Breaking News

Daily Archives: ಅಕ್ಟೋಬರ್ 28, 2024

ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್‌ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ ನೀಡಿ ನೊಂದ ರೈತರ ಅಹವಾಲು ಆಲಿಸುವ ಬಿಜೆಪಿ ತಂಡದ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ರಚಿಸಿದ್ದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪುನಾರಚನೆ ಮಾಡಿದ್ದಾರೆ.   ಈಗಾಗಲೇ ಇರುವ ಸದಸ್ಯರ ಜೊತೆಗೆ ಸಂಸದ ರಮೇಶ್‌ ಜಿಗಜಿಣಗಿ, ಶಾಸಕ …

Read More »

ದ್ರಾಕ್ಷಿ ಮತ್ತೆ ಹುಳಿಯಾಗುವ ಆತಂಕ- ನಷ್ಟ ಅನುಭವಿಸುವ ಭೀತಿ

ತೆಲಸಂಗ: ಬೆಳಗಾವಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ದ್ರಾಕ್ಷಿಗೆ ಈಗ ದಾವನಿ ಹಾಗೂ ಕೊಳೆರೋಗ ಆವರಿಸಿದೆ. ತೆಲಸಂಗ, ಬನ್ನೂರ, ಕನ್ನಾಳ ಸೇರಿದಂತೆ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಪ್ರಸಕ್ತ ವರ್ಷವೂ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.   ರಾಜ್ಯದಲ್ಲಿಯೇ ದ್ರಾಕ್ಷಿ ಬೆಳೆಯುವಲ್ಲಿ 2ನೇ ಸ್ಥಾನದಲ್ಲಿರುವ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು, ದ್ರಾಕ್ಷಿ ಚಾಟ್ನಿ ಮಾಡುವ ಈ ಹಂತದಲ್ಲಿ ಹವಾಮಾನ ವೈಪರೀತ್ಯದಿಂದ ಮೊದಲು ತುತ್ತಿನಲ್ಲೇ ಕಲ್ಲು ಬಂದು ಆತಂಕ ಪಡುವಂತಾಗಿದೆ. ಅಥಣಿ ತಾಲೂಕಿನ …

Read More »

ಡಿ ಕೆ ಶಿವಕುಮಾರ್ ಪಾರ್ಟ್ ಟೈಮ್ ನೀರಾವರಿ ಸಚಿವ.

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಪುನರುಚ್ಛರಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನಾಯಕತ್ವದಲ್ಲಿ ನಡೆಯುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾನು ಭಾಗವಹಿಸುವದಿಲ್ಲ. ಆದರೆ ನಮ್ಮ ಎನ್ ಡಿಎ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದರು. ಸಿ.ಪಿ.ಯೋಗೇಶ್ವರ ಒಳ್ಳೆಯ ಮನುಷ್ಯ. ಇಲ್ಲಿ ಅವರಿಗೆ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಗೆ ಹೋಗಿದ್ದಾರೆ. ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಗೊತ್ತಿಲ್ಲ ಎಂದರು. ಮಹಾರಾಷ್ಟ್ರ …

Read More »

ಪ್ರತಿ ಹೆಣ್ಣಿನ ಹೋರಾಟದ ಹಿಂದಿದೆ ಈ ನೆಲದ ಸ್ವಾಭಿಮಾನ: ಪ್ರೊ. ತ್ಯಾಗರಾಜ

ಬೆಳಗಾವಿ: ಹೋರಾಟ ಎಂಬುದು ಬಾಹ್ಯಿಕ ಸ್ಫೂರ್ತಿಯಿಂದ ಬಂದಾಗ ಅದು ಆ ಕ್ಷಣದ ಹೋರಾಟವಾಗುತ್ತದೆ. ಅದೇ ಅಂತರಾಳದಿಂದ ಬಂದಾಗ ಸಮಸ್ತ ಪರಿಸರವನ್ನೇ ಬಡಿದೆಬ್ಬಿಸುತ್ತದೆ. ಇದಕ್ಕೆ ರಾಣಿ ಚನ್ನಮ್ಮನ ಹೋರಾಟವೇ ಸಾಕ್ಷಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಿ ಎಂ ತ್ಯಾಗರಾಜ ಅಭಿಪ್ರಾಯಪಟ್ಟರು.   ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಣಿ ಚನ್ನಮ್ಮನ ಐತಿಹಾಸಿಕ …

