Breaking News

Monthly Archives: ನವೆಂಬರ್ 2024

ಕಾರ್ಯಕರ್ತರಿಗೆ ಹೊಸ ಸಂದೇಶ: ವಿಜಯೇಂದ್ರಗೆ ಮತ್ತೊಂದು ಶಾಕ್ ಕೊಟ್ಟ ಯತ್ನಾಳ್​

ಕಲಬುರಗಿ/ಬೆಂಗಳೂರು, (ನವೆಂಬರ್ 26): ವಕ್ಪ್ ವಿಚಾರದಲ್ಲಿ ಕರ್ನಾಟಕ ಬಿಜೆಪಿಯಲ್ಲಿನ ಅಂತರ್ಯುದ್ಧ ಮುಂದುವರಿದಿದೆ. ರಾಜ್ಯ ಬಿಜೆಪಿಯಿಂದ ಅಧಿಕೃತವಾಗಿ ವಕ್ಪ್ ಹೋರಾಟ ಕುರಿತ ಪ್ರವಾಸ ತಂಡದಲ್ಲಿ ಸೇರ್ಪಡೆ ಮಾಡಿದ್ದರೂ ಪ್ರತ್ಯೇಕ ಮಿತ್ರಕೂಟದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡ ಬೀದರ್ ನಿಂದ ಇಂದು ಜನ ಜಾಗೃತಿ ಅಭಿಯಾನ ಪ್ರಾರಂಭಿಸಿದೆ‌. ಯತ್ನಾಳ್ ತಂಡದ ಅಭಿಯಾನದಿಂದ ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡಿದ್ದರೆ, ಬೀದರ್ ಜಿಲ್ಲಾಧ್ಯಕ್ಷರಂತೂ ಯಾರೋ ಅನಾಮಿಕರು ಬಿಜೆಪಿ ಬ್ಯಾನರ್ ನಲ್ಲಿ …

Read More »

ವಿಶ್ವದಲ್ಲೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ಡಾ ಅಂಬೇಡ್ಕರ್ ಭಾರತಕ್ಕೆ ನೀಡಿದ್ದಾರೆ: ಬಿಎಸ್ ಯಡಿಯೂರಪ್ಪ

ಬೆಂಗಳೂರು: ಭಾರತದಾದ್ಯಂತ ಇಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯುರಪ್ಪನವರು, ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ವಿಶ್ವದಲ್ಲೇ ಅತಿ ಶ್ರೇಷ್ಠ ಎನಿಸಿಕೊಂಡಿರುವ ಸಂವಿಧಾನವನ್ನು ದೇಶಕ್ಕೆ ನೀಡಿದ ದಿನವಾಗಿದೆ, ರಾಷ್ಟ್ರದ ಉದ್ದಗಲಕ್ಕೆ ಇವತ್ತಿನ ದಿನವನ್ನು ಸಂವಿಧಾನ ದಿನವಾಗಿ ಅಚರಿಸಲಾಗುತ್ತದೆ ಎಂದು ಹೇಳಿದರು.

Read More »

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿಲ್ಲ, ಮುಂದೆ ನೋಡೋಣ: ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿಲ್ಲ, ಮುಂದೆ ನೋಡೋಣ: ಸತೀಶ್ ಜಾರಕಿಹೊಳಿ ಬೆಂಗಳೂರು: ನಗರದಲ್ಲಿಂದು ನಮ್ಮ ವರದಿಗಾರನೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ವಿಚಾರ ಸದ್ಯಕ್ಕಂತೂ ಹೈಕಮಾಂಡ್ ಮುಂದಿಲ್ಲ, ಮುಂಬರುವ ದಿನಗಳಲ್ಲಿ ಅದನ್ನು ಮಾಡುವುದಾದರೆ ಮತ್ತು ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ಪರಿಗಣಿಸುವುದಾದರೆ ನೋಡೋಣ, ಅದು ಯೋಚಿಸಬೇಕಾದ ವಿಷಯ ಎಂದರು. ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ ಬಳಿಕ ಸತೀಶ್ ಅವರ …

Read More »

ಅಮಿತ್ ಶಾ ಅವರನ್ನು ಭೇಟಿ ಮಾಡಿ ಮದುವೆ ಆಮಂತ್ರಣ ನೀಡಿದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್.

