ಯಾದಗಿರಿ: ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಐಡಿ ತಂಡವು ನಗರದ ಡಿವೈಎಸ್‌ಪಿ ಕಚೇರಿಗೆ ಆಗಮಿಸಿ ಪರಶುರಾಮ್ ಅವರ ತಂದೆ ಜನಕಮುನಿ, ಸಹೋದರ ಹಣಮಂತ, ಮಾವ ವೆಂಕಟಸ್ವಾಮಿ ಅವರಿಂದ ಹೇಳಿಕೆ ