ಹೊಸನಗರ: ನಾಡಿನ ಬೆಳಕಿಗಾಗಿ ಬಹುದೊಡ್ಡ ಕೊಡುಗೆ ನೀಡಿದ ಚಕ್ರಾ-ಸಾವೇಹಕ್ಲು ಅವಳಿ ಜಲಾಶಯಗಳು ಗಮನಾರ್ಹ ಅಭಿವೃದ್ಧಿ ಕಾಣಬೇಕಾಗಿದೆ. ಈ ಪ್ರದೇಶವು ‘ಇಕೋ ಟೂರಿಸಂ’ಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬುಧವಾರ ಚಕ್ರಾ ಮತ್ತು ಸಾವೇಹಕ್ಲು ಅವಳಿ ಜಲಾಶಯಗಳಿಗೆ ಪ್ರಥಮ ಬಾರಿಗೆ ಬಾಗಿನ ಸಮರ್ಪಿಸಿದ ಬಳಿಕ ಮಾತನಾಡಿದರು. ಈ ಅವಳಿ ಜಲಾಶಯ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಸೂಕ್ತ ಜಾಗ. ಜನರು ಇಲ್ಲಿನ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಮಾಡಿಕೊಡಬೇಕಿದೆ. ಅದರಲ್ಲೂ …
Read More »Monthly Archives: ಆಗಷ್ಟ್ 2024
ಯತ್ನಾಳ ಎಲ್ಲಿಂದ ಮಾಹಿತಿ ಸಂಗ್ರಹಿಸುತ್ತಾರೆ ಎಂಬುದೇ ವಿಚಿತ್ರ: ಹೆಬ್ಬಾಳಕರ
ಬೆಳಗಾವಿ: ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಹೈಕಮಾಂಡ್ಗೆ ₹2,000 ಕೋಟಿ, ಮಂತ್ರಿ ಸ್ಥಾನಕ್ಕೆ ₹500 ಕೋಟಿ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಈ ಹಿಂದೆ ಹೇಳಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ನಮ್ಮವರೇ ದಾಖಲೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರು ಎಲ್ಲಿಂದ ಇಂಥ ವಿಷಯ ಸಂಗ್ರಹಿಸುತ್ತಾರೆ ಎಂಬುದೇ ವಿಚಿತ್ರ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು. ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಲು …
Read More »‘ಸತತ ಪ್ರಯತ್ನವಿದ್ದರೆ ಜಗತ್ತನ್ನೇ ಗೆಲ್ಲಬಹುದು’
ಬೆಳಗಾವಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಧೃತಿಗೆಡದೆ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ನಿಶ್ಚಿತ ಗುರಿ, ದೃಢಸಂಕಲ್ಪ ಹಾಗೂ ಸತತ ಪ್ರಯತ್ನವಿದ್ದರೆ ಜಗತ್ತನ್ನೇ ಗೆಲ್ಲಬಹುದು’ ಎಂದು ಸಹಕಾರ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಸುರೇಶಗೌಡ ಪಾಟೀಲ ಹೇಳಿದರು. ಇಲ್ಲಿನ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಭುದೇವ ಸಭಾಗೃಹದಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು …
