ಬೆಂಗಳೂರು, ಅಕ್ಟೋಬರ್ 29: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಂಗಳವಾರರ (ಅಕ್ಟೋಬರ್ 29) ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ನಾಳೆ ಬುಧವಾರ ಅಕ್ಟೋಬರ್ 30ಕ್ಕೆ ಕಾಯ್ದಿರಿಸಿದ್ದಾರೆ. ಅರ್ಜಿ ವಿಚಾರಣೆ ವೇಳೆ ನಟ ದರ್ಶನ್ ತೂಗುದೀಪ ಅವರ ಆರೋಗ್ಯ ಸಮಸ್ಯೆಯನ್ನು, ಅವರಿಗೆ ಚಿಕಿತ್ಸೆ ಅಗತ್ಯತೆ ಕುರಿತು …
Read More »Monthly Archives: ಅಕ್ಟೋಬರ್ 2024
30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
ಮುಂಬಯಿ: ರೀ- ರಿಲೀಸ್ ಟ್ರೆಂಡ್‌ಗೆ ಬಾಲಿವುಡ್‌ನ (Bollywood) ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾ ʼಕರಣ್ ಅರ್ಜುನ್ʼ (Karan Arjun) ಸೇರಿದೆ. ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shah Rukh Khan) ಜತೆಯಾಗಿ ನಟಿಸಿದ್ದ, ರಾಕೇಶ್ ರೋಷನ್ ನಿರ್ದೇಶನ (Rakesh Roshan) ಮಾಡಿದ್ದ ʼಕರಣ್ ಅರ್ಜುನ್ʼ ಸಿನಿಮಾ ಮತ್ತೆ ಥಿಯೇಟರ್‌ನಲ್ಲಿ ತೆರೆ ಕಾಣಲಿದೆ. 1995ರ ಜನವರಿಯಲ್ಲಿ ತೆರೆಗೆ ಬಂದಿದ್ದ ʼಕರಣ್ ಅರ್ಜುನ್ʼ ಆ ಕಾಲದಲ್ಲಿ ಬಾಕ್ಸಾಫೀಸ್‌ನಲ್ಲಿ ದೊಡ್ಡ …
Read More »ವಿಜಯಪುರದ ಬಳಿಕ ಯಾದಗಿರಿಗೂ ಕಾಲಿಟ್ಟ ವಕ್ಫ್ ವಿವಾದ: 1440 ರೈತರ ಕೃಷಿ ಭೂಮಿ ವಕ್ಫ್ ಬೋರ್ಡ್ ಗೆ ವರ್ಗಾವಣೆ
ಯಾದಗಿರಿ: ವಿಜಯಪುರದ ಬಳಿಕ ಯಾದಗಿರಿ ಜಿಲ್ಲೆಯಲ್ಲಿಯೂ ವಕ್ಫ್ ಬೋರ್ಡ್ ರೈತರ ಕೃಷಿ ಜಮೀನು ವಶಕ್ಕೆ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ರೈತರ ಭೂಮಿ ಪಹಣಿ ಕಾಲಂ ನಂಬರ್ 11ರ ಮೇಲೆ ವಕ್ಫ್ ಎಂದು ನಮೂದಿಸಲಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ಇದರಿಂದ ರೈತರು ಬೀದಿಗೆ ಬಂದಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ 1440 ರೈತರ ಕೃಷಿ ಭೂಮಿ ವಕ್ಫ್ ಬೋರ್ಡ್ ಗೆ ವರ್ಗಾಯಿಸಲಾಗಿದೆ. ಈ …
Read More »ಸಚಿವ ಪ್ರಲ್ಹಾದ ಜೋಶಿ ಸಹೋದರ ಬಿಡುಗಡೆಗೆ ಹೈಕೋರ್ಟ್ ಆದೇಶ
ಬೆಂಗಳೂರು,ಅಕ್ಟೋಬರ್ 29: ಲೋಕಸಭೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಸುಲಿಗೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಮತ್ತಿತರರ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದೆ. ಅದೇ ರೀತಿ ಎಫ್‌ಐಆರ್ ರದ್ದುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದೆ. ಬಿಜೆಪಿಯಿಂದ ಟಿಕೆಟ್ ಕೊಡಿಸುವ ಆರೋಪಕ್ಕಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ್ ಜೋಶಿ, ಅವರ ಪುತ್ರ ಅಜಯ್ ಜೋಶಿ ಮತ್ತು ಎಸ್. …
Read More »ಬನಹಟ್ಟಿ- ಮುಧೋಳ ರಸ್ತೆ: ಸಂಚಾರ ದುಸ್ತರ
ರಬಕವಿ ಬನಹಟ್ಟಿ: ಬನಹಟ್ಟಿಯಿಂದ ಜಗದಾಳ, ನಾವಲಗಿ, ಕುಳಲಿ ಮಾರ್ಗವಾಗಿ ಮುಧೋಳ ನಗರಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ತರಕಾರಿ ಮಾರಲು ಬರುವ ಜನರಿಗೆ ತೊಂದರೆಯಾಗಿದೆ. ಬಹಳಷ್ಟು ಗುಂಡಿಗಳು ನಿರ್ಮಾಣವಾದ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಕೆಂಪು ಬಟ್ಟೆಯನ್ನು ಸುತ್ತಿದ ಧ್ವಜಗಳನ್ನು ನಿಲ್ಲಿಸುತ್ತಿದ್ದಾರೆ. ಅದರಲ್ಲೂ ಜಗದಾಳದಿಂದ ಕುಳಲಿ ಗ್ರಾಮದ ಮಧ್ಯದ ರಸ್ತೆ ಹೆಚ್ಚು ಕೆಟ್ಟಿದೆ. ರಸ್ತೆಯಲ್ಲಿ ಅಪಾರ ಪ್ರಮಾಣದ ತಗ್ಗುಗಳು ನಿರ್ಮಾಣವಾಗಿವೆ. ರಾತ್ರಿ …
Read More »ವಾಕಿಂಗ್ನಲ್ಲಿದ್ದ ಮುಡಾ ಅಧಿಕಾರಿ ಇಡಿ ದಾಳಿ ಸುದ್ದಿ ಕೇಳ್ತಿದ್ದಂತೆ ಅಲ್ಲಿಂದಲೇ ರನ್ನಿಂಗ್!
