ಬೆಂಗಳೂರು: ರಾಜ್ಯದ ವಿವಿಧ ಠಾಣೆಗಳಲ್ಲಿ ರೈತ ಮುಖಂಡರು, ಕನ್ನಡಪರ ಹೋರಾಟಗಾರರು, ಕೆಲವು ಸ್ಥಳೀಯ ರಾಜಕೀಯ ಮುಖಂಡರ ವಿರುದ್ಧ ದಾಖಲಾಗಿರುವ 43 ಕ್ರಿಮಿನಲ್ ಪ್ರಕರಣಗಳನ್ನು ಸರಕಾರ ಹಿಂಪಡೆದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ 60 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಕೂಲಂಕಷವಾಗಿ ಚರ್ಚಿಸಿ 43 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ …
Read More »Daily Archives: ಅಕ್ಟೋಬರ್ 11, 2024
ಕುಂದಾಪುರದಿಂದ ತಿರುಪತಿಗೆ ರೈಲು: ವಿಜಯ ದಶಮಿಯಂದು ಚಾಲನೆ
ಕುಂದಾಪುರ: ವಿಜಯದಶಮಿಯ ದಿನದಂದು ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಆರಂಭವಾಗಲಿದ್ದು, ಆ ಮೂಲಕ ಕರಾವಳಿಗರ ದೀರ್ಘ ಕಾಲದ ಬೇಡಿಕೆ ಈಡೇರಿದಂತಾಗಲಿದೆ. ವಿಸ್ತರಣೆಗೊಂಡ ಕಾಚಿಗುಡ ರೇಣಿಗುಂಟ ತಿರುಪತಿ ಮಂಗಳೂರು ರೈಲಿನ ಮೊದಲ ಓಡಾಟವು ಶನಿವಾರ ಆರಂಭಗೊಳ್ಳಲಿದೆ. ಈ ರೈಲು ಕೊಯಮತ್ತೂರು ಮೂಲಕವೂ ಓಡಲಿರುವುದರಿಂದ ಸದ್ಗುರು ಜಗ್ಗಿ ವಾಸುದೇವರ ಈಶ ಯೋಗ ಕೇಂದ್ರ ಮತ್ತು ಆದಿ ಯೋಗಿ ದರ್ಶನಕ್ಕೂ ಸಹಾಯವಾಗಲಿದೆ. ವೇಳಾಪಟ್ಟಿ ಮುರುಡೇಶ್ವರದಿಂದ ಬುಧವಾರ, ಶನಿವಾರ, ತಿರುಪತಿಯಿಂದ ಮಂಗಳವಾರ, ಶುಕ್ರವಾರ ಎಂದು ವಾರಕ್ಕೆರಡು ದಿನ …
Read More »ವಿನಯ್ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ
ಬೆಂಗಳೂರು: ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಹಾಗೂ ಅತ್ಯಾಚಾರ ಸಂತ್ರಸ್ತೆ, ಖಾಸಗಿ ಸುದ್ದಿ ಸಂಸ್ಥೆಯ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ವಿನಯ್ ಕುಲಕರ್ಣಿ ದಾಖಲಿಸಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿದೆ. ಕುಲಕರ್ಣಿ ಬೆಂಗಳೂರು, ಧರ್ಮಸ್ಥಳದಲ್ಲಿ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಾವೇರಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಅ. …
Read More »ಒಂದೇ ಹಗ್ಗದಲ್ಲಿ ನೇಣಿಗೆ ಶರಣಾದ ಯುವಕ-ಯವತಿ
ವಿಜಯನಗರ(ಹೊಸಪೇಟೆ): ಯುವಕ ಹಾಗೂ ಯುವತಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಅ.11ರ ಶುಕ್ರವಾರ ನಡೆದಿದೆ. ಮೈಲಾರ ಗ್ರಾಮದ ನದಿ ತೀರದ ಮರವೊಂದಕ್ಕೆ ಒಂದೇ ಹಗ್ಗದಲ್ಲಿ ಕೊರಳಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಅವರಿಬ್ಬರೂ ಅ.10ರ ಗುರುವಾರ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿಟಿ ನೀಡಿ ದೇವರ ದರ್ಶನ ಪಡೆದಿದ್ದರು. ಯುವಕನ ಶರ್ಟ್ ಜೇಬಿನಲ್ಲಿ ದೇವರ ದರ್ಶನದ ಸಾಮಾನ್ಯ ಚೀಟಿ ಸಿಕ್ಕಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಗ್ರಾಮ ಹಾಗೂ ನದಿ ತೀರದಲ್ಲಿ …
