Breaking News

Monthly Archives: ಆಗಷ್ಟ್ 2024

ಗಲಭೆಪೀಡಿತ ಬಾಂಗ್ಲಾದಿಂದ ಬೆಳಗಾವಿಗೆ ಬಂದ 25ವೈದ್ಯಕೀಯ ವಿದ್ಯಾರ್ಥಿಗಳು

ಬೆಳಗಾವಿ: ಗಲಭೆ ಪೀಡಿತ ಬಾಂಗ್ಲಾದೇಶದಿಂದ 25 ವೈದ್ಯಕೀಯ ವಿದ್ಯಾರ್ಥಿಗಳು ಪಾರಾಗಿ ಬೆಳಗಾವಿಗೆ ಆಗಮಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಈ ಎಲ್ಲ ವಿದ್ಯಾರ್ಥಿಗಳು ಬೆಳಗಾವಿಗೆ ಬಂದಿದ್ದಾರೆ. ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೆರವಿನಿಂದ ಸುರಕ್ಷಿತವಾಗಿ ಬೆಳಗಾವಿಗೆ ಬಂದಿದ್ದಾರೆ.   ಬಾಂಗ್ಲಾಬಾಂಗ್ಲಾದಿಂದ ಬೆಳಗಾವಿಗೆ ಬಂದ ವೈದ್ಯಕೀಯ ವಿದ್ಯಾರ್ಥಿ ನೇಹಲ್ ಸವಣೂರು ಮಾಧ್ಯಮದವರೊಂದಿಗೆ ಮಾತನಾಡಿ, ಬಾಂಗ್ಲಾದಲ್ಲಿ ನಾನೂ ಭಯಭೀತನಾಗಿದ್ದೆ. ಈಗಿನ ಪರಿಸ್ಥಿತಿ ‌ಇನ್ನೂ ಭಯಂಕರ ಇದೆ. ಹೇಗೋ ಬಚಾವ್ …

Read More »

ನಾವಗೆಯ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ

ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಟಿಕ್ಸೋ ಟೇಪ್ ತಯಾರಿಸುವ ಕಾರ್ಖಾನೆಗೆ ಮಂಗಳವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಭೀಕರ ಅವಘಡ ಸಂಭವಿಸಿದ್ದು, ಕಾರ್ಖಾನೆಯೊಳಗೆ ಹಲವರು ಸಿಲುಕಿರುವ ಸಾಧ್ಯತೆ ಇದೆ.‌ ತಾಲೂಕಿನ‌ ನಾವಗೆ ಗ್ರಾಮದ ಬಳಿ ಇರುವ ಸ್ನೇಹಂ ಎಂಬ ಟಿಸ್ಕೋ ಟೇಪ್‌ ತಯಾರಿಸುವ ಈ ಕಾರ್ಖಾನೆಯಲ್ಲಿ ಬೆಂಕಿ ತಗುಲಿದೆ.‌ ಹೆಚ್ಚಿನ‌ ಪ್ರಮಾಣದಲ್ಲಿ ಪ್ಲಾಸ್ಟಿಕ್ ಇದ್ದಿದ್ದರಿಂದ ಬೆಂಕಿ ಆವರಿಸಿಕೊಂಡಿದೆ. ಬೃಹತ್ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ. ಸುಮಾರು60ಕ್ಕೂ ಹೆಚ್ಚು ಜನ ಒಳಗೆ …

Read More »

