Breaking News

Daily Archives: ನವೆಂಬರ್ 15, 2024

ಸುಕನ್ಯಾ ಸಮೃದ್ಧಿ ಯೋಜನೆ : ಪೋಷಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಭಾರತ ಸರ್ಕಾರವು ಬೇಟಿ ಬಚಾವೋ-ಬೇಟಿ ಪಢಾವೋ ಅಭಿಯಾನದ ಅಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಅನ್ನು ಪ್ರಾರಂಭಿಸಿದೆ. ಈ ಯೋಜನೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ. ಈ ಯೋಜನೆಯಲ್ಲಿ, ಪೋಷಕರು ತಮ್ಮ ಮಗಳ ಶಿಕ್ಷಣ ಮತ್ತು ಮದುವೆಗಾಗಿ ಹೂಡಿಕೆ ಮಾಡುತ್ತಾರೆ ಮತ್ತು ಮಗಳಿಗೆ 18 ವರ್ಷವಾದಾಗ, ಹೂಡಿಕೆ ಮೊತ್ತದೊಂದಿಗೆ ಬಡ್ಡಿಯನ್ನು ಪಡೆಯುತ್ತಾರೆ.   ಈ ಯೋಜನೆಯಲ್ಲಿ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಬೇಕು. ಇದರ ನಂತರ, ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ ಮತ್ತು ಮಗಳಿಗೆ 18 …

Read More »

ಕಬ್ಬು ಕಟಾವು ಋತು: ಮಹಾರಾಷ್ಟ್ರದಲ್ಲಿ ಮತದಾನದಿಂದ 12 ಲಕ್ಷ ಮಂದಿ ವಂಚಿತ?

ಪುಣೆ: ನವೆಂಬರ್ 20 ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯಲ್ಲಿ ಮರಾಠವಾಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ ಭಾಗದ ಸುಮಾರು 12 ಲಕ್ಷ ಮಂದಿ ಕಬ್ಬು ಕಟಾವು ಕಾರ್ಮಿಕರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ನವೆಂಬರ್ 15 ರಿಂದ ಕಬ್ಬು ಕಟಾವು ಋತು ಆರಂಭವಾಗಲಿದ್ದು, ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಕಬ್ಬು ಕಟಾವು ಮಾಡುವ ಕಾರ್ಮಿಕರು ‍ಪಶ್ಚಿಮ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ಮಹಾರಾಷ್ಟ್ರ ಕಬ್ಬು ಕಟಾವುಗಾರರ …

Read More »

ಎರಡೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ

ತುಮಕೂರು: ಮನೆಯ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಮಗುವಿನ ಕಣ್ಣು, ತಲೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲೂಕಿನ ಹೆಗ್ಗೆರೆಯಲ್ಲಿ ಈ ಘಟನೆ ನಡೆದಿದೆ. ಹಲೀಜಾ ಖಾನಂ ನಾಯಿ ದಾಳಿಗೆ ಗಂಭೀರವಾಗಿ ಗಾಯಗೊಂಡಿರುವ ಮಗು. ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಗ್ಗೆರೆ ಗ್ರಾಮಸ್ಥರು ಬೀದಿ ನಾಯಿ ಹಾವಳಿಗೆ ರೋಸಿ ಹೋಗಿದ್ದು, ನೂರಾರು ಬೀದಿ ನಾಯಿಗಳು ರಸ್ತೆಯಲ್ಲಿಯೇ ಒಡಾಡುತ್ತಿವೆ. ಮಕ್ಕಳು, ಹಿರಿಯರನ್ನು …

Read More »

ಬಾಲಕಿಯ ಮೇಲೆ ವೃದ್ಧನಿಂದ ಅತ್ಯಾಚಾರ!?