ಸಿಎಂ ಸಿದ್ದರಾಮಯ್ಯರ ಬುಡಕ್ಕೆ ಸುತ್ತಿಕೊಂಡಿರುವ ಮುಡಾ ಹಗರಣದ ತನಿಖೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ಮುಡಾ ಮಾಜಿ ಆಯುಕ್ತರು ಮತ್ತು ಮುಖ್ಯಮಂತ್ರಿ ಆಪ್ತರಿಗೆ ಇಡಿ ಶಾಕ್ ಕೊಟ್ಟಿದೆ. ಸೋಮವಾರ ಇಡಿ ಅಧಿಕಾರಿಗಳು ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 9 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಆ ಕುರಿತ ವಿವರ ಇಲ್ಲಿದೆ. ಬೆಂಗಳೂರು, ಅಕ್ಟೋಬರ್ 29: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು …
Read More »ತಹಶೀಲ್ದಾರ್ ಕರ್ತವ್ಯಲೋಪದಿಂದ ಸರ್ಕಾರಕ್ಕೆ ಕೈ ತಪ್ಪಿದ ಜಮೀನು
ಬಳ್ಳಾರಿ: ನಗರದ ಪ್ರತಿಷ್ಠಿತ ಅವ್ವಂಬಾವಿಯಲ್ಲಿನ ನೂರಾರು ಕೋಟಿ ರೂಪಾಯಿ ಮೌಲ್ಯದ 11.59 ಎಕರೆ ಸರ್ಕಾರಿ ಜಮೀನನ್ನು ಬಳ್ಳಾರಿ ತಾಲ್ಲೂಕು ತಹಶೀಲ್ದಾರ್ ಗುರುರಾಜ್ ಛಲುವಾದಿ ನಿಯಮಬಾಹಿರವಾಗಿ ಬೇರೊಬ್ಬರಿಗೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೆಪ್ಟೆಂಬರ್ 26ರಂದೇ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಮನೆಗಳು ಇರುವ ಅವ್ವಂಬಾವಿಯಲ್ಲಿ ಮಾರ್ಗಸೂಚಿ ದರವೇ …
Read More »ಪುನೀತ್ ಸಿನಿಮಾದಲ್ಲಿ ನಟಿಸಲು ನಯಾಪೈಸೆ ಬೇಡ ಎಂದಿದ್ದ ದರ್ಶನ್!
ಇಂದು ನಟ ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸ್ಮಾರಕದ ಬಳಿ ಇಂದು ಬೆಳಿಗ್ಗೆಯಿಂದಲೇ ಜನಸಾಗರ ಹರಿದುಬಂದಿದೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಒಡನಾಟ ಮುನ್ನೆಲೆಗೆ ಬಂದಿದೆ. ಇಬ್ಬರೂ ನಟರ ನಡುವೆ ಉತ್ತಮ ಒಡನಾಟ ಮೊದಲಿನಿಂದಲೂ ಇತ್ತು. ಆದರೆ, ಕೆಲ ಅಂದಾಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರ ನಡುವೆ ಕಿಡಿ ಹೊತ್ತಿಸಿ, ಬೆಂಕಿ ಕಾಯಿಸಿಕೊಂಡಿದ್ದರು. ದರ್ಶನ್ …
Read More »ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಮಹಿಳೆ ಆತ್ಮಹತ್ಯೆ
ಶಿವಮೊಗ್ಗ: ಪತಿ-ಪತ್ನಿ ನಡುವಿನ ಜಗಳಕ್ಕೆ ಬೇಸತ್ತ ಪತ್ನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬಾನಗರದಲ್ಲಿ ನಡೆದಿದೆ. ಕಮಲಾ ಬಿ.ಪಿ (35) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ತಡರಾತ್ರಿ ತಾಳಗುಪ್ಪ-ಮೈಸೂರು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ವಿನೋಬಾನಗರ ರೈಲ್ವೆ ಟ್ರ್ಯಾಕ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ದೇಹ, ತಲೆ, ಕೈಗಳು ಛಿದ್ರಗೊಂಡು ಬೇರ್ಪಟ್ಟಿವೆ. ಕಮಲಾ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಪತಿ-ಪತ್ನಿ ನಡುವೆ …
Read More »ಯತ್ನಾಳ್ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ
ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ ನೀಡಿ ನೊಂದ ರೈತರ ಅಹವಾಲು ಆಲಿಸುವ ಬಿಜೆಪಿ ತಂಡದ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ರಚಿಸಿದ್ದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪುನಾರಚನೆ ಮಾಡಿದ್ದಾರೆ. ಈಗಾಗಲೇ ಇರುವ ಸದಸ್ಯರ ಜೊತೆಗೆ ಸಂಸದ ರಮೇಶ್ ಜಿಗಜಿಣಗಿ, ಶಾಸಕ …
Read More »