ಕಲಬುರಗಿ: ಮದುವೆ ಮಾತುಕತೆಯೊಂದು ಯುವಕನ ಸಹೋದರನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನಗರದ ಹೊರ ವಲಯ ನಾಗನಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸಚಿನ್ ಹಾಗೂ ಉಷಾ ಅಲಿಯಾಸ್ ವೈಷ್ಣವಿ ಪ್ರೀತಿಸುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣಕುಮಾರ ಹಾಗೂ ಇತರರೊಂದಿಗೆ ಸಚಿನ್ ಮನೆಗೆ ಮದುವೆ ಮಾತುಕತೆಗೆಂದು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ …
Read More »Monthly Archives: ಸೆಪ್ಟೆಂಬರ್ 2024
ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ
ಚಿಕ್ಕಮಗಳೂರು : ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆ ಕೂಡ ಬರಬೇಕು ಎಂದು ಆದೇಶ ನೀಡಿದ ಇಲಾಖೆಯ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಬಿಜೆಪಿ ಕಿಡಿ ಕಾರಿದೆ. ಮೂಡಿಗೆರೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇಮಕಾತಿ ಆದೇಶ ಹೊರಡಿಸಿದ್ದು ಈ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಿಜೆಪಿ ಕಿಡಿ ಕಾರಿದ್ದು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಅಲ್ಪಸಂಖ್ಯಾತರನ್ನೇ ನೇಮಕ ಮಾಡಲು ಉರ್ದು …
Read More »ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ
ಕಾರವಾರ: ತಾಲೂಕಿನ ಹಣಕೋಣ ಗ್ರಾಮದಲ್ಲಿ ರವಿವಾರ ಸೆ.22) ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಂಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಪುಣೆಯಲ್ಲಿ ಕೈಗಾರಿಕೆ ಸ್ಥಾಪಿಸಿರುವ ಉದ್ಯಮಿ ವಿನಾಯಕ ನಾಯ್ಕ (56) ಮನೆಯ ಕೋಣೆಯೊಂದರಲ್ಲಿ ಹತ್ಯೆಯಾಗಿದ್ದಾರೆ. ಅವರ ಪತ್ನಿ ವೈಶಾಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನಾಯಕ ನಾಯ್ಕ ಹಾಗೂ ವೈಶಾಲಿ ದಂಪತಿ ಹಣಕೋಣ ಮೂಲದವರಾಗಿದ್ದು, ಪುಣೆ ನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಪುಣೆಯಿಂದ ಸಾತೇರಿ …
Read More »ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ
ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಖುರ್ಚಿ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಆದರೂ, ಅವರ ಖುರ್ಚಿ ಅಲುಗಾಡುತ್ತಿಲ್ಲ ಎನ್ನುತ್ತಾ ಎಲ್ಲರೂ ಮೇಲ್ನೋಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕು ಹಂಬಲ ಇದೆ. ಅಷ್ಟಕ್ಕೂ ಸಿದ್ದರಾಮಯ್ಯ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ರಾಜೀನಾಮೆ ಕೊಡುತ್ತಾರೋ, ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ರವಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರ್ಚಿ ಗಟ್ಟಿಯಿಲ್ಲ ಎನ್ನುವ …
Read More »ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್
ಬಳ್ಳಾರಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ಹೊರಬಂದ ಬಳಿಕ ಇದೀಗ ಮತ್ತೆ ಕರ್ನಾಟಕದ ನಂದಿನಿ ತುಪ್ಪಕ್ಕೆ ಆಂಧ್ರ ಪ್ರದೇಶದಿಂದ ಭಾರೀ ಬೇಡಿಕೆ ಬರುತ್ತಿದೆ. ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ ಬಂದಿದೆ ಎಂದು ಹೊಸಪೇಟೆಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ. ತಿರುಪತಿಯಿಂದ ನಂದಿನಿ ತುಪ್ಪ ಕಳಿಸುವಂತೆ ಇ-ಮೇಲ್ ಮೂಲಕ ಬೇಡಿಕೆ ಬಂದಿದೆ. ಹೀಗಾಗಿ ನಾವು ನಂದಿನಿ ತುಪ್ಪ ಕಳುಹಿಸುತ್ತಿದ್ದೇವೆ. ಈಗಾಗಲೇ 15 ದಿನಗಳಿಂದ 350 …
Read More »ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸಲ್ಲ
ವಿಜಯಪುರ: ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು ಎಂದು ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷವಲ್ಲ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿದೆ, ಅವರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಹಾದಿಯಲ್ಲಿ ಹೋಗುವವರು ಬಂದು ಸಿಕ್ಕ ಸಿಕ್ಕವರ ಮೇಲೆ ಅರ್ಜಿ ಹಾಕಿದರೆ ಹೇಗೆ ಎಂದರು. ಆಡಳಿತದಲ್ಲಿ ರಾಜ್ಯಪಾಲರ …
Read More »ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್‌ಗೆ ಜಿಪಿಎಸ್ ಕಣ್ಗಾವಲು!