ಕಲಬುರ್ಗಿ : ರಾಜ್ಯದಲ್ಲಿ ಮತ್ತೊಂದು ಬಿಚ್ಚಿ ಬಿಡಿಸುವ ಘಟನೆ ನಡೆದಿದ್ದು, ಕಲಬುರ್ಗಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಘಟನೆಯು ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ನರೋಣ ಪಟ್ಟಣದಲ್ಲಿ ನಡೆದಿದೆ. ಹೌದು ನರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಕಲಬುರ್ಗಿ ಜಿಲ್ಲೆಯ ಆಳ ತಾಲೂಕಿನ ನರೋಣದ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ …

Read More »

ಅಧಿಕಾರಿಗಳಿಗೆ ಧಮ್ಕಿ ಹಾಕಿ ಹೆದರಿಸಿ ಬೆದರಿಸಿದ್ದಾರೆ; ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ವಕ್ಫ್‌ ವಿರುದ್ಧದ (Waqf Property Dispute) ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಧ್ವನಿಗೂಡಿಸಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.ಬಿಜೆಪಿ ಮಾಜಿ ಶಾಸಕ‌ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಬಿಜೆಪಿಯ ಅತೃಪ್ತರ ಗುಂಪು ಸುದ್ದಿಗೋಷ್ಠಿ ನಡೆಸಿ ಹೋರಾಟದ ಬಗ್ಗೆ ಮಾಹಿತಿ ನೀಡಿತು. ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್, ಬಾಗಲಕೋಟೆ ಮಿನಿ ವಿಧಾನಸೌಧವನ್ನು ವಕ್ಪ್ …

Read More »

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : 10 ದಿನಗಳಲ್ಲಿ ಚಿನ್ನದ ಬೆಲೆ 5,000 ರೂ. ಬೆಳ್ಳಿ ಬೆಲೆ 10,000 ರೂ. ಇಳಿಕೆ!

ನವದೆಹಲಿ : ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಕಳೆದ 10 ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರವಾಗಿ ಅಗ್ಗವಾಗುತ್ತಿವೆ. ಅಚ್ಚರಿಯ ವಿಷಯವೆಂದರೆ ಕೇವಲ 10 ದಿನಗಳಲ್ಲಿ ಚಿನ್ನವು ಅದರ ಮೇಲಿನ ಹಂತದಿಂದ ಶೇಕಡಾ 6 ರಷ್ಟು ಅಗ್ಗವಾಗಿದೆ ಮತ್ತು 4750 ರೂಪಾಯಿಗಳಷ್ಟು ಕಡಿಮೆಯಾಗಿದೆ.   ಇದೇ ವೇಳೆ ಬೆಳ್ಳಿ ದಾಖಲೆ ಕುಸಿತ ಕಂಡಿದ್ದು, 10 ದಿನಗಳಲ್ಲಿ 10 ಸಾವಿರ ರೂ. ಬೆಳ್ಳಿ 1 ಲಕ್ಷ ದಾಟಿತ್ತು ಆದರೆ …

Read More »

ನೌಕರರಿಗೆ ಅನ್ಯಾಯ, ಸರ್ಕಾರದ ವಿರುದ್ಧ ಸ್ವಪಕ್ಷ ಶಾಸಕ ರಾಜು ಕಾಗೆ ಅಪಸ್ವರ

ಬೆಂಗಳೂರು, ನವೆಂಬರ್ 15: ಶಕ್ತಿ ಯೋಜನೆಯ ಪರಿಷ್ಕರಣೆ ಮಾಡಲಾಗುತ್ತದೆ, ನಿಲ್ಲಿಸಲಾಗುತ್ತದೆ ಎಂದು ಚರ್ಚೆ ಜೋರಾಗಿತ್ತು. ಇದರ ಮಧ್ಯೆ ರಾಜ್ಯ ಸರ್ಕಾರಿ ನೌಕರರು, ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಅವರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಗೆ ಬಹಳ ಜನರು ಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಯಾವುದೇ …

Read More »

ದರ್ಶನ್ ಮಧ್ಯಂತರ ಜಾಮೀನಿಗೆ ಕುತ್ತು: ಸುಪ್ರೀಂ ಮೇಲ್ಮನವಿಗೆ ಸರ್ಕಾರ ಅಸ್ತು!

