Breaking News

Monthly Archives: ಸೆಪ್ಟೆಂಬರ್ 2024

ನಂದಿನಿಯೇತರ ಎಲ್ಲಾ ಬ್ರ್ಯಾಂಡ್‌ ಗಳ ತುಪ್ಪದ ತಪಾಸಣೆಗೆ ರಾಜ್ಯ ಸರ್ಕಾರ ಆದೇಶ..!

ಬೆಂಗಳೂರು : ನಂದಿನಿಯೇತರ ಎಲ್ಲಾ ಬ್ರ್ಯಾಂಡ್ ಗಳ ತುಪ್ಪದ ತಪಾಸಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಂದಿನಿ ಬ್ರ್ಯಾಂಡ್ ಹೊರತುಪಡಿಸಿ ಎಲ್ಲ ಸಂಸ್ಥೆಗಳ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸುವಂತೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.   ರಾಜ್ಯದಲ್ಲಿ ಮಾರಾಟ ಆಗುತ್ತಿರುವ ನಂದಿನಿ ತುಪ್ಪವನ್ನು ಬಿಟ್ಟು, ಇತರ ಎಲ್ಲ ತುಪ್ಪಗಳ ಮಾದರಿ ಸಂಗ್ರಹಿಸಿ, ಪರಿಶೀಲಿಸಿ ಗುಣಮಟ್ಟ …

Read More »

ಮಹಾಲಕ್ಷ್ಮಿ ಹಂತಕನ ಚಾಣಾಕ್ಷತನ ಕಂಡು ಬೆಸ್ತು ಬಿದ್ದ ಪೊಲೀಸರು

ಬೆಂಗಳೂರು, ಸೆ.24- ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿರುವ ವಯ್ಯಾಲಿ ಕಾವಲ್ನ ಮಹಾಲಕ್ಷ್ಮಿ ಕೊಲೆಯ ಹಂತಕ ಚಾಣಾಕ್ಷತನದಿಂದ ಕೃತ್ಯವೆಸಗಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಒಂಟಿ ಮಹಿಳೆ ಮಹಾಲಕ್ಷ್ಮಿಯನ್ನು ಮಚ್ಚಿನಿಂದ ಭೀಕರವಾಗಿ ಕೊಂದು ನಂತರ ತುಂಡು-ತುಂಡುಗಳನ್ನಾಗಿ ಕತ್ತರಿಸಿ, ಆಕ್ಸಲ್ ಬ್ಲೇಡ್ನಿಂದ ಕೊಯ್ದು ವಾಸನೆ ಬರದಂತೆ ಅವುಗಳಿಗೆ ರಾಸಾಯನಿಕ ಸಿಂಪಡಿಸಿ ಫ್ರಿಡ್ಜ್ ನಲ್ಲಿ ತರಕಾರಿ ಜೋಡಿಸುವಂತೆ ಜೋಡಿಸಿದ್ದಾನೆ. ಮನೆಯೊಳಗೆ ಮಹಾಲಕ್ಷ್ಮಿ ಕೊಲೆ ಮಾಡಿದ ಸ್ಥಳದಲ್ಲಿ ಯಾವುದೇ ರಕ್ತದ ಕಲೆಗಳು ಕಾಣದಂತೆ ಆರೋಪಿಯು ಯಾವುದೋ ರಾಸಾಯನಿಕ ಸಿಂಪಡಿಸಿ, …

Read More »

ಹೈಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯ : ಸ್ನೇಹಮಯಿ ಕೃಷ್ಣ

ಬೆಂಗಳೂರು,ಸೆ.24- ಹೈಕೋರ್ಟ್ನ ತೀರ್ಪು ಸತ್ಯಕ್ಕೆ ಸಂದ ಜಯ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಮುಡಾ ಪ್ರಕರಣದ ಅರ್ಜಿದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ ಹೋರಾಟಕ್ಕೆ ಸಿಕ್ಕ ಜಯ.   ರಾಜಕಾರಣಿಗಳು ತಮ ಅಧಿಕಾರವನ್ನ ದುರುಪಯೋಗಪಡಿಸಿಕೊಂಡು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಗೆ ತಕ್ಕ ಪಾಠವಾಗಿದೆ ಎಂದರು.ರಾಜ್ಯಪಾಲರ ಹುದ್ದೆ ಹಾಗೂ ಅವರ ವಿವೇಚನಾಧಿಕಾರಿಗಳ ಬಗ್ಗೆಯೂ ಚರ್ಚೆಯಾಗಿತ್ತು.ಹೈಕೋರ್ಟ್ನ ತೀರ್ಪು ಎಲ್ಲದಕ್ಕೂ ತೆರೆ ಎಳೆದಿದೆ. ಮುಂದಿನ ದಿನಗಳಲ್ಲೂ …

Read More »

ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

ರಾಯಚೂರು: ತಿರುಪತಿ ಶ್ರೀನಿವಾಸನ ಸನ್ನಿಧಾನ, ಹಿಂದೂಗಳ ವಿಶಿಷ್ಟ ಶ್ರದ್ಧಾ ಕೇಂದ್ರ. ಪ್ರಸಾದದಲ್ಲಿ ಕಳಪೆ ತುಪ್ಪದ ಮಾಹಿತಿ ಮಾಧ್ಯಮಗಳಲ್ಲಿ, ಜನರ ಬಾಯಲ್ಲಿದೆ. ಈ ಬಗ್ಗೆ ಸರ್ಕಾರಗಳು ಸಮಗ್ರ ತನಿಖೆ ಕೈಗೊಂಡು, ಯಾರ ಅಚಾತುರ್ಯದಿಂದ ನಡೆದಿದೆ? ಯಾವಾಗಿನಿಂದ ನಡೆದಿದೆ? ಅನ್ನೋದು ತನಿಖೆ ನಡೆಸಬೇಕು ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಜರಾಯಿ ಇಲಾಖೆಗಳಿಂದ ದೇಗುಲಗಳನ್ನು ಮುಕ್ತಗೊಳಿಸಿ. ದೇವಸ್ಥಾನ ನಿರ್ವಹಣೆ ಸಂಬಂಧ ಕೇಂದ್ರ ಸರ್ಕಾರ ಹೊಸ ಕಾಯ್ದೆ …

