Breaking News

Daily Archives: ಅಕ್ಟೋಬರ್ 1, 2024

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು. ತಪ್ಪಿದ ಅನಾಹುತ

ಗದಗ: ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪ್ರವಹಿಸಿ 11 ಕುರಿ ಮತ್ತು 1 ನಾಯಿ ಸಾವಿಗೀಡಾದ ಘಟನೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಯಲ್ಲಿ ಸೋಮವಾರ (ಸೆ.30) ಸಂಜೆ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನವಲಪ್ಪ ಹೆಗಡೆ ಸಂಚಾರಿ ಕುರಿಗಾಯಿ ನರೇಗಲ್ ಭಾಗದ ಜಮೀನೊಂದರಲ್ಲಿ‌ ಕುರಿ ಮೇಯಿಸುವ ಸಂದರ್ಭದಲ್ಲಿ, ಹೊಲದಲ್ಲಿ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ. ಆದರೆ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಸಂಚಾರ ನಿಷ್ಕ್ರಿಯವಾಗದ ಕಾರಣ ವಿದ್ಯುತ್ ತಂತಿಯ …

Read More »

ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

ಧಾರವಾಡ: ಧಾರವಾಡ ತಾಲೂಕಿನ ನಿಗದಿ ಗ್ರಾಮದ ರೈತರ ಕಬ್ಬಿನ ಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಮರಳಿ ಅರಣ್ಯಕ್ಕೆ ಬಿಡಲಾಗಿದೆ. ನಿಗದಿ ಗ್ರಾಮದ ರೈತ ಸಿದ್ಧಬಸಪ್ಪ ಹಳಿಯಾಳ ಎಂಬ ರೈತ ಅಂಬ್ಲಿಕೊಪ್ಪ ಗ್ರಾಮದ ಹದ್ದಿನಲ್ಲಿ ಕಬ್ಬಿನ ಜಮೀನು ಹೊಂದಿದ್ದು, ಕಬ್ಬಿನ ಸೋಗೆ ಸುಲಿಯುವ ಸಂದರ್ಭದಲ್ಲಿ ಈ ಹೆಬ್ಬಾವು ರೈತನ ಕಣ್ಣಿಗೆ ಬಿದ್ದಿದೆ. ಕೂಡಲೇ ಈ ಮಾಹಿತಿಯನ್ನು ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರ ಗಮನಕ್ಕೆ ತಂದಾಗ …

Read More »

ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಒತ್ತಾಯ…!!

ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಒತ್ತಾಯ…!! ಇವತ್ತು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ಇವರನ್ನು ಭೇಟಿ ಮಾಡಿದ ನೀಲಜಿ, ಶಿಂದೋಳ್ಳಿ ಗ್ರಾಮದ ಹಿರಿಯರು, ಇಲ್ಲಿಯ ರಹವಾಸಿಯಾದ ಶ್ರೀಮತಿ ಭಾರತಿ ಕಾನಪ್ಪ ಪೂಜಾರಿ ಎಂಬ ಮಹಿಳೆ 4 ದಿನಗಳ ಹಿಂದೆ ಗ್ರಾಮದ ಶ್ರೀ ಮಸಣವ್ವ ದೇವಸ್ಥಾನದಲ್ಲಿ ಕಳ್ಳರು ಕಳತನದಲ್ಲಿ ತೊಡಗಿದ್ದಾಗ ಮಹಿಳೆ ನೋಡಿದ್ದಾಳೆ ಎಂಬ ಕಾರಣಕ್ಕೆ ಕಳ್ಳರು ಮಹಿಳೆಯನ್ನು ಬಾವಿಗೆ ನೂಕಿ ಕೊಲೆ ಮಾಡಿರುವ ಶಂಕೆ ಇದ್ದು.ಈ ಪ್ರಕರಣವನ್ನು ಕೊಲೆ …

Read More »

ಕಿಶೋರ್‌ ಕುಮಾರ್‌ ಬೊಟ್ಯಾಡಿಗೆ ಒಲಿದ ಬಿಜೆಪಿ ಟಿಕೆಟ್

ಮಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಕಾರಣದಿಂದ ತೆರವಾಗಿದ್ದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷವು ಮಂಗಳವಾರ (ಅ.1) ಅಭ್ಯರ್ಥಿ ಅಂತಿಮಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಬೊಟ್ಯಾಡಿ (Kishor Kumar Botyadi) ಅವರನ್ನು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.   …