Read More »ಪ್ರವಾಹದಿಂದ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ’
ಬೆಳಗಾವಿ: ‘ಜಿಲ್ಲೆಯ ಎಲ್ಲ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ, ಊಟೋಪಹಾರ, ಔಷಧ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಹದಿಂದ ಜನರು ಮತ್ತು ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್ ಸೂಚಿಸಿದರು. ಅತಿವೃಷ್ಟಿಯಿಂದ ಉಂಟಾದ ಹಾನಿ, ಪ್ರವಾಹ ನಿರ್ವಹಣೆ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಆಗಸ್ಟ್ನಲ್ಲಿ ಮಳೆ ಪ್ರಮಾಣ ಹೆಚ್ಚುವ ಸಾಧ್ಯತೆ …
Read More »ಘಟಪ್ರಭಾ ನದಿ ಪ್ರವಾಹ: ಮರೀಚಿಕೆಯಾದ ಶಾಶ್ವತ ಸ್ಥಳಾಂತರ
ಮಹಾಲಿಂಗಪುರ: ಘಟಪ್ರಭಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿರುವ ಹಳೆ ನಂದಗಾಂವ ಗ್ರಾಮದ 52 ಕುಟುಂಬಗಳ ಶಾಶ್ವತ ಸ್ಥಳಾಂತರದ ಬೇಡಿಕೆ ಮರೀಚಿಕೆಯಾಗಿದ್ದು, ಮನೆಗಳ ಹಂಚಿಕೆ ಗೊಂದಲಮಯವಾಗಿ ಪರಿಣಮಿಸಿದೆ. ಗ್ರಾಮಸ್ಥರ ಶಾಶ್ವತ ಸ್ಥಳಾಂತರಕ್ಕಾಗಿ 1982ರಲ್ಲಿಯೇ ಹಕ್ಕು ಪತ್ರ ಹಾಗೂ 10 ಎಕರೆ ಭೂಮಿ ನೀಡಲಾಗಿದೆ. ಪ್ರತಿ ಮನೆಯ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಜಾಗೆ ಅಳತೆ ಮಾಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯ್ತಿ ಪ್ರತಿ ವರ್ಷ ಇದಕ್ಕಾಗಿ ಭೂಬಾಡಿಗೆಯನ್ನು ಕೆಲ ಗ್ರಾಮಸ್ಥರಿಂದ ಪಡೆಯುತ್ತಿದೆ. ಸ್ಥಳಾಂತರಕ್ಕಾಗಿ ಹಕ್ಕು …
Read More »ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಜನರ ಜೀವನವೇ ಜಲಾವೃತ.
ಶೃಂಗೇರಿ: ಭಾರಿ ಮಳೆಗೆ ಮಲೆನಾಡು ಅಕ್ಷರಶ ಕಂಗಾಲಾಗಿದೆ, ತುಂಗೆಯ ಅಬ್ಬರಕ್ಕೆ ನೂರಾರು ಎಕರೆ ಹೊಲ – ಗದ್ದೆ-ತೋಟಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ ದೇಗುಲದ ಪಾರ್ಕಿಂಗ್ ಪ್ರದೇಶ, ಗಾಂಧಿ ಮೈದಾನವೂ ಜಲಾವೃತಗೊಂಡಿದ್ದು, ಶೃಂಗೇರಿ ದೇಗುಲದ ಕಪ್ಪೆಶಂಕರ ನಾರಾಯಣ ದೇಗುಲ, ಗುರುಗಳ ಸಂಧ್ಯಾವಂದನೆ ಮಂಟಪವೂ ಜಲಾವೃತಗೊಂಡಿದೆ. ಗಾಂಧಿ ಮೈಧಾನದಲ್ಲಿರುವ ಅಂಗಡಿಗಳು ಅರ್ಧ ಮುಳುಗಿದ್ದು ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಜನರ ಬದುಕೇ ಅತಂತ್ರಗೊಂಡಿದೆ.
