Breaking News

Yearly Archives: 2024

ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್:ವೇತನ ಸಹಿತ ‘ಮುಟ್ಟಿನ ರಜೆ’ ನೀಡಲು ಕರ್ನಾಟಕ ಸರ್ಕಾರ ತೀರ್ಮಾನ

ಬೆಂಗಳೂರು: ಕರ್ನಾಟಕವು ಮಹಿಳೆಯರಿಗೆ ವರ್ಷಕ್ಕೆ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆ ಪಡೆಯಲು ಅರ್ಹವಾದ ನೀತಿಯನ್ನು ಅಂತಿಮಗೊಳಿಸುತ್ತಿದೆ, ಈ ಕ್ರಮವು ಲಕ್ಷಾಂತರ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಈ ಯೋಜನೆ ಜಾರಿಯಾದರೆ ಬಿಹಾರ, ಕೇರಳ ಮತ್ತು ಒಡಿಶಾದ ನಂತರ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ನಾಲ್ಕನೇ ರಾಜ್ಯ ಕರ್ನಾಟಕವಾಗಲಿದೆ.   ಈ ಕುರಿತು ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕಿ ಸಪ್ನಾ ಎಸ್ ನೇತೃತ್ವದ …

Read More »

ತುರ್ತು ಸೇವೆಗಷ್ಟೇ ಮರಳಿರುವ ಕೋಲ್ಕತ್ತಾ ಕಿರಿಯ ವೈದ್ಯರು; OPDಗೆ ಬರದೆ ಪ್ರತಿಭಟನೆ ಮುಂದುವರಿಕೆ

ಕೋಲ್ಕತ್ತಾ: ಪ್ರತಿಭಟನಾ ನಿರಿತ ಕಿರಿಯ ವೈದ್ಯರು 42 ದಿನಗಳ ಬಳಿಕ ಕರ್ತವ್ಯಕ್ಕೆ ಮರಳಲು ಒಪ್ಪಿದ್ದಾರೆ, ಆದರೆ ಪೂರ್ತಿಯಾಗಿ ಅಲ್ಲ. ತುರ್ತು ಸೇವೆಗಷ್ಟೇ ಮರಳಲಿರುವ ವೈದ್ಯರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಿಲ್ಲ. ತಮ್ಮ ಧರಣಿಯ ಭಾಗವಾಗಿ ಸರ್ಕಾರಿ ಆಸ್ಪತ್ರೆಗಳಾದ್ಯಂತ ಹೊರರೋಗಿ ವಿಭಾಗಗಳಿಗೆ (OPD) ತಮ್ಮ ಸೇವೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಆಗಸ್ಟ್‌ನಲ್ಲಿ ತಮ್ಮ ಸಹೋದ್ಯೋಗಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ತಮ್ಮ ಧರಣಿಯನ್ನು ಮುಂದುವರೆಸಲಿದ್ದಾರೆ. ಪಶ್ಚಿಮ ಬಂಗಾಳದ ಜೂನಿಯರ್ …

Read More »

ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಅತೀ ಹೆಚ್ಚು ಜನಸಂಖ್ಯೆಯ ಬೃಹತ್‌ ಪ್ರಜಾಪ್ರಭುತ್ವ ದೇಶ ವಾದ ಭಾರತದಲ್ಲಿ ಚುನಾವಣೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಆದರೂ ಚುನಾವಣ ಆಯೋಗ ಎಲ್ಲ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಶ್ಲಾಘಿಸಲೇಬೇಕು. ಇಷ್ಟಾದರೂ ಕಾಲಕಾಲಕ್ಕೆ ಚುನಾವಣ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅನಿವಾರ್ಯ. ಈಗ ಒಂದು ದೇಶ, ಒಂದು ಚುನಾವಣೆ ಎಂಬ ಪರಿಕಲ್ಪನೆಯ ಆಧಾರದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಯಾವಾಗಲೂ ವಿಶಿಷ್ಟವಾಗಿ ಮತ್ತು ದೂರದೃಷ್ಟಿಯಿಂದ ಚಿಂತಿಸುವ …

