Breaking News

Daily Archives: ಡಿಸೆಂಬರ್ 30, 2024

ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿರುವಾಗ; ಶ್ರೀರಾಮಸೇನೆ ಡಿ.31 ರಂದು ಪಾಶ್ಚಾತ್ಯ ಹೊಸ ವರ್ಷ ಆಚರಿಸದಿರಿ; ಶ್ರೀರಾಮಸೇನೆ

ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿರುವಾಗ; ಶ್ರೀರಾಮಸೇನೆ ಡಿ.31 ರಂದು ಪಾಶ್ಚಾತ್ಯ ಹೊಸ ವರ್ಷ ಆಚರಿಸದಿರಿ; ಶ್ರೀರಾಮಸೇನೆ ಮಾಜಿ ಪಿಎಂ ಮನಮೋಹನಸಿಂಗ್ ನಿಧನ ಹಿನ್ನೆಲೆ ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿದೆ ಹೋಟೆಲನಲ್ಲಿ ಕುಡಿತ-ಕುಣಿತಕ್ಕೆ ಅವಕಾಶ ನಿಡದಿರಿ ಡಿಸೆಂಬರ್ 31 ಪಾಶ್ಚಾತ್ಯ ಹೊಸ ವರ್ಷ ಆಚರಿಸದಂತೆ ಬೆಳಗಾವಿಯ ಶ್ರೀರಾಮ ಸೇನೆ ಒತ್ತಾಯಿಸಿದೆ. ಡಿಸೆಂಬರ್ 31ರ ರಾತ್ರಿ ವಿದೇಶಿ ಹೊಸ ವರ್ಷ ನಿಮಿತ್ಯ ಕುಡಿತ, ಕುಣಿತ, ನಶೆ, ಮಾದಕವಸ್ತುಗಳ ಸೇವನೆ,ಅಶ್ಲೀಲತೆ, ವ್ಯಭಿಚಾರ ಮುಂತಾದ ಅನೈತಿಕ ಚಟುವಟಿಕೆಗಳು ಪ್ರತಿ …

Read More »

ಅಂಬೇಡ್ಕರ್ ಕುರಿತು ಅಮಿತ್​​​ ಶಾ ಹೇಳಿಕೆ ಖಂಡಿಸಿ ಬಳ್ಳಾರಿಯ ಕಂಪ್ಲಿ ಸಂಪೂರ್ಣ ಬಂದ್​!

ಬಳ್ಳಾರಿ: ಡಾ. ಬಿ.ಆರ್​​​. ಅಂಬೇಡ್ಕರ್​​​​ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಕಂಪ್ಲಿ ತಾಲೂಕು ಸಂಪೂರ್ಣ ಬಂದ್​ ಆಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್​​​ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳ ಪ್ರತಿಭಟನಕಾರರು ಬೆಳಗ್ಗೆ 6 ಗಂಟೆಯಿಂದಲೇ ಬಂದ್​ ಆರಂಭಿಸಿದ್ದಾರೆ. ಬಂದ್​ ಇದ್ದರೂ ಕಂಪ್ಲಿಯಲ್ಲಿ ಎಂದಿನಂತೆ ದಿನಸಿ ಮಾರುಕಟ್ಟೆಗಳು, ಮತ್ತು ಆಟೋ, ಕ್ಯಾಬ್​ ಮಾತ್ರ ಓಪನ್ …

Read More »

ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ:ಡಿ. ಕೆ ಶಿ

ಬೆಂಗಳೂರು : ನಮ್ಮದು ಸ್ವಚ್ಛ ಆಡಳಿತದ ಸರ್ಕಾರ. ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ತಿಳಿಸಿದರು. ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯದಮವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿ ಅವರ ಹೆಸರು ಯಾರೂ ಬರೆದಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರ …

Read More »

ನಿಷೇಧಿತ ಗಾಂಜಾ, ಎಂಡಿಎಂಎ ಪೌಡರ್​ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನ ಸೆನ್ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಉಡುಪಿ : ಮಾದಕ ವಸ್ತು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಸೆನ್‌ ಅಪರಾಧ ದಳದ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಸಹಿತ ಮಾರಾಟಕ್ಕೆ ಬಳಸಿದ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ-ಕಾರ್ಕಳ ಹೆದ್ದಾರಿಯ ನೀರೆ ಎಂಬಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್‌ ಅನ್ನು ಮಾರಾಟ ಮಾಡಲು ಯತ್ನಿಸುತಿದ್ದರು. ಈ …

Read More »

ವಂಚನೆ ಪ್ರಕರಣ : ಆರೋಪಿ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ ಕೆ ಸುರೇಶ್ ದೂರು

ಬೆಂಗಳೂರು : ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ವಂಚನೆ ಮಾಡಿದ ಆರೋಪದ ಹಿನ್ನೆಲೆ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ. ಕೆ ಸುರೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ. ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಐಶ್ವರ್ಯ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿ. ಕೆ ಸುರೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. …

Read More »