ದೆಹಲಿ:  ದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮದುವೆ ಆಮಂತ್ರಣ ನೀಡಿದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್. ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಇಂದು ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್ ಅವರೊಂದಿಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಶ್ರೀ ಪ್ರದೀಪ್ ಶೆಟ್ಟರ್ ಅವರ …

Read More »

ಮಾದಕ ವಸ್ತುಗಳ ನಿರ್ಮೂಲನ ಜಾಗೃತಿ ಅಭಿಯಾನ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಭಾಗಿ

ಮಾದಕ ವಸ್ತುಗಳ ನಿರ್ಮೂಲನ ಜಾಗೃತಿ ಅಭಿಯಾನ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಭಾಗಿ ಹುಟ್ಟು ಅನ್ನೋದು ಒಂದು ಗಿಫ್ಟ್ ಅದನ್ನ ಕಾಪಾಡಿಕೊಳ್ಳಬೇಕು ಮಾದಕ ವಸ್ತುಗಳಿಂದ ಜೀವನ ಹಾಳಾಗುತ್ತದೆ ವಿದ್ಯಾರ್ಥಿಗಳು ಮಾದಕ ವಸ್ತುವಿನ ನಶೆ ಬಿಡಬೇಕು ನಾನು ಪ್ರತಿ ಅಭಿಮಾನಿಯನ್ನು ಸ್ನೇಹಿತನನ್ನಾಗಿ ನೋಡ್ತೇನೆ. ಡ್ರಗ್ಸ್ ನಿಂದ ನಾವು ದೂರ ಇರಬೇಕು. ಶಬ್ದವೇದಿ ಯಲ್ಲಿ ಅಪ್ಪಾಜಿ ಅದ್ಬುತವಾಗಿ ಹೇಳಿದ್ದಾರೆ. ಹುಟ್ಟು ಅನ್ನೋದು ಒಂದು ಗಿಫ್ಟ್ ಅದನ್ನ ಕಾಪಾಡಿಕೊಳ್ಳಬೇಕು. ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ …

Read More »

ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಹಾಕಿರುವ ಹಂಪ್ಸ್ ಕೆಲ ದಿನಗಳ ಹಿಂದೆ ಸ್ವತಃ ಕೈಯಲ್ಲಿ ಸಲಾಕಿ ಹಿಡಿದು ಹದಗೆಟ್ಟ ರೋಡ ಹಂಪ್ಸ್ ತೆರವು ಮಾಡಲು ಮುಂದಾಗಿದ್ದರು.

ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಹಾಕಿರುವ ಹಂಪ್ಸ್ ಕೆಲ ದಿನಗಳ ಹಿಂದೆ ಸ್ವತಃ ಕೈಯಲ್ಲಿ ಸಲಾಕಿ ಹಿಡಿದು ಹದಗೆಟ್ಟ ರೋಡ ಹಂಪ್ಸ್ ತೆರವು ಮಾಡಲು ಮುಂದಾಗಿದ್ದರು. . ಮಳೆಯಿಂದ ರೋಡ್ಸ್ ಹಂಪ್ಸ್ ಹದಗೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ರಸ್ತೆ ಹಂಪ್ಸ್ ಮೇಲೆ ದಿನವಿಡೀ ಸಂಚಾರ ಮಾಡಿದರು ಕೂಡಾ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದ ಮಹಿಳೆಯರು, ಅಧಿವೇಶನ ಪ್ರಾರಂಭ ರಸ್ತೆಗೆ ಅಳವಡಿಸಲಾಗಿರುವ …

Read More »