Read More »

ಜೈಲಿನೊಳಗೆ ‘ದರ್ಶನ್ ಫೋಟೋ’ ಕ್ಲಿಕ್ಕಿಸಿದ್ದ ರೌಡಿ ಪೋಲಿಸ್ ವಶಕ್ಕೆ

ಬೆಂಗಳೂರು: ಕೈದಿಯೊಬ್ಬ ತೆಗೆದ ಫೋಟೋ ವೈರಲ್ ಆದ ಬಗ್ಗೆ ಜೈಲಿನ ಅಧಿಕಾರಿಯೊಬ್ಬರು ದಾಖಲಿಸಿರುವ ಎಫ್‌ಐಆರ್ ಬಗ್ಗೆ ಬೆಂಗಳೂರು ಆಗ್ನೇಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ಯಾಂಗ್ ಸ್ಟರ್ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಲ್ಲಾ ಸೀನ ಅವರೊಂದಿಗೆ ದರ್ಶನ್ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಪಾನೀಯ ಕುಡಿಯುತ್ತಿರುವ ಚಿತ್ರ ಇದಾಗಿದೆ.   ನಾಗರಾಜ್ ಮತ್ತು ವೇಲು ಎಂಬುವರನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರದಲ್ಲಿ …

Read More »

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ವಿರುದ್ಧದ ಆರೋಪ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸರಕಾರದಲ್ಲಿ ಗೊಂದಲಗಳು ಶುರುವಾಗಿವೆ. ಕೆಲವು ಹಿರಿಯ ಸಚಿವರು ಸೇರಿ ಅರ್ಧ ಡಜನ್‌ಗೂ ಹೆಚ್ಚು ನಾಯಕರು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಇಡೀ ರಾಜಕೀಯ ಬೆಳವಣಿಗೆಯ ಕೇಂದ್ರಬಿಂದು ಸ್ವತಃ ಸರಕಾರದ ಭಾಗವಾಗಿರುವ ರಾಜ್ಯ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ ಅವರು. “ಸಚಿವನಾಗಿ ನಾನೂ ದಣಿದಿದ್ದೇನೆ. ಇನ್ನೇನಿದ್ದರೂ ಸಿಎಂ ಆಗಬೇಕು’ ಎಂದು ಈಚೆಗೆ …

Read More »

ರಾಜಕೀಯ ಎದುರಾಳಿಗಳನ್ನ ಸೆದೆ ಬಡಿಯಲು ಮುನಿರತ್ನರಿಂದ ಏಡ್ಸ್‌ ಟ್ರ್ಯಾಪ್‌!

ಬೆಂಗಳೂರು, ಸೆಪ್ಟೆಂಬರ್‌ 20: ಜಾತಿ ನಿಂದನೆ ಆರೋಪದಡಿ ಜೈಲು ಸೇರಿದ್ದ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣವು ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಭಯಾನಕ ಅಂಶ ಬೆಚ್ಚಿಬೀಳಿಸುವಂತಿದೆ.‌ ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್‌ ಮಾಡಿಸುತ್ತಿದ್ದನಂತೆ. ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್‌ ಮಾಡಿ ಅವರಿಗೆ ಏಡ್ಸ್‌ ಸೋಂಕಿತರ ರಕ್ತ ಇಂಜೆಕ್ಟ್‌ ಮಾಡಿಸುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿಗಳನ್ನ ಮಟ್ಟ …

Read More »

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಂದ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ. 2024- 25 ನೇ ಸಾಲಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನ ಸಹಾಯ ನೀಡಲಾಗುವುದು. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ನವೆಂಬರ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈಗಾಗಲೇ ಸರ್ಕಾರದ ವಿವಿಧ …