ದಾಬಸ್ ಪೇಟೆ ಬಳಿ ಸರಣಿ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ

ನೆಲಮಂಗಲ: ಇಲ್ಲಿಯ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಂಬೆಳಗ್ಗೆ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ವೀರಣ್ಣ(55) ಮೃತ ದುರ್ದೈವಿ. ದಾಬಸ್ ಪೇಟೆಯ ರಾಷ್ಟ್ರೀಯ ಹೆದ್ದಾರಿ 48ರ ಎಡೇಹಳ್ಳಿ ಬಳಿ ಇಂದು ಬೆಳಗ್ಗೆ ಈ ಸರಣಿ ಅಪಘಾತ ಸಂಭವಿದೆ. ಕೈಗಾರಿಕಾ ಪ್ರದೇಶದ ಹೆಬ್ಬಾಗಿಲು ಮುಂಭಾಗದಲ್ಲಿ ಪ್ಯಾಸೆಂಜರ್ ಆಟೋ, ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತವಾಗಿದ್ದು, ಘಟನೆಯಲ್ಲಿ ವೀರಣ್ಣ ಸ್ಥಳದಲ್ಲೇ ಮೃತಪಟ್ಟರೆ, ಎಂಬಿಬಿಎಸ್ ಓದುತ್ತಿದ್ದ …

Read More »

ತಮ್ಮ ಆರೋಗ್ಯದ ಬಗ್ಗೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

ದಾವಣಗೆರೆ: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ದಾವಣಗೆರೆ ದಕ್ಷಿಣ ಮತ ಕ್ಷೇತ್ರದ ಹಿರಿಯ ಕಾಂಗ್ರೆಸ್​ ಶಾಸಕ, ಡಾ.ಶಾಮನೂರು ಶಿವಶಂಕರಪ್ಪ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. ಆರೋಗ್ಯ ತಪಾಸಣೆಗೆ ಎಂದು ಬೆಂಗಳೂರಿಗೆ ತೆರಳಿದ್ದ ಶಾಮನೂರು ಶಿವಶಂಕರಪ್ಪ ಅವರು ಮತದಾರರು, ಅಭಿಮಾನಿಗಳಿಗೆ ವಿಡಿಯೋ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ನಾಡಿನ ಜನತೆಗೆ 2025ನೇ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ವಿಡಿಯೊದಲ್ಲಿ ಮಾತನಾಡಿರುವ ಅವರು, ಮತದಾರರ ಆಶೀರ್ವಾದದಿಂದ ನಾನು …

Read More »

ಗೃಹಿಣಿ ಆತ್ಮಹತ್ಯೆಗೆ ಶರಣು, ಪತಿ ವಿರುದ್ಧ ಕೊಲೆ ಆರೋಪ

ಬೆಳಗಾವಿ: ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಮತ್ತು ಅವರ ಮನೆಯವರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕಿರುಕುಳಕ್ಕೆ ಬೇಸತ್ತು ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ(32) ಮೃತ ಮಹಿಳೆ. ಶನಿವಾರ ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ಸಾಂಬ್ರಾದ ಮಾರುತಿ ಜೋಗಾನಿ ಜೊತೆಗೆ ರಾಕಸಕೊಪ್ಪ …

Read More »

ರೈತ ಉತ್ಪಾದಕ ಸಂಸ್ಥೆಯಿಂದ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಹಾಗೂ ಹಸು ಸಾಕಾಣಿಕೆಯ ಕುರಿತು ತರಬೇತಿ

ಹಾವೇರಿ : ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗುತ್ತಿವೆ. ಸರಿಯಾದ ಬೆಲೆ, ಸರಿಯಾದ ಇಳುವರಿ, ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅತಿಯಾದ ಮಳೆ, ಬರ ಸೇರಿದಂತೆ ಪ್ರಕೃತಿಯ ಹಲವು ವಿಕೋಪಗಳಿಂದ ಸಹ ರೈತರು ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಆದರೆ ರೈತರು ಪರ್ಯಾಯ ಕೃಷಿಯಾದ ಮಿಶ್ರ ಬೇಸಾಯದ ಮೂಲಕ ಈ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು ಎನ್ನುತ್ತಿದೆ ಹಾವೇರಿಯ ಗ್ರೀನ್​ಚಿಕ್​ ರೈತರ ಉತ್ಪಾದಕರ ಕಂಪನಿ. ಈ …

Read More »

ಕಾರವಾರದಲ್ಲೊಂದು ರಂಗೋಲಿ ಜಾತ್ರೆ

ಕಾರವಾರ(ಉತ್ತರ ಕನ್ನಡ): ಜಾತ್ರೆ ಅಂದಾಕ್ಷಣ ನಮಗೆ ನೆನಪಾಗೋದು ಅಲ್ಲಿನ ತಿಂಡಿ ತಿನಿಸುಗಳು, ಹೂವು, ಹಣ್ಣು ಕಾಯಿ, ಮಕ್ಕಳ ಆಟದ ಸಾಮಾನುಗಳು. ಆದರೆ, ಕಾರವಾರ ನಗರದಲ್ಲಿ ನಡೆದ ಜಾತ್ರೆಯೊಂದು ನಾವು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿತ್ತು. ಜಾತ್ರೆಗೆ ಆಗಮಿಸಿದ ಸಾವಿರಾರು ಜನರು ದೇವರ ದರ್ಶನ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಜಾತ್ರೆ ನಡೆಯುವ ಸ್ಥಳದಲ್ಲಿನ ಮನೆಗಳ ಮುಂದೆ ಹಾಕಿರುವ ರಂಗೋಲಿ ನೋಡುವುದರಲ್ಲಿಯೇ ಮೈಮರೆತಿದ್ದರು. ಈ ಸ್ಪೆಷಲ್​ ರಂಗೋಲಿ ಜಾತ್ರೆ ಕುರಿತಾದ ವರದಿ ಇಲ್ಲಿದೆ. ರಂಗೋಲಿ ಜಾತ್ರೆ ಖ್ಯಾತಿಯ ಕಾರವಾರ …

Read More »