Read More »

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ದೂಧ್‌ಸಾಗರ್‌

ಹೊಸದಿಲ್ಲಿ: ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳನ್ನು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಪಟ್ಟಿ ಮಾಡಿದ್ದು, ಅದರಲ್ಲಿ ಕರ್ನಾಟಕದ ದೂಧ್‌ಸಾಗರ್‌ ಕೂಡ ಒಂದು ಎಂಬುದು ವಿಶೇಷ. ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್‌ಸಾಗರ ಜಲಪಾತ ಈ ಎರಡೂ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ದೂಧ್‌ಸಾಗರ ಜಲಪಾತದ ಎದುರು ರೈಲು ಹಾದು ಹೋಗುವಾಗ ಮನಮೋಹಕ ದೃಶ್ಯ ಪ್ರಯಾಣಿಕರ ಕಣ್ಮನ ಸೆಳೆಯುತ್ತದೆ. ಈ ರೈಲು ಮಾರ್ಗ ಸೇರಿದಂತೆ ರೈಲ್ವೇ ಸಚಿವರು 6 ರೈಲು ಮಾರ್ಗಗಳನ್ನು …

Read More »

ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ

ಬೆಳಗಾವಿ: ತಿರುಪತಿ ಲಡ್ಡು ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿರುವ ಹೇಳಿಕೆಯಿಂದ ದೇಶದಲ್ಲಿ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ನಂದಿನಿ ಉತ್ಪನ್ನದ ಗುಣಮಟ್ಟದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೆಎಂಎಫ್‌ ಮಾಜಿ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.   ಸುದ್ದಿಗಾರರ ಜತೆ ಮಾತನಾಡಿ, ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಸೇರ್ಪಡೆಯಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ. ಆ ಆರೋಪ ಎಷ್ಟು ನಿಜ, …

Read More »

ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡುವ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು.   ಗಣೇಶೋತ್ಸವ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಎಸೆತ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಮುಸ್ಲಿಮರು ಮಹಿಷನನ್ನು ನಂಬುವುದಿಲ್ಲ, ಮುಂದೊಂದು ದಿನ ಮಹಿಷನ ಮೆರವಣಿಗೆ …

Read More »

ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

ಬೆಂಗಳೂರು: ಕೊಡಗು ಜಿಲ್ಲೆಯ ಅರಣ್ಯ ಜಮೀನು, ಸರಕಾರಿ ಜಮೀನು, ಪಶ್ಚಿಮಘಟ್ಟ ಪ್ರದೇಶ ಹಾಗೂ ಬಾಣೆ, ಜಮ್ಮಾ, ಜಾಗೀರು, ಉಂಬಳಿ ಜಮೀನಿನ ಹಿಡುವಳಿದಾರರ ಜಮೀನುಗಳಲ್ಲಿನ ಮರಗಳನ್ನು ಕಡಿಯುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.   ಈ ವಿಚಾರವಾಗಿ ಮಡಿಕೇರಿ ನಿವಾಸಿ ಕೆ.ಎ. ರವಿ ಚೆಂಗಪ್ಪ ಹಾಗೂ ವೀರಾಜಪೇಟೆ ನಿವಾಸಿ ಸಿ.ಸಿ. ದೇವಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. …

Read More »

ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತೀ ವೇಗವಾಗಿ ವಾಹನ ಚಲಾಯಿಸುವುದರ ಸಹಿತ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ’ ಅಡಿಯಲ್ಲಿ ನೂತನ 65 ಆಯಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ ನಮ್ಮ ಸರಕಾರ ರಸ್ತೆ ಸುರಕ್ಷೆಗೆ ಆದ್ಯತೆ ನೀಡುತ್ತಿದ್ದು, ಅಪಘಾತ …

Read More »

ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

ಬೆಂಗಳೂರು: ದಿನದಿಂದ ದಿನಕ್ಕೆ ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮದ ಕುಣಿಕೆ ಬಿಗಿಯಾಗುತ್ತಿದ್ದು, ಮುಂದುವರಿದ ಭಾಗವಾಗಿ ಅವರ ಮೇಲೆ ಈಗ ವಿಧಾನಸಭೆ ಸದಸ್ಯತ್ವ ಸ್ಥಾನದ ಅಮಾನತಿನ ತೂಗುಗತ್ತಿ ನೇತಾಡುತ್ತಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಸೋಮವಾರ ಮುನಿರತ್ನ ಅವರನ್ನು ವಿಧಾನಸಭೆ ಸದಸ್ಯತ್ವದಿಂದ ಅಮಾನತುಗೊಳಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರಕಾರ ಮುನಿರತ್ನ ಶಾಸಕತ್ವ ಅಮಾನತು ಕ್ರಮಕ್ಕೆ ಮುಂದಡಿ ಇಟ್ಟಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ …

Read More »