ನಿಂಗಾಪುರ ಗ್ರಾಮಸ್ಥರಲ್ಲಿ ಹರ್ಷ ವರದಿ ಬೆನ್ನಲ್ಲೆ ಗ್ರಾಮಕ್ಕೆ ಬಂತು ಹೊಸ ಬೋಟ್

ವರದಿ ಬೆನ್ನಲ್ಲೆ ಗ್ರಾಮಕ್ಕೆ ಬಂತು ಹೊಸ ಬೋಟ್ ನಿಂಗಾಪುರ ಗ್ರಾಮಸ್ಥರಲ್ಲಿ ಹರ್ಷ *ಬೆಳಗಾವಿ:* ನಿಂಗಾಪುರ ಗ್ರಾಮಸ್ಥರು ಹೊಸ ಬೋಟ್ ಸಿಗುತ್ತಿದ್ದಂತೆಯೇ ಹರ್ಷದಿಂದ ಕುಣಿದರು. ಬೋಟ್ ವ್ಯವಸ್ಥೆ ಇಲ್ಲದೆ, ಗಾಳಿ ತುಂಬಿದ ಟ್ಯೂಬ್‌ ಮೇಲೆ ಶಾಲಾ ಮಕ್ಕಳು ಹಿಂಜರಿಯುತ್ತಿದ್ದ ನಂತರ, ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಜಿಲ್ಲಾಡಳಿತವು ತಕ್ಷಣ ಪ್ರತಿಕ್ರಿಯಿಸಿತು.   ನಿಂಗಾಪುರ ಗ್ರಾಮ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿರುವ ಹಿಂದುಳಿದ ಪ್ರದೇಶವಾಗಿದೆ, ಇತ್ತೀಚಿನ ಭಾರಿ ಮಳೆಯಿಂದಾಗಿ ಗ್ರಾಮಸ್ಥರು ಹುಲಿಕೆರೆಯನ್ನು ದಾಟಲು …

Read More »

ತಿಂಗಳಲ್ಲಿ ಚರಕ ಆಸ್ಪತ್ರೆ ಉದ್ಘಾಟನೆ: ಡಾ.ಶರಣ ಪ್ರಕಾಶ ಪಾಟೀಲ

ಬೆಂಗಳೂರು: ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಚರಕ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೌರಿಂಗ್ ಆಸ್ಪತ್ರೆಯ ಡೆಂಗಿ ವಾರ್ಡ್‌ಗಳಿಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ, ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಆಸ್ಪತ್ರೆ ಯಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿ ದ್ದಾರೆಯೆ? ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಸಮಯಕ್ಕೆ ಸರಿಯಾಗಿ ನೀಡುತ್ತಿದ್ದಾರೆಯೆ? ಎಂದು ರೋಗಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಅಲ್ಲಿಂದ ಶಿವಾಜಿನಗರದ …

Read More »

ಸಿಡಿಲು ಬಡಿದು ಆರು ಜನರಿಗೆ ಗಾಯ

ರೋಣ (ಗದಗ ಜಿಲ್ಲೆ): ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಆರು ಜನರು ಗಾಯಗೊಂಡ ಘಟನೆ ತಾಲ್ಲೂಕಿನ ಹೊನ್ನಿಗನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಅಂದಾನಗೌಡ ಪವಾಡಿಗೌಡ್ರ, ಸುನಂದಾ ಪವಾಡಿಗೌಡ್ರ, ಕಸ್ತೂರೆವ್ವ ಪವಾಡಿಗೌಡ್ರ, ಶರಣವ್ವ ಮಾದರ, ರೂಪ ಪಾಟೀಲ, ಸುಜಾತಾ ಪಾಟೀಲ ಸಿಡಿಲು ಬಡಿದು ಗಾಯಗೊಂಡವರು. ಎಲ್ಲರನ್ನೂ ರೋಣ ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು …

Read More »

ವೇಮನರ ತತ್ವ ಜಗತ್ತಿಗೆ ಮಾದರಿ: ಸಚಿವ ಎಚ್.ಕೆ.ಪಾಟೀಲ

ಲೋಕಾಪುರ: ವೇಮನರ ತತ್ವ, ಸಿದ್ಧಾಂತಗಳು ಜಗತ್ತಿಗೆ ಮಾದರಿಯಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಸಮೀಪದ ಮೆಟಗುಡ್ಡ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಧಾನ ಹಾಗೂ ಹೇಮ ವೇಮ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಚನಾತ್ಮಕ ಕೆಲಸಗಳನ್ನು ಮಾಡುವುದರಿಂದ ಒಳ್ಳೆ ಸಮಾಜ ನಿರ್ಮಾಣ ಸಾಧ್ಯ ಎಂದರು. ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಅವರ ವಚನ ಮತ್ತು ಬದುಕನ್ನು ನಾಡಿಗೆ ತಿಳಿಸುವ ಕಾರ್ಯ ನಡೆಯಬೇಕು. ಸಮುದಾಯಗಳ ಮಧ್ಯೆ ಸಮನ್ವಯ …

Read More »