Read More »ದಸರಾ ವೇಳೆಯೇ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ, ದುಪ್ಪಟ್ಟಾಯ್ತು ಸಂಭ್ರಮ
ಮೈಸೂರು ರಾಜವಂಶಸ್ಥರಾದ ಒಡೆಯರ್ ಅವರಿಂದಾಗಿ ದಸರಾ ಜಗದ್ವಿಖ್ಯಾತಿಯಾಗಿದೆ. ಹಬ್ಬದ ಸಮಯದಲ್ಲೇ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ದಸರಾ ಹೊತ್ತಲ್ಲೇ ಒಡೆಯರ್ ಕುಟುಂಬದಲ್ಲಿ ಡಬಲ್ ಧಮಾಕಾದ ಸಂಭ್ರಮ ಮನೆಮಾಡಿದೆ. ಯದುವೀರ್ ಹಾಗೂ ಪತ್ನಿ ರಾಣಿ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು …
Read More »ಟಾಟಾ ಟ್ರಸ್ಟ್’ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ
ಮುಂಬೈ: ಟಾಟಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ವಿಶಾಲವಾದ ಟಾಟಾ ಗ್ರೂಪ್ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ನಲ್ಲಿ ಒಟ್ಟಾರೆಯಾಗಿ 66% ಪಾಲನ್ನು ಹೊಂದಿರುವ ಟ್ರಸ್ಟ್ಗಳ ನಾಯಕತ್ವವನ್ನು ಅವರು ವಹಿಸಿಕೊಳ್ಳುತ್ತಾರೆ. ದಿವಂಗತ ರತನ್ ಟಾಟಾ ಅವರ ನಿಕಟವರ್ತಿ ಮತ್ತು ಪ್ರಮುಖ ಟಾಟಾ ಚಾರಿಟಿಗಳ ಟ್ರಸ್ಟಿ ಮೆಹ್ಲಿ ಮಿಸ್ತ್ರಿ ಸೇರಿದಂತೆ ಇತರ ಸಂಭಾವ್ಯ ಅಭ್ಯರ್ಥಿಗಳನ್ನು ಪರಿಗಣಿಸಿದ ನಂತರ ನೋಯೆಲ್ ಅವರ ನೇಮಕಾತಿ ಬಂದಿದೆ. ನೋಯೆಲ್ …
Read More »ತಾಯಿ ಚಾಮುಂಡೇಶ್ವರಿ ಕೃಪೆ ನನ್ನ ಮೇಲಿದೆ, ಅದಕ್ಕೆ ದೀರ್ಘಕಾಲದಿಂದ ರಾಜಕೀಯದಲ್ಲಿದ್ದೇನೆ:ಸಿಎಂ
ಮೈಸೂರು : ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಜನತೆಗೆ ದಸರೆಯ ಶುಭ ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ರಾಜಕೀಯದಲ್ಲಿ …
Read More »ಚರ್ಚ್‌ನಲ್ಲಿ ಆಯುಧ ಪೂಜೆ ಮಾಡಿ ಗಮನ ಸೆಳೆದ ಕ್ರೈಸ್ತರು
ಚಾಮರಾಜನಗರ, ಅಕ್ಟೋಬರ್, 11: ಇಂದು (ಅಕ್ಟೋಬರ್ 11) ಆಯುಧ ಪೂಜಾ ಕಾರ್ಯಗಳು ನಡೆಯುತ್ತಿವೆ. ಮತ್ತೊಂದೆಡೆ ಕ್ರೈಸ್ತ ಸಮುದಾಯದವರು ಹಿಂದೂಗಳ ಪವಿತ್ರ ಆಚರಣೆಯಾದ ಆಯುಧ ಪೂಜೆಯನ್ನು ಮಾಡುವ ಮೂಲಕ ಗಮನ ಸೆಳೆದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯವರೇ ಅಧಿಕ ಸಂಖ್ಯೆಯಲ್ಲಿದ್ದು, ಇಂದು ವಾಹನಗಳನ್ನು ಶುಚಿಗೊಳಿಸಿ, ಅಲಂಕೃತಗೊಳಿಸಿ ಚರ್ಚ್‌ಗೆ ಕೊಂಡೊಯ್ದು ಆಯುಧ ಪೂಜೆ ನೆರವೇರಿಸಿದ್ದಾರೆ. ಅಲ್ಲಿನ ಪಾದ್ರಿ ಸಗಾಯ್ ರಾಜ್ ಪ್ರಾರ್ಥನೆ, …
Read More »