Read More »SC-ST’ ಒಳಮೀಸಲಾತಿಗೆ `ಸುಪ್ರೀಂಕೋರ್ಟ್’ ಗ್ರೀನ್ ಸಿಗ್ನಲ್
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದಿಂದ ತೀರ್ಪು ನೀಡಿದೆ. ಮಹತ್ವದ ತೀರ್ಪಿನಲ್ಲಿ, ಏಳು ನ್ಯಾಯಾಧೀಶರ ಪೀಠವು – 6:1 ಬಹುಮತದಿಂದ- ಎಸ್ಸಿ / ಎಸ್ಟಿ ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದೆ. ಉದ್ಯೋಗ ಮತ್ತು ಪ್ರವೇಶದಲ್ಲಿ ಕೋಟಾಕ್ಕಾಗಿ ಎಸ್ಸಿ ಮತ್ತು ಎಸ್ಟಿ ವರ್ಗಗಳಲ್ಲಿ ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ನ 7 ನ್ಯಾಯಾಧೀಶರ ಪೀಠವು 6:1 ಬಹುಮತದಿಂದ, ಮೀಸಲಾತಿ ವರ್ಗಗಳ ಅಂದರೆ ಪರಿಶಿಷ್ಟ …
Read More »ಜೈಲಲ್ಲಿರುವ ನಟ ದರ್ಶನ್ ಕೈ ಸೇರಲಿದೆ ‘ಹುಬ್ಬಳ್ಳಿ ಸಿದ್ಧಾರೂಢ ಮಠದ ಕೃತಿ’
ಹುಬ್ಬಳ್ಳಿ, ಆಗಸ್ಟ್ 01: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಬೆಂಗಳೂರು ಸೆಂಟ್ರಲ್ ಜೈಲು ಸೇರಿದ್ದಾರೆ. ನಟ ದರ್ಶನ್ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ಶ್ರೀ ಸಿದ್ಧರೂಢ ಮಠಕ್ಕೆ ಕೆಲವು ಭಾರಿ ಭೇಟಿ ನೀಡಿದ್ದರು. ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆಯುತ್ತಿದ್ದರು. ಇದೀಗ ಇದೇ ಮಠದ ಪ್ರಸಾದ ಮತ್ತು ಕೃತಿ ಕೋರಿಯರ್ ಮೂಲಕ ಜೈಲಿಗೆ ಕಳಹಿಸಲಾಗಿದೆ. ಹೌದು, ಕೊಲೆ ಆರೋಪಿಯಾಗಿ ಸುಮಾರು 50 ದಿನಗಳಿಂದ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ …
Read More »ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ, ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಪ್ರಧಾನಿಗೆ ಮಹಿಳೆ ಪತ್ರ
ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ, ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಪ್ರಧಾನಿಗೆ ಮಹಿಳೆ ಪತ್ರ ರಾಮನಗರ: ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ (Love) ಹಾಗೂ ಆತನ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ (Ramangara Police) ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ. ಪ್ರಿಯಕರ ಮತ್ತು ಪೊಲೀಸರಿಂದ ಅನ್ಯಾಯಕ್ಕೊಳಗಾಗಿದ್ದೇನೆ ಎಂದು ಜಿಲ್ಲೆಯ ಮಾಗಡಿ (Magadi) ಮೂಲದ ಮಹಿಳೆ, ಪ್ರಧಾನಿ ಮೋದಿಗೆ (PM MOdi) ಪತ್ರ ಬರೆದಿದ್ದಾರೆ. ಒಂದು ವೇಳೆ ನ್ಯಾಯ …
Read More »ಪೊಲೀಸರ ಕೈಯಿಂದ ತಪ್ಪಿಸಲೆತ್ನಿಸಿದ ರೌಡಿಶೀಟರ್ ಗೆ ಗುಂಡೇಟು
ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಲೆತ್ನಿಸಿದ ರೌಡಿಶೀಟರ್ ಗೆ ಗುಂಡಿನ ರುಚಿ ತೋರಿಸಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ ಕಣಗಿನಹಾಳ ರಸ್ತೆಯಲ್ಲಿ ಗುರುವಾರ (ಆ.1) ಘಟನೆ ನಡೆದಿದೆ. ರೌಡಿ ಶೀಟರ್ ಸಂಜಯ್ ಕೊಪ್ಪದ ಮೇಲೆ ಫೈರಿಂಗ್ ನಡೆಸಲಾಗಿದೆ. ರಾಬರಿ ಕೇಸ್ ಗೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಪೊಲೀಸರು ಬಂದಿದ್ದರು. ಸ್ಥಳ ಮಹಜರು ವೇಳೆ ರೌಡಿ ಶೀಟರ್ ಸಂಜಯ್ ಪೊಲೀಸರ ಮೇಲೆ ಕಲ್ಲೆಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಓಡಲು ಮುಂದಾಗಿದ್ದ …
Read More »