Read More »

ಬಿಗ್‌ಬಾಸ್‌ ಮನೆಯಲ್ಲಿ ಆ ʼಡೌಟ್‌ʼನಿಂದಲೇ ಶುರುವಾಯಿತು ಜಗಳ

ಬೆಂಗಳೂರು: ಬಿಗ್‌ ಬಾಸ್‌(Bigg Boss Kannada-11) ಆರಂಭಗೊಂಡು ಒಂದು ದಿನ ಕಳೆದಿದೆ. ಆದರೆ ಈ ಒಂದು ದಿನದಲ್ಲಿ ಸ್ಪರ್ಧಿಗಳು ಅನೇಕ ಸಲಿ ಕಿತ್ತಾಡಿಕೊಂಡಿದ್ದಾರೆ. ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ಮನೆಗಳಿವೆ. ನರಕದಲ್ಲಿನ 7 ಮಂದಿ, ಸ್ವರ್ಗದಲ್ಲಿನ 10 ಮಂದಿ ತಂಡದಂತೆ ಇದ್ದಾರೆ. ಆದರೆ ಈ ತಂಡಗಳ ಒಳಗೆಯೇ ಹೊಂದಾಣಿಕೆಯಿಲ್ಲದೆ ಮಾತಿಗೆ ಮಾತು ಬೆಳೆಯುತ್ತಿದೆ. ಮೊದಲ ದಿನ ಯಮುನಾ, ಜಗದೀಶ್‌ ಹಾಗೂ ಚೈತ್ರಾ ಕುಂದಾಪುರ ಅವರ ಧ್ವನಿಯೇ ಹೆಚ್ಚಾಗಿ …

Read More »

ನನ್ನ ಪತ್ನಿ ಮನನೊಂದು ‘ಮುಡಾ’ ಗೆ ಸೈಟ್ ವಾಪಸ್ ಕೊಟ್ಟಿದ್ದಾರೆ : CM ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್..!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ನನ್ನ ಪತ್ನಿ ಪಾರ್ವತಿ ಮನನೊಂದು ‘ಮುಡಾ’ ಸೈಟ್ ವಾಪಸ್ ಕೊಟ್ಟಿದ್ದಾರೆ. ಈ ಬಗ್ಗೆ ಪತ್ನಿ ನನ್ನ ಜೊತೆ ಚರ್ಚಿಸಿರಲಿಲ್ಲ, ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮನನೊಂದು ನನ್ನ ಪತ್ನಿ ಸೈಟ್ ಹಿಂತಿರುಗಿಸಿದ್ದಾರೆ. ನಾನು ಯಾವುದೇ …

Read More »

ಕಾಂಗ್ರೆಸ್‌ನಿಂದಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಯ ಸುಳಿವು ಕೊಟ್ಟ ಅಂಶಗಳಿವು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಒಂದೆಡೆ ವಿಪಕ್ಷಗಳಿಂದ ಸಿಎಂ ರಾಜೀನಾಮೆಗೆ ಆಗ್ರಹ ಕೇಳಿಬಂದಿದೆ. ಸ್ವಪಕ್ಷದಲ್ಲಿ ನಾನೇ ಸಿಎಂ ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೊಂದೆಡೆ ಸಿಎಂ ವಿರುದ್ಧ ದಾಖಲಾಗಿರುವ ಎಫ್‌ಐಆರ್‌, ಎ1 ಆರೋಪಿ ಪಟ್ಟ ಕೂಡ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಲುಗಾಡಿಸುತ್ತಿದೆ. ಈ ಸುಳಿಯಿಂದ ಪಾರಾಗುವುದೇ ಸಿದ್ದರಾಮಯ್ಯ ಅವರಿಗೆ ಈಗಿರುವ ಸವಾಲಾಗಿದೆ. ಮೊದಲಿಗೆ ಸಿಎಂ ರಾಜೀನಾಮೆಗೆ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ನಿಂದ ಮಾತ್ರ ಒತ್ತಾಯ ಕೇಳಿಬಂದಿತ್ತು. ಆದರೆ, ಇತ್ತೀಚಿನ …