ಬೆಂಗಳೂರು: ತಿರುಪತಿ (Thirupathi) ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ನಿಲ್ಲಿಸಿ ಪಾವಿತ್ರ್ಯತೆಗೆ ಒತ್ತು ನೀಡುವ ಸಲುವಾಗಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ) ಈಗ ಮತ್ತಷ್ಟು ನಂದಿನಿ ತುಪ್ಪ ಪೂರೈಕೆಗಾಗಿ ಕೆಎಂಎಫ್ ಗೆ ಮನವಿ ಮಾಡಿದ್ದರಿಂದ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ಅದಕ್ಕಾಗಿ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್‌ಗಳಿಗೆ …
Read More »ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ
ಗದಗ: ಬಸವ ತತ್ವ ಒಪ್ಪದ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಲಿಂಗಾಯತರಲ್ಲಿಯೇ ಒಡಕು ಮೂಡಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ವಚನ ದರ್ಶನ ಕೃತಿ ಒಂದು ನಿದರ್ಶನ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಆರೋಪಿಸಿದರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತರಿಂದ ಬರೆಸಿ, ಸಂಪಾದಿಸಿದ ಪುಸ್ತಕವನ್ನು ಆರೆಸ್ಸೆಸ್ ಪ್ರಕಾಶನ ಮಾಡಿದ್ದು ಏಕೆ? ಅಷ್ಟೇ ಅಲ್ಲ, ಈ ಪುಸ್ತಕ ಬೆಂಗಳೂರು, ವಿಜಯಪುರ, ಹಾವೇರಿ, …
Read More »ತಜ್ಞರ ವರದಿಯಂತೆ ಅಣೆಕಟ್ಟು ನಿರ್ವಹಣೆ
ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 68 ವರ್ಷ ಗತಿಸಿವೆ. ಪ್ರತಿ 50 ವರ್ಷಕ್ಕೆ ಡ್ಯಾಂ ಗೇಟ್‌ಗಳನ್ನು ಬದಲಿಸಬೇಕು. ಆದರೆ ತುಂಗಭದ್ರಾ ಡ್ಯಾಂ ಗೇಟ್ ನಿರ್ವಹಣೆ ಸರಿಯಾಗಿ ಮಾಡಿದ್ದರಿಂದ 68 ವರ್ಷಗಳ ಬಾಳಿಕೆ ಬಂದಿದೆ. ಗೇಟ್ ಮುರಿದ ಬಳಿಕ ತಜ್ಞರ ಸಮಿತಿ ರಚಿಸಿದ್ದು, ಅವರು ಕೊಟ್ಟಿರುವ ವರದಿ ಅನುಸಾರ ಮುಂದೆ ಗೇಟ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ಯಾಂ ಗೇಟ್ ಮುರಿದಾಗ …
Read More »ರೂರು ಗುಡ್ಡ ಕುಸಿತ ಟ್ಯಾಂಕರ್ ಎಂಜಿನ್, ಸ್ಕೂಟಿ ಪತ್ತೆ
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಹುಗಿದು ಹೋಗಿದ್ದ ಇನ್ನಷ್ಟು ಅವಶೇಷಗಳು 3ನೇ ಹಂತದ ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿದ್ದು, ರವಿವಾರ ನದಿ ಆಳದಲ್ಲಿ ಟ್ಯಾಂಕರ್‌ನ ಎಂಜಿನ್ ಮತ್ತು ಸ್ಕೂಟಿಯೊಂದು ದೊರೆತಿದೆ. ಶನಿವಾರ ಟ್ಯಾಂಕರ್‌ನ ಎರಡು ಚಕ್ರಗಳು ಪತ್ತೆಯಾಗಿದ್ದವು. ರವಿವಾರ ಮುಂಜಾನೆ ಗೋವಾದಿಂದ ಬಂದ ಡ್ರೆಜ್ಜಿಂಗ್ ಮಷಿನ್ ಜತೆ ಮುಳುಗು ತಜ್ಞ ಈಶ್ವರ ಮಲ್ಪೆ ಕೂಡ ಕಾರ್ಯಾಚರಣೆ ನಡೆಸಿದರು. ಈ ವೇಳೆ ಈಶ್ವರ ಅವರು ಸ್ಕೂಟಿ ಇರುವುದನ್ನು ಪತ್ತೆ ಮಾಡಿದರೆ, …
Read More »