ಧಾರವಾಡ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಇಂದು ಕೂಡ ಮತ್ತೊಂದು ಸ್ಪೋಟಕವಾದ ಭವಿಷ್ಯ ನುಡಿದಿದ್ದಾರೆ. ಭೂಮಿಯಿಂದ ಹೊರಬುರುವ ವಿಷಜಂತುಗಳು ಮನುಕುಲ ನಾಶ ಮಾಡಲಿವೆ ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ಧಾರವಾಡದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಭೂಮಿಯಿಂದ ವಿಷ …
Read More »Daily Archives: ಸೆಪ್ಟೆಂಬರ್ 28, 2024
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಂಕಷ್ಟ: FIR ದಾಖಲಿಸುವಂತೆ ಕೋರ್ಟ್ ಸೂಚನೆ
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ. ಚುನಾವಣಾ ಬಾಂಡ್ ಗಳ ಮೂಲಕ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ತಿಲಕನಗರ ಪೊಲೀಸರಿಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ. ಚುನಾವಣಾ ಬಾಂಡ್ ಗಳ ಮೂಲಕ ಸುಲಿಗೆ …
Read More »ನಾನು ಸಿಎಂ ಆದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ಕೊಡುತ್ತೇನೆ: ಯತ್ನಾಳ್ ಹೇಳಿಕೆ
ಬೆಳಗಾವಿ: ನಾನು ಮುಖ್ಯಮಂತ್ರಿಯಾದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ನಾನು ಸಿಎಂ ಆದ್ರೆ ಪೊಲಿಸರಿಗೆ AK47 ಗನ್ ಗೆ ಅನುಮತಿ ಕೊಡುತ್ತೇನೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮೊದಲೇ ಫೈರಿಂಗ್ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಕೈಗೆ ಅಧಿಕಾರ ಕೊಟ್ಟು ನೋಡಿ. ಅಲ್ಲಿ ಯೋಗಿ, ಇಲ್ಲಿ ನಾವು. ಮುಂದಿನ ಬಾರಿ …
Read More »ಸಿಎಂ ತಪ್ಪು ಮಾಡಿಲ್ಲ, ಇದೊಂದು ಷಡ್ಯಂತ್ರ: ಸಿದ್ದು ಬೆನ್ನಿಗೆ ನಿಂತ ‘ಕೈ’ ಪಡೆ
ಬೆಂಗಳೂರು: ಮುಡಾ ಹಗರಣ ಪ್ರಕರಣದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಆದರೆ, ತನಿಖೆಯ ಭಾಗವಾಗಿ ಎಫ್‌ಐಆರ್ ದಾಖಲಾಗಿದ್ದೇ ಆದರೆ, ಈ ಬೆಂಬಲ ಇದೇ ರೀತಿ ಮುಂದುವರೆಯುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಹಂತದಲ್ಲಿ ಯಾವುದೇ ಬದಲಾವಣೆಗೆ ಹೈಕಮಾಂಡ್ ಸಿದ್ಧವಾಗಿಲ್ಲ. ಬದಲಾವಣೆಗೆ ಮುಂದಾದರೆ ಇದು ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು …
Read More »ದ್ರಾಮಯ್ಯ ಚಿಲ್ಲರೆ ರಾಜಕಾರಣಿಯಲ್ಲ, ಗೌರವದಿಂದ ರಾಜೀನಾಮೆ ಕೊಡಲಿ-ಯತ್ನಾಳ್
ಬೆಳಗಾವಿ : ಚಿಲ್ಲರೆ ರಾಜಕಾರಣಿಗಳ ರೀತಿ ನೀವು ಮಾಡದೇ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು. ಮುಡಾ ಹಗರಣ ಸಂಬಂಧ ನ್ಯಾಯಾಲಯದ ಆದೇಶದಂತೆ ಇಂದು ಸಿಎಂ ವಿರುದ್ಧ FIR ದಾಖಲಾಗಿದ್ದು, ಈ ಬಗ್ಗೆ ಬೈಲಹೊಂಗಲದಲ್ಲಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಸಿದ್ದರಾಮಯ್ಯ ಅವರೇ.. ನಿಮ್ಮ ಸುತ್ತಮುತ್ತಲಿನ ಪಟಾಲಂನಿಂದ ನಿಮಗೆ ತಪ್ಪು ಸಲಹೆ ನೀಡಲಾಗಿದೆ. ನಿಮ್ಮ ಹೆಸರು ಉಳಿಯಬೇಕು …
Read More »ಸಿಎಂ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಮೇಲೆ ವಂಚನೆ ಪ್ರಕರಣ
ಚಾಮರಾಜನಗರ : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಿರುದ್ಧದ 3 ವರ್ಷಗಳ ಹಿಂದಿನ ವಂಚನೆ ಆರೋಪ ಪ್ರಕರಣ ಸಂಬಂಧ ಇಂದು ಕೋರ್ಟ್ಗೆ ಕೃಷ್ಣ ಅವರು ವಿಚಾರಣೆಗೆ ಹಾಜರಾದರು. ಕರುಣಾಕರ ಎಂಬುವವರಿಂದ ಕೃಷ್ಣ 2018, 2019 ಹಾಗೂ 2020ರಲ್ಲಿ ತಲಾ ಒಂದು ಲಕ್ಷ ರೂಪಾಯಿಯನ್ನು ಸಾಲ ಪಡೆದು ಸಾಲ ಹಿಂದುರುಗಿಸದೇ ವಂಚನೆ ಮಾಡಿರುವ ಆರೋಪದ ಪ್ರಕರಣ ಇದಾಗಿದೆ. …
Read More »ಗ್ಯಾರಂಟಿ ಸಮಾವೇಶದಲ್ಲೂ ಗೋಲ್‌ಮಾಲ್..?- ಲೋಕಾಯುಕ್ತಕ್ಕೆ ದೂರು..!