: ಇಂದಿನಿಂದ ಆ.10ರವರೆಗೆ ಬೆಂಗಳೂರಲ್ಲಿ ಭಾರೀ ಮಳೆ

ಬೆಂಗಳೂರು: ನಗರದಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಸಿಲಿಕಾನ್ ಸಿಟಿ ಜನತೆ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಇಂದಿನಿಂದ ಆಗಸ್ಟ್.10ರವರೆಗೆ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲೂ ಮಳೆ ಮುಂದುವರೆಯಲಿದೆ ಅಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಈ ಬಗ್ಗೆ ಹವಾಮಾನ ತಜ್ಞ ಜಿಎಸ್ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ಇಂದಿನಿಂದ ಆಗಸ್ಟ್.10ರವರೆಗೆ ಬೆಂಗಳೂರಲ್ಲಿ ಮಳೆ ಸಾಧ್ಯತೆ ಇದೆ. ಇವತ್ತು ಕರಾವಳಿ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗಿದೆ ಎಂದರು. …

Read More »

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಜೈಲು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಗ್ರಾಮವೊಂದರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಸವರಾಜ ಮುದ್ಲಾಪುರ ಎಂಬುವನಿಗೆ ಕೊಪ್ಪಳ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2022ರ ಮಾರ್ಚ್ 20ರಂದು ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ …

Read More »

ಕೇಂದ್ರ ಸರ್ಕಾರದಿಂದ `ಮಹಿಳೆಯರಿಗೆ’ ಗುಡ್ ನ್ಯೂಸ್ : ಉಚಿತ ಹೊಲಿಗೆ ಯಂತ್ರದ ಜೊತೆಗೆ 1 ಲಕ್ಷ ರೂ. ಸಾಲ!

ನವದೆಹಲಿ : ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್ಡಿಎ ಸರ್ಕಾರ ರಚನೆಯಾಗುವುದರೊಂದಿಗೆ, ನಡೆಯುತ್ತಿರುವ ಅನೇಕ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಈ ಅನುಕ್ರಮದಲ್ಲಿ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ. ಅನೇಕರು ಈಗಾಗಲೇ ಇದರಿಂದ ಪ್ರಯೋಜನ ಪಡೆದಿದ್ದಾರೆ. ಇಂದಿಗೂ, ಯಾವುದೇ ಮಹಿಳೆ ಅಥವಾ ಪುರುಷ ಈ ಯೋಜನೆಯ ಲಾಭವನ್ನು ಪಡೆಯಬಹುದು. ಕೇಂದ್ರ ಸರ್ಕಾರವು ವಿವಿಧ ರೀತಿಯ ವೃತ್ತಿಗಳಿಗೆ ಸಂಬಂಧಿಸಿದ ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಒದಗಿಸುತ್ತದೆ. ಹೊಲಿಗೆ ಯಂತ್ರವೂ ಈ …

Read More »

ಖಾಲಿ ಬಾಟಲಿಯೇ ಹಿರಿ ಜೀವಕ್ಕೆ ಆಧಾರ

ವಿಜಯಪುರ(ದೇವನಹಳ್ಳಿ): ’50 ವರ್ಷದ ಹಿಂದೆ ಹಲವು ಮಂದಿಗೆ ಕೆಲಸ ಕೊಟ್ಟ ನನ್ನ ಕೈಗಳು ಈಗ ಸೋತಿವೆ. ದುಡಿಯುವ ಶಕ್ತಿಯನ್ನು ಕಳೆದುಕೊಂಡಿವೆ. ಜೀವನ ಸಾಗಿಸಲು ಬೀದಿಯಲ್ಲಿ ಸಿಗುವ ಖಾಲಿ ಬಾಟಲಿ ಮತ್ತು ರಟ್ಟನ್ನು ಹೆಕ್ಕಿ ಮಾರಿ ಒಂದೂತ್ತಿನ ಹೊಟ್ಟೆ ಹೊರೆಯುತ್ತಿದ್ದೇನೆ…’ -ಇದು ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ 95 ವರ್ಷದ ಜಯರಾಮಯ್ಯ ಅವರ ನುಡಿ. ಬಾಗಿದ ಬೆನ್ನು, ಬಾಟಲಿ ಮತ್ತು ರಟ್ಟು ತುಂಬಿದ ಸೈಕಲ್‌ ಅನ್ನು ನಡುಗುತ್ತಾ ತಳುತ್ತಾ ಪಟ್ಟಣದಲ್ಲಿ ಸಾಗುವ ವೇಳೆ …

Read More »