ಆರೋಗ್ಯ ಸಮಸ್ಯೆಯ ಕಾರಣಕ್ಕೆ ಚಿಕಿತ್ಸೆ ಪಡೆಯಲು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್‌ಗೆ ಹೊಸ ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪಿ ಹಾಗೂ ನಟ ದರ್ಶನ್‌ ಅವರಿಗೆ ಇದೀಗ ಹೊಸ ಸಂಕಷ್ಟ ಸೃಷ್ಟಿಯಾಗಿದೆ. ನಟ ದರ್ಶನ್‌ ಅವರಿಗೆ ಬೆನ್ನು ನೋವು ಇರುವುದರಿಂದ ಚಿಕಿತ್ಸೆಗೆಂದು ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಆರು ವಾರಗಳ ಮಧ್ಯಂತ ಜಾಮೀನನ್ನು ನೀಡಲಾಗಿದೆ. ಅದರಲ್ಲಿ ಈಗಾಗಲೇ ಎರಡು ವಾರಕ್ಕೂ ಹೆಚ್ಚು ಸಮಯ ಆಗಿದೆ. ಇದೀಗ ಹೈಕೋರ್ಟ್‌ ನೀಡಿರುವ …

Read More »

ಬೀಡಾಡಿ ದನಗಳ ಹಾವಳಿ: ತಡೆಗೆ ಮುಂದಾದ ಪುರಸಭೆ

ಬೀಡಾಡಿ ದನಗಳ ಹಾವಳಿ: ತಡೆಗೆ ಮುಂದಾದ ಪುರಸಭೆ ಚಿಕ್ಕೋಡಿ: ಪಟ್ಟಣದ ರಸ್ತೆಗಳ ಮೇಲೆ ಬೇಕಾಬಿಟ್ಟಿಯಾಗಿ ಜಾನುವಾರುಗಳನ್ನು ಬಿಟ್ಟಿದ್ದಾರೋ, ಅವರೆಲ್ಲರೂ ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲದೇ ಹೋದಲ್ಲಿ ಗೋಶಾಲೆಗಳಿಗೆ ಜಾನುವಾರುಗಳನ್ನು ರವಾನೆ ಮಾಡುವುದಾಗಿ ಪುರಸಭೆ ಎಚ್ಚರಿಕೆ ನೀಡಿದೆ. ಬೀಡಾಡಿ ದನಗಳು ರಸ್ತೆ ಮೇಲೆ ತಿರುಗಾಡುವುದು, ಮಲಗುವುದು ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಮಕ್ಕಳು, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಬೀಡಾಡಿ ದನಗಳ ಮಾಲೀಕರು ತಮ್ಮ ತಮ್ಮ ಜಾನುವಾರುಗಳನ್ನು ಗುರುತಿಸಿ ತೆಗೆದುಕೊಂಡು …

Read More »

ಬೈಲಹೊಂಗಲ | ಬೆಂಕಿ ಅವಘಡ: ಸುಟ್ಟು ಕರಕಲಾದ ಬಣವೆ

ಬೈಲಹೊಂಗಲ: ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸೋಯಾಬೀನ್ ಕಾಳಿನ ಬಣವೆ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ದೊಡವಾಡ ಗ್ರಾಮದ ಬುಧವಾರ ತಡರಾತ್ರಿ ಸಂಭವಿಸಿದೆ. ರೈತ ಸಿದ್ದಪ್ಪ ವೀರಭದ್ರಪ್ಪ ಹುದಲಿ ಅವರಿಗೆ ಸೇರಿದ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ. ಬೈಲಹೊಂಗಲದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು.   ’11 ಎಕರೆಯಲ್ಲಿ ಬೆಳೆದಿದ್ದ ಸೋಯಾಬೀನ್‌ ಕಾಯಿಗಳನ್ನು ಒಂದೆಡೆ ರಾಶಿ ಮಾಡಿ ಇಟ್ಟಿದ್ದೆವು. ಇದರಿಂದ ಸುಮಾರು ₹5 ಲಕ್ಷ ಕೈಗೆಟುಕಬಹುದು ಎಂದು ಅಂದಾಜಿಸಿದ್ದೆವು. ಆದರೆ, …

Read More »