ರಾಧಿಕಾ ಜೊತೆ ಮುಂಬೈನಲ್ಲಿ ಯಶ್ ಸುತ್ತಾಟ; ಕಾಲಿಗೆ ಬಿದ್ದ ಅಭಿಮಾನಿ

ಯಶ್ ಅವರು ‘ಕೆಜಿಎಫ್ ಚಾಪ್ಟರ್ 2’ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಮುಂಬೈನಲ್ಲಿದ್ದಾರೆ. ಹೌದು, ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಮುಂಬೈನ ಸ್ಟುಡಿಯೋಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಯಶ್ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ರಾಧಿಕಾ ಜೊತೆ ಅವರು ಸುತ್ತಾಟ ನಡೆಸುತ್ತಿದ್ದಾರೆ. ಯಶ್ ಅವರು ಮುಂಬೈನಲ್ಲಿ ರಾಧಿಕಾ ಪಂಡಿತ್ ಹಾಗೂ …

Read More »

ಬೆಂಡೆಬೆಂಬಳಿ ಗ್ರಾಮದಲ್ಲಿ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿ ಸ್ಪರ್ಧೆ ಆಯೋಜನೆ

ಯಾದಗಿರಿಯ ಗ್ರಾಮೀಣ ಕ್ರೀಡೆ: ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ; ಫೋಟೋಸ್​ ನೋಡಿ ಆಧುನಿಕ ಜಗತ್ತಿನಲ್ಲಿ ಹಳೇ ಸಂಪ್ರದಾಯಗಳು ಮರೆಮಾಚಿ ಹೋಗುತ್ತಿವೆ. ಹಳೇ ಕ್ರೀಡೆಗಳು ಮಾಯವಾಗಿ ಹೊಸ ಜಮಾನ ಶುರುವಾಗಿದೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಜಮಾಲೋದ್ದೀನ್ ದರ್ಗಾದ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡಿನ ಕಲ್ಲು ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. …

Read More »

ಖಾದ್ರಿಗೆ ಬಂಪರ್ ಗಿಫ್ಟ್​ ಶಿಗ್ಗಾಂವಿ ಫಲಿತಾಂಶ ಪ್ರಕಟ 2 ದಿನದಲ್ಲಿ ಸಿದ್ದರಾಮಯ್ಯ ಕೊಟ್ಟದ್ದ ಭರವಸೆಯನ್ನು ಈಡೇರಿಸಿದ್ದಾರೆ.

ಬೆಂಗಳೂರು, (ನವೆಂಬರ್ 25): ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಉಮೇದುವಾರಿಕೆ ವಾಪಸ್​ ಪಡೆದುಕೊಂಡಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಬಂಪ್ ಗಿಫ್ಟ್​ ನೀಡಲಾಗಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ಅಜ್ಜಂಪೀರ್ ಖಾದ್ರಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಶಿಗ್ಗಾಂವಿ ಉಪಚುನಾವಣೆ ವೇಳೆ ತಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದಕ್ಕೆ …

Read More »

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲೇ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ

ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾದ ಕರ್ನಾಟದ ಹೆಮ್ಮೆ ಕೆಎಂಎಫ್ ‘ನಂದಿನಿ’ ಬ್ರ್ಯಾಂಡ್‌ನಡಿ 156ಕ್ಕೂ ಹೆಚ್ಚು ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು ಇದೀಗ ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲೇ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹಾಲಿನ ಉಪ ಉತ್ಪನ್ನ ‘ವೇ ಪೌಡರ್‌’ ಮತ್ತು ಗೋಧಿ ಬೆರೆಸಿ ತಯಾರಿಸಲಾಗುವ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟಿನಲ್ಲಿ ಪ್ರೋಟೀನ್‌ ಪ್ರಮಾಣ ಹೆಚ್ಚಿರುತ್ತದೆ. ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟು ಖಾಸಗಿ ಬ್ರ್ಯಾಂಡ್‌ಗಳ ದೋಸೆ ಹಿಟ್ಟಿಗಿಂತ ಹೆಚ್ಚು …

Read More »