Breaking News

Daily Archives: ಡಿಸೆಂಬರ್ 6, 2024

ಶೈಕ್ಷಣಿಕ ಪ್ರವಾಸಕ್ಕೆ ವಿಮಾನದಲ್ಲಿ ಹೋದ ಕೊಪ್ಪಳದ ಸರ್ಕಾರಿ ಶಾಲೆ ಮಕ್ಕಳು

ಕೊಪ್ಪಳ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಹೈದರಾಬಾದ್‌ಗೆ ಶೈಕ್ಷಣಿಕ ಪ್ರವಾಸಕ್ಕೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದು ಕಲ್ಯಾಣ ಕರ್ನಾಟಕದಲ್ಲಿ ಮೊದಲ ಪ್ರಯತ್ನವಾಗಿದೆ. ಶಿಕ್ಷಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಈ ಪ್ರವಾಸ ಸಾಧ್ಯವಾಗಿದೆ. ಮಕ್ಕಳ ಕನಸನ್ನು ನನಸಾಗಿದೆ.ಅವರೆಲ್ಲಾ ವಿಮಾನದ ಸದ್ದು ಬಂದರೆ ಶಾಲೆಯಿಂದ ಹೊರಬಂದು ಆಕಾಶದಲ್ಲಿ ಹೋಗುತ್ತಿದ್ದ ವಿಮಾನವನ್ನು ಬೆರಗುಕಣ್ಣಿನಿಂದ ನೋಡ್ತಿದ್ದರು. ತಾವು ಕೂಡ ಒಮ್ಮೆಯಾದರೂ ವಿಮಾನದಲ್ಲಿ ಹಾರಾಡಬೇಕು ಅನ್ನೋ ಆಸೆಯಿದ್ದರು ಕೂಡ ಆರ್ಥಿಕ ಸಂಕಷ್ಟ ಮಕ್ಕಳ ಆಸೆಗೆ ಅಡ್ಡಿಯಾಗಿತ್ತು. …

Read More »

ಡಾಕ್ಟರ್​​ ಆಗಬೇಕೆಂಬ ಕನಸು ನನಸಾಗದಿದ್ದಕ್ಕೆ ಜೀವ ಕಳೆದುಕೊಂಡ ವಿದ್ಯಾರ್ಥಿನಿ

ಕಲಬುರಗಿ, (ಡಿಸೆಂಬರ್ 06): ಎಂಬಿಬಿಎಸ್​ ವೈದ್ಯೆಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಡೆದಿದೆ. ಕಲಬುರಗಿ ಮೂಲದ ತನುಜಾ ಎನ್ನುವ ವಿದ್ಯಾರ್ಥಿನಿ, ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಆದ್ರೆ, ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಎರಡೂ ಬಾರಿಯೂ ಸಹ ಎಂಬಿಬಿಎಸ್​ ಸೀಟು ಸಿಕ್ಕಿರಲಿಲ್ಲ. ಇದರಿಂದ ಮನನೊಂದಿದ್ದ ತನುಜಾ, ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಅನಂತಪುರ ಜಿಲ್ಲೆಯ ರಾಯದುರ್ಗದ ಬಳಿ ರೈಲಿನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ರಾಯದುರ್ಗದ …

Read More »

ಬಿಮ್ಸ್​ನಲ್ಲಿ 5 ಬಾಣಂತಿಯರ ಸಾವು ಪ್ರಕರಣ: ಸ್ಫೋಟಕ ಅಂಶ ಬಯಲು, ಪರಿಹಾರ ಘೋಷಿಸಿದ ಸರ್ಕಾರ

ಬಳ್ಳಾರಿ, ಡಿಸೆಂಬರ್​ 06: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ (BIMS) ಮೃತಪಟ್ಟ ಬಾಣಂತಿಯರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಒಂಬತ್ತೂ ಬಾಣಂತಿಯರಿಗೆ IV ದ್ರಾವಣ ನೀಡಲಾಗಿತ್ತು. IV ದ್ರಾವಣ ಪಡೆದ ಎರಡೇ ಗಂಟೆಯಲ್ಲಿ ಒಂಬತ್ತೂ ಬಾಣಂತಿಯರು ಅಸ್ವಸ್ಥರಾಗಿದ್ದರು ಎಂಬ ಸ್ಫೋಟಕ ಅಂಶ ಬಯಲಾಗಿದೆ. ಒಂಬತ್ತೂ ಗರ್ಭಿಣಿಯರಿಗೆ ನವೆಂಬರ್​ 09 ರಂದೇ ಸಿಸೇರಿಯನ್​ ಮೂಲಕ ಹೆರಿಗೆ ಮಾಡಲಾಗಿತ್ತು. ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ಹೆರಿಗೆ ಮಾಡಲಾಗಿತ್ತು. …

Read More »

ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ

ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳಿಂದ ನಮಗೆಲ್ಲರಿಗೂ ಕೂಡ ಸ್ಫೂರ್ತಿಯ ಸೆಲೆ, ಆದರ್ಶ ವ್ಯಕ್ತಿ. ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಮಾನವತಾವಾದಿ. ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿದ ಕೊಡುಗಗಳು ಅಗಾಧವಾದದ್ದು. ಡಿಸೆಂಬರ್‌ 6 ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 68ನೇ ಪುಣ್ಯ ತಿಥಿ. ಈ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತಿದ್ದು, ಈ …

Read More »

ನನಗೆ ಸಚಿವ ಸ್ಥಾನ ಕೊಡಲೇಬೇಕು:ಎಸ್​ಎನ್ ಸುಬ್ಬಾರೆಡ್ಡಿ

ಡಿಸೆಂಬರ್ 6: ನನಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್​ಎನ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ. ಸಚಿವ ಸ್ಥಾನ ಕೇಳಲು ನನಗೆ ಹಕ್ಕಿದೆ. ನನಗೆ ಸಚಿವ ಸ್ಥಾನ ಬೇಕು. ಅಪರೇಷನ್ ಕಮಲದಲ್ಲಿ ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಫರ್ ಕೊಟ್ಟಿದ್ದರು. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯಿಂದ ಇದ್ದೆ. ಮುಂದೆ ಸಚಿವ ಸಂಪುಟ ಪುನರಚನೆ ವೇಳೆ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರು ಹೇಳಿದ್ದಾರೆ. ನಾನು …

Read More »