Read More »

ಮುಡಾ ಹಗರಣ : 18 ಅಧಿಕಾರಿಗಳ ವಿರುದ್ಧ ಇಸಿಐಆರ್ ದಾಖಲು

ಬೆಂಗಳೂರು,ಅ.1- ಮುಡಾ ಪ್ರಕರಣದಲ್ಲಿ ಮತ್ತಷ್ಟು ಆಳಕ್ಕಿಳಿದಿರುವ ಜಾರಿ ನಿರ್ದೇಶನಾಲಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ 18 ಅಧಿಕಾರಿಗಳ ವಿರುದ್ಧ ಇಸಿಐಆರ್ ದಾಖಲಿಸಿಕೊಂಡಿದೆ. ವಿಶೇಷ ಎಂದರೆ ಸೋಮವಾರವಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದು ಮಲ್ಲಿಕಾರ್ಜುನ, ಭೂ ಮಾಲೀಕ ದೇವರಾಜ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಇಎಂಎಲ್‌ಎ)ಯಡಿ ದೂರು ದಾಖಲಿಸಿತ್ತು. ಇದೀಗ ಇ.ಡಿ ಅ„ಕಾರಿಗಳು ಮುಡಾದಲ್ಲಿ ಕಾರ್ಯ …

Read More »

ದರ್ಶನ್ ಅಭಿಮಾನಿಗಳಿಗೆ ಗುಡ್​ನ್ಯೂಸ್​; ರಿಲೀಸ್ ​​ ಯಾವಾಗ ಗೊತ್ತಾ?

ಬೆಂಗಳೂರು, ಅಕ್ಟೋಬರ್‌ 01: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್​​ವುಡ್ ನಟ ದರ್ಶನ್ ಅವರ ಬಿಡುಗಡೆ ಯಾವಾಗ ಎಂದು ಜಾತಕ ಪಕ್ಷಿಯಂತೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಈಗಾಗಲೇ ದರ್ಶನ್‌ ಅವರ ಬಿಡುಗಡೆಗೆ ಪತ್ನಿ ಹಾಗೂ ದರ್ಶನ್‌ ಅವರ ಕುಟುಂಬಸ್ಥರು ಕಾನೂನು ಹೋರಾಟವನ್ನ ನಡೆಸಿದ್ರೆ, ಇತ್ತ ದರ್ಶನ್‌ ಅವರ ಅಭಿಮಾನಿಗಳು ದರ್ಶನ್‌ ಬಿಡುಗಡೆಗೆ ಹರಕೆಯನ್ನ ಕಟ್ಟಿಕೊಂಡಿದ್ದಾರೆ. …

Read More »

ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಬಳಿಕ ಲಾಡ್ಜ್ ಗೆ ಕರೆದುಕೊಂಡು ಹೋಗಿ ಯುವತಿಯ ಮೇಲೆ ಅತ್ಯಾಚಾರ ಎಸೆಗಿರುವ ಕೆ ಎಸ್ ಆರ್ ಪಿ ಪೊಲೀಸ್ ಸಿಬ್ಬಂದಿ?

ಕಲಬುರ್ಗಿ : ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಬಳಿಕ ಲಾಡ್ಜ್ ಗೆ ಕರೆದುಕೊಂಡು ಹೋಗಿ ಯುವತಿಯ ಮೇಲೆ ಅತ್ಯಾಚಾರ ಎಸೆಗಿರುವ ಕೆ ಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಯ ವಿರುದ್ಧ ಇದೀಗ ಸಂತ್ರಸ್ತೇ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.   ಹೌದು ಅತ್ಯಾಚಾರ ಎಸಗಿರುವ KSRP ಸಿಬ್ಬಂದಿಯನ್ನು ಯಲ್ಲಾಲಿಂಗ ಮೇತ್ರಿ ಎಂದು ಹೇಳಲಾಗುತ್ತಿದ್ದು, ಇಬ್ಬರು ಸುಮಾರು ಐದು ತಿಂಗಳು ಇನ್​ಸ್ಟಾಗ್ರಾಮ್​ನಲ್ಲಿ ಮೇಸೆಜ್ ಮಾಡಿದ್ದಾರೆ. ಬಳಿಕ …

Read More »