ಸವದತ್ತಿ: ಇಲ್ಲಿನ ಗುರ್ಲಹೊಸೂರಿನ ಚಿದಂಬರೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಜರುಗಿತು. ಪಿಐ ಧರ್ಮಾಕರ ಧರ್ಮಟ್ಟಿ ಮಾತನಾಡಿ, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಧರ್ಮಸ್ಥಳ ಸಂಘ ಆರ್ಥಿಕ ನೆರವು ನೀಡುತ್ತಿರುವ ಕಾರ್ಯ ಶ್ಲಾಘನೀಯ. ತಾಲ್ಲೂಕಿನ 99 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡಿ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯ ಮಾದರಿಯಾಗಿದೆ ಎಂದರು. ವೇದಿಕೆಯಲ್ಲಿ 99 ಮಂದಿ …
Read More »Monthly Archives: ಸೆಪ್ಟೆಂಬರ್ 2024
ನಿಪ್ಪಾಣಿ ನಗರಸಭೆ: ಮತ್ತೆ ಬಿಜೆಪಿ ಮೇಲುಗೈ
ನಿಪ್ಪಾಣಿ: ಸ್ಥಳೀಯ ನಗರಸಭೆಯ ಎರಡನೇಯ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದು ಈ ಅವಧಿಯಲ್ಲೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಬಿಜೆಪಿ ಪಕ್ಷದ ಸೋನಲ್ ಕೋಠಡಿಯಾ ಅಧ್ಯಕ್ಷರಾಗಿ ಹಾಗೂ ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಬಹುಮತಗಳಿಂದ ಆಯ್ಕೆಯಾದರು. ಇಬ್ಬರೂ ತಲಾ 17 ಮತಗಳನ್ನು ಪಡೆದು ವಿರೋಧಿ ಬಣದ ಶರದ ಪವಾರ ಗುಂಪು ಎನ್‍ಸಿಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ …
Read More »ಜಮಾತ್-ಇ-ಇಸ್ಲಾಮಿ ಹಿಂದ್‌ನಿಂದ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ಸೆ.1ರಿಂದ
ಬೆಳಗಾವಿ: ‘ಜಮಾತ್-ಇ-ಇಸ್ಲಾಮಿ ಹಿಂದ್’ ವತಿಯಿಂದ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ಸೆ.1ರಿಂದ 30ರವರೆಗೆ ನಡೆಯಲಿದೆ’ ಎಂದು ಸಂಘಟನೆಯ ರಾಜ್ಯ ಮಹಿಳಾ ಘಟಕದ ಸಲಹಾ ಪರಿಷತ್ತಿನ ಸದಸ್ಯೆ ಸಾಜೀದುನ್ ನಿಸ್ಸಾ ಲಾಲ್ಮಿಯ ಹೇಳಿದರು. ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳು ದೇಶದ ಶಾಂತಿ ಮತ್ತು ಪ್ರಗತಿಗೆ ಧಕ್ಕೆ ತರುತ್ತಿವೆ. ಮಹಿಳೆಯರ ಆತ್ಮಹತ್ಯೆಗಳ ಪ್ರಮಾಣವೂ ಏರಿಕೆಯಾಗಿದೆ. ಸಮಾಜದಲ್ಲಿ ಸ್ತ್ರೀಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ನೈತಿಕ ಮೌಲ್ಯಗಳ …
Read More »ಗೋಕಾಕ: ‘ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಒಂದಾಗಿ ಭಾವೈಕ್ಯ ಮತ್ತು ಶಾಂತಿಯುತವಾಗಿ ಆಚರಿಸೋಣ’ ಎಂದ ತಹಶೀಲ್ದಾರ್ ಮೋಹನ ಭಸ್ಮೆ
ಗೋಕಾಕ: ‘ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಒಂದಾಗಿ ಭಾವೈಕ್ಯ ಮತ್ತು ಶಾಂತಿಯುತವಾಗಿ ಆಚರಿಸೋಣ’ ಎಂದು ತಹಶೀಲ್ದಾರ್ ಮೋಹನ ಭಸ್ಮೆ ಕರೆ ನೀಡಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಗಣೇಶ ಚತುರ್ಥಿಯಲ್ಲಿ ಹಸಿರು ಪಟಾಕಿಗಳನ್ನು ಬಳಸಬೇಕು. ಸಾರ್ವಜನಿಕರ ಭಾವನೆಗೆ ಧಕ್ಕೆಯಾಗದಂತೆ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಹಬ್ಬದ …
Read More »ಗ್ರಾಮೀಣರ ಆರ್ಥಿಕ ಬೆಳವಣಿಗೆಗೆ ಸಂಘ ಸಹಾಯಕ: ಟಿ.ಬಿ. ಕೆಂಚರಡ್ಡಿ
(ಮೂಡಲಗಿ): ‘ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳು ಬಹಳಷ್ಟು ಅನುಕೂಲವಾಗಿವೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಟಿ.ಬಿ. ಕೆಂಚರಡ್ಡಿ ಹೇಳಿದರು. ಇಲ್ಲಿಯ ಗುರ್ಲಾಪುರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ 20ನೇ ವಾರ್ಷಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಸಹಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ, ಠೇವಣಿದಾರರು ಮತ್ತು ಸದಸ್ಯರ ಪರಸ್ಪರ ಸಹಕಾರ ಮತ್ತು ವಿಶ್ವಾಸ ಮುಖ್ಯ’ ಎಂದರು. ಸಂಘದ ಅಧ್ಯಕ್ಷ ಶಿವಬಸು ಇಟ್ನಾಳ ಮಾತನಾಡಿ, …
Read More »ಕೊರಿಯರ್ ಬಾಯ್ ಗೆ ಚಾಕು ಇರಿದ ದುಷ್ಕರ್ಮಿ
ಬೆಂಗಳೂರು: ಲೊಕೇಷನ್ ಕಳುಹಿಸಿದ ಜಾಗಕ್ಕೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೊರಿಯರ್ ಬಾಯ್ ಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಅಶೋಕನಗರದಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ಯುವಕನನ್ನು ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ. ಕೊರಿಯರ್ ಮಾಡಲು ಕಳುಹಿಸಿದ ಲೊಕೇಷನ್ ಗೆ ಬರದೇ ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ಕೋಪಗೊಂಡು ದುಷ್ಕರ್ಮಿ ಯುವಕನಿಗೆ ಚಾಕು ಇರಿದಿದ್ದಾನೆ. ಅಟ್ಟಾಡಿಸಿಕೊಂಡು ಚಾಕು ಇರಿದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಅಶೋಕನಗರ ಠಾಣೆಯಲ್ಲಿ …
Read More »