದ್ಯ, ಉಚಿತ ಉಡುಗೊರೆ ಸೇರಿದಂತೆ 33.33 ಕೋಟಿ ರೂ. ಮೊತ್ತದ ಚುನಾವಣೆ ಅಕ್ರಮಗಳನ್ನು ಜಪ್ತಿ ಮಾಡಲಾಗಿದ್ದು, ಈ ಅಕ್ರಮಗಳಲ್ಲಿ ಚನ್ನಪಟ್ಟಣದ್ದೇ ಸಿಂಹಪಾಲು ಇದ್ದು, 30 ಕೋಟಿ ರೂ.ಗೂ ಅಧಿಕ ಅಕ್ರಮಗಳನ್ನು ಜಪ್ತಿ …

Read More »

ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ

ಮುಂಬಯಿ: ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಬಿಜೆಪಿಯನ್ನು “ನಾಯಿ’ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅಕೋಲಾ ಪಶ್ಚಿಮ ಕ್ಷೇತ್ರದಲ್ಲಿ ಮಾತನಾಡಿ, “ಹಿಂದುಳಿದ ವರ್ಗದವರನ್ನು ಬಿಜೆಪಿಯವರು ನಾಯಿಯೆಂದು ಕರೆಯುತ್ತಾರೆ. ಅವರಿಗೆ ನೀವು ಮತ ನೀಡಬೇಕೇ? ನಾಯಿಗೆ ಯಾವ ಸ್ಥಳ ತೋರಿಸಲಾಗುತ್ತದೆಯೋ, ಈ ಬಾರಿಯ ಎಲೆಕ್ಷನ್‌ನಲ್ಲಿ ಬಿಜೆಪಿಯನ್ನು ಸೋಲಿಸಿ ಅದೇ ಸ್ಥಿತಿ ತರಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಕಿರೀಟ್‌ ಸೋಮಿಯಾ, ಕಾಂಗ್ರೆಸ್‌ ಸೋಲುತ್ತಿದೆ. ಹಾಗಾಗಿ ಇಂಥ ಹೇಳಿಕೆ …

Read More »

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ದೀಪಾವಳಿ ಹಬ್ಬದ ಅನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸೀ ವಿವಾಹ. ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ಉತ್ಥಾನ ದ್ವಾದಶಿಯನ್ನು ತುಳಸೀಯ ವಿವಾಹ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಈ ದಿನದಂದು ಭಗವಾನ್‌ ವಿಷ್ಣುವು ತುಳಸೀ ದೇವಿಯನ್ನು ಸಾಲಿಗ್ರಾಮದ ರೂಪದಲ್ಲಿ ಅಥವಾ ಪ್ರಬೋಧಿನಿ ಏಕಾದಶಿಯಂದು ಶ್ರೀ ಕೃಷ್ಣನ ಅವತಾರದಲ್ಲಿ ವಿವಾಹವಾದರು ಎನ್ನಲಾಗಿದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ, …

Read More »