Read More »

ನವೆಂಬರ್ 1ರಿಂದ ಹೊಸ ರೂಲ್ಸ್ ; ಇನ್ಮುಂದೆ ‘ಫೋನ್ ನಂಬರ್’ಗೆ ‘OTP’ ಬರೋದಿಲ್ಲ

ನವದೆಹಲಿ : OTP (ಒನ್ ಟೈಮ್ ಪಾಸ್‌ವರ್ಡ್) ಪರಿಶೀಲನೆ ಪ್ರಕ್ರಿಯೆಯು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬಹಳ ಮಹತ್ವದ್ದಾಗಿದೆ. ಎಲ್ಲಾ ರೀತಿಯ ಸೇವೆಗಳು ಆನ್‌ಲೈನ್‌’ನಲ್ಲಿ ಲಭ್ಯವಿದ್ದರೂ, ಬಳಕೆದಾರರನ್ನು OTP ಯೊಂದಿಗೆ ಗುರುತಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಿನ ಆನ್‌ಲೈನ್ ವಹಿವಾಟುಗಳು ಭದ್ರತೆಗಾಗಿ OTP ಪರಿಶೀಲನೆಯನ್ನ ಅವಲಂಬಿಸಿವೆ. ಆದಾಗ್ಯೂ, ಡಿಜಿಟಲ್ ಭದ್ರತೆ ಮತ್ತು ವಂಚನೆಯನ್ನ ತಡೆಯುವ ಉದ್ದೇಶದಿಂದ ಟೆಲಿಕಾಂ ಕಂಪನಿಗಳು ನವೆಂಬರ್ 1 ರಿಂದ ಹೊಸ ನಿಯಮಗಳನ್ನ ಜಾರಿಗೆ ತರಲು ಸಿದ್ಧವಾಗಿವೆ. ಈ ಕಾರಣದಿಂದಾಗಿ, OTP …

Read More »

ಬೆಂಗಳೂರಲ್ಲಿ ಕಟ್ಟಡ ಕುಸಿತ ಪ್ರಕರಣ: 8 ಮಂದಿ ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ವಿತರಣೆ

ಬೆಂಗಳೂರು: ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಎಂಟು ಕುಟುಂಬ ಕಾರ್ಮಿಕರ ಕುಟುಂಬಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪರಿಹಾರದ ಚೆಕ್ ವಿತರಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2.04 ಲಕ್ಷ ರೂಪಾಯಿ ಮೊತ್ತದ ಚೆಕ್ ಗಳನ್ನು ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಚೆಕ್ ವಿತರಿಸಲಾಗಿದೆ. ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಕಳಪೆ …

Read More »

ಅಂಜಲಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ಹುಬ್ಬಳ್ಳಿ: ಕೆಲ ತಿಂಗಳ ಹಿಂದೆ ವೀರಾಪುರ ಓಣಿಯ ಮನೆಯಲ್ಲಿ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮುಖ್ಯಮಂತ್ರಿ‌ ಪರಿಹಾರ ನಿಧಿಯಿಂದ ₹5ಲಕ್ಷ ಪರಿಹಾರದ ಚೆಕ್ ಅನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿತರಿಸಿದರು.   ಅಂಬಿಗೇರ ಸಮಾಜದ ಮುಖಂಡ ಮನೋಜ ಕರ್ಜಗಿ ಮಾತನಾಡಿ, ‘ಅಂಜಲಿ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ ಸ್ಥಳೀಯ ಜನಪ್ರತಿನಿಧಿ ಗಳ ಸಹಕಾರ ದೊಡ್ಡದು. ₹25 ಲಕ್ಷ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು. ಸದ್ಯ ಸಿಎಂ ಪರಿಹಾರ …

Read More »