ಧಾರವಾಡ: ಗ್ಯಾರಂಟಿ ಸಮಾವೇಶದಲ್ಲಿ ಗೋಲ್‌ಮಾಲ್ ನಡೆದಿರುವ ಅನುಮಾನವೊಂದು ಎದ್ದಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡದ ಕೆಸಿಡಿ ಮೈದಾನ, ಹುಬ್ಬಳ್ಳಿಯ ರೈಲ್ವೆ ಮೈದಾನ, ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ ಹಾಗೂ ಕುಂದಗೋಳ, ಕಲಘಟಗಿಯಲ್ಲಿ ಗ್ಯಾರಂಟಿ ಸಮಾವೇಶ ನಡೆದಿತ್ತು. ಫೆಬ್ರವರಿ 24ರಂದು ನವಲಗುಂದದಲ್ಲಿ ಸಿಎಂ ಭಾವಹಿಸಿದ್ದ ಸಮಾವೇಶದ ಲೆಕ್ಕಪತ್ರದಲ್ಲಿಯೇ ಏರುಪೇರಾಗಿದ್ದು, ಅನೇಕ ಸಂಶಯಗಳು ಬರುತ್ತಿವೆ ಎಂದು ನವಲಗುಂದದ ಸಾಮಾಜಿಕ ಹೋರಾಟಗಾರ …
Read More »ಸಾರ್ವಜನಿಕ ಹುದ್ದೆಗಳಿಗೆ ಬರಲು ಬ್ರಾಹ್ಮಣರು ಮುಂದಾಗಬೇಕು: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ಡಾಕ್ಟರ್, ಇಂಜಿನಿಯರ್ ಎಂಬ ಹುದ್ದೆಗಳಿಗೆ ಮಾತ್ರ ಸೀಮಿತವಾಗದೇ, ಸಾರ್ವಜನಿಕ ಸೇವೆಗಳಿರುವ ಹುದ್ದೆಗಳಲ್ಲಿಯೂ ಬ್ರಾಹ್ಮಣರು ಹೆಚ್ಚೆಚ್ಚು ಆಸಕ್ತಿವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಇಂದು ಆಯೋಜಿಸಿದ್ದ ವಿಶ್ಚಾಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದಾಂತಕ್ಕಿಂತ ಒಳ್ಳೇ ಉದ್ದೇಶ ನಮ್ಮಲ್ಲಿ ಇರಬೇಕು ಎಂದಿದ್ದಾರೆ. ಸಾರ್ವಜನಿಕ ಹುದ್ದೆಗಳಲ್ಲಿಯೂ ನಮ್ಮವರೇ ಇದ್ದರೆ, ಆಗ ಎಲ್ಲ ಸಮುದಾಯಗಳಿಗೆ ಸ್ಪಂದಿಸುವ ಮೂಲಕ ನಮ್ಮ …
Read More »ಜನ ತಿಳಿದಷ್ಟು ಸಿದ್ದರಾಮಯ್ಯ ಪರಿಶುದ್ಧರೇನಲ್ಲ:ಸಿಟಿ ರವಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನ ಹೇಳಿಕೊಂಡಷ್ಟು ಪರಿಶುದ್ಧವೇನಲ್ಲ. ತಮ್ಮ ಭ್ರಷ್ಟಾಚಾರ ಹೊರಗೆ ಬರಬಾರದು ಎಂದು ಪೂರ್ವ ತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವವರು ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ತಿಳಿದಷ್ಟು ಸಿದ್ದರಾಮಯ್ಯ ಪರಿಶುದ್ಧರೇನಲ್ಲ. ಅವರ ಮೇಲೆ 65 ಕ್ಕೂ ಹೆಚ್ಚು ಭ್ರಷ್ಟಾಚಾರ ದ ಆರೋಪಗಳಿವೆ. ತನಿಖೆ ಆಗದಂತೆ ಮುನ್ನೆಚ್ಚರಿಕೆವಹಿಸಿ ಅವರಿಗೆ ಅವರೇ ಪ್ರಾಮಾಣಿಕರೆಂದು …
Read More »