Read More »

ಅಥಣಿ | ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಗೆ ₹65.86 ಲಕ್ಷ ಲಾಭ: ಪರಪ್ಪಾ ಸವದಿ

ಅಥಣಿ: ಈಚಿನ ವರ್ಷಗಳಲ್ಲಿ ಅಥಣಿ ತಾಲ್ಲೂಕಿನ 5 ಸಕ್ಕರೆ ಕಾರ್ಖಾನೆಗಳಲ್ಲಿಯೇ ಪ್ರತಿ ಟನ್ ಕಬ್ಬಿಗೆ ಅತಿ ಹೆಚ್ಚು ಬೆಲೆ ಪಾವತಿಸಲಾಗಿದೆ ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು. ಅವರು ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ 32ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಕಳೆದ ಹಂಗಾಮಿನಲ್ಲಿ ಪೂರೈಕೆಯಾದ ಪ್ರತಿ ಟನ್ ಕಬ್ಬಿಗೆ ನಮ್ಮ ಕಾರ್ಖಾನೆಯಿಂದ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ಬಿಲ್ಲನ್ನು ನಿಗದಿತ ಅವಧಿಯಲ್ಲಿಯೇ ಪಾವತಿಸಲಾಗಿದೆ’ ಎಂದರು. …

Read More »

ಸಂಕೇಶ್ವರ | ತರಕಾರಿ ಪೇಟೆ ಎಪಿಎಂಸಿಗೆ ಸ್ಥಳಾಂತರ: ಡಿ.ಸಿ ಆದೇಶ

ಸಂಕೇಶ್ವರ: ಸಂಕೇಶ್ವರದ ದುರದುಂಡೀಶ್ವರ ಮಠದ ಜಾಗದಲ್ಲಿ ನಡೆಯುತ್ತಿದ್ದ ಖಾಸಗಿ ತರಕಾರಿ ಪೇಟೆಯನ್ನು ತಕ್ಷಣವೇ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎ.ಪಿ.ಎಂ.ಸಿ) ಸ್ಥಳಾಂತರಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮೌಖಿಕ ಆದೇಶ ನೀಡಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ತರಕಾರಿ ಬೆಳೆಗಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕೃಷಿ ಉತ್ಪನ ಮಾರಾಟದ ನಿಯಮಾವಳಿಗೆ ಅನುಸಾರವಾಗಿ ಖಾಸಗಿ ತರಕಾರಿ ಪೇಟೆಯನ್ನು ಎ.ಪಿ.ಎಂ.ಸಿ ಗೆ ಸ್ಥಳಾಂತರ ಮಾಡಲಾಗುವುದು …

Read More »

ಸಕ್ಕರೆ ಕಾರ್ಖಾನೆ ಅವ್ಯವಹಾರ: ತನಿಖೆಗೆ ಆಗ್ರಹಿಸಿ ಸೆ.20ರಂದು ಧರಣಿ

ಕಿತ್ತೂರು: ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ (ರಾಣಿ ಶುಗರ್) ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಖಂಡಿಸಿ ಸೆ.20ರ ಬೆಳಿಗ್ಗೆ 10 ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುವುದಾಗಿ ರೈತ ಸಂಘಟನೆಗಳ ಒಕ್ಕೂಟದ ಮುಖಂಡರು ಘೋಷಿಸಿದ್ದಾರೆ.   ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಗುರುವಾರ ರೈತ ಮುಖಂಡರ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಬೀರಪ್ಪ ದೇಶನೂರ, ಮುಖಂಡರಾದ ಬಸನಗೌಡ ಪಾಟೀಲ, ಬಸವರಾಜ ಮೊಕಾಶಿ ಮಾತನಾಡಿ, ‘ಕಳೆದ ಹಂಗಾಮಿನಲ್ಲಿ ಸಕ್ಕರೆ ಇಳುವರಿಯನ್ನು …

Read More »