ಸಂಕಷ್ಟದಲ್ಲಿ ಅಲೆಮಾರಿಗಳ ಬದುಕು

ಹುಬ್ಬಳ್ಳಿ: ‘ಇವತ್ತು ಈ ಊರು, ನಾಳೆ ಮತ್ತೊಂದು ಊರು. ನಮ್ಮಂತಹ ಅಲೆಮಾರಿಗಳಿಗೆ ಸ್ವಂತ ಜಾಗ, ಮನೆ ಎಂಬುದು ಇರುವುದಿಲ್ಲ. ಆಶ್ರಯ ಸಿಕ್ಕ ಕಡೆ ಉಳಿಯುತ್ತೇವೆ. ಕೆಲ ದಿನಗಳ ಬಳಿಕ ಮತ್ತೆ ಮುಂದಿನ ಊರಿಗೆ ಪ್ರಯಾಣಿಸುತ್ತೇವೆ. ಆಯಾ ಸಮಯಕ್ಕೆ ಸಿಗುವ ವಸ್ತುಗಳನ್ನು ಮಾರುತ್ತ ಬದುಕುತ್ತೇವೆ’ ತಮ್ಮ ದೈನಂದಿನ ಬದುಕನ್ನು ಹೀಗೆ ಸಂಕ್ಷಿಪ್ತವಾಗಿ ವಿವರಿಸಿದವರು ಮಲ್ಲಶೆಟ್ಟಿ. ಅಲೆಮಾರಿ ಸಮುದಾಯದ ಅವರು ಕುಟುಂಬ ಸದಸ್ಯರ ಜೊತೆಗೆ ಹುಬ್ಬಳ್ಳಿಯ ಆರ್‌ಟಿಒ ಕಚೇರಿ ಬಳಿ ತಾತ್ಕಾಲಿಕ ನೆಲೆ …

Read More »

ಡಿಜಿಟಲ್‌ ಅರೆಸ್ಟ್‌; ವಂಚಕರ ಹೊಸ ಟ್ರಿಕ್‌!

ಹುಬ್ಬಳ್ಳಿ: ತಂತ್ರಜ್ಞಾನ ಆವಿಷ್ಕಾರಗಳು ಹೆಚ್ಚುತ್ತಾ ಹೋದಂತೆ, ಸೈಬರ್‌ ವಂಚಕರ ಯೋಜನೆ ಮತ್ತು ಯೋಚನೆಗಳು ಸಹ ವಿಸ್ತಾರವಾಗುತ್ತ ಹೋಗುತ್ತಿವೆ. ಒಟಿಪಿ, ಲಿಂಕ್‌ ಕಳುಹಿಸಿ ಹಣ ವರ್ಗಾವಣೆ, ಮಾರುಕಟ್ಟೆಯಲ್ಲಿ ಹಣ ಹೂಡಿಕೆ ನೆಪದಲ್ಲಿ ಆನ್‌ಲೈನ್‌ ಕಳ್ಳರು, ಇದೀಗ ‘ಡಿಜಿಟಲ್‌ ಅರೆಸ್ಟ್‌’ ಹೆಸರಲ್ಲಿ ಕೋಟಿ ಕೋಟಿ ವಂಚಿಸುತ್ತಿದ್ದಾರೆ.   ಹುಬ್ಬಳ್ಳಿಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಒಂದು ವಾರದ ಅವಧಿಯಲ್ಲಿ ‘ಡಿಜಿಟಲ್‌ ಅರೆಸ್ಟ್‌’ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹1.84 ಕೋಟಿ ವರ್ಗಾಯಿಸಿಕೊಂಡಿದ್ದಾರೆ. …

Read More »

ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: 264 ದ್ವಿಚಕ್ರ ವಾಹನ ವಶ

ಹುಬ್ಬಳ್ಳಿ: ‘ಹು-ಧಾ ಕಮಿಷನರೇಟ್‌ ವ್ಯಾಪ್ತಿಯ ದಕ್ಷಿಣ ಉಪವಿಭಾಗದ ವಿವಿಧೆಡೆ ಶನಿವಾರ ಕಾರ್ಯಾಚರಣೆ ನಡೆಸಿ, ಸರಿಯಾದ ದಾಖಲೆ ಇಲ್ಲದ ಒಟ್ಟು 264 ದ್ವಿಚಕ್ರ ವಾಹನಗಳು ಹಾಗೂ ಮೂರು ಆಟೊಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌ ತಿಳಿಸಿದರು.   ಕಸಬಾಪೇಟ್‌ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿ ಶಹರ, ಘಂಟಿಕೇರಿ, ಕಸಬಾ, ಹಳೆ ಹುಬ್ಬಳ್ಳಿ ಹಾಗೂ ಬೆಂಡಿಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 14 ಕಡೆ ಚೆಕ್‌ಪೋಸ್ಟ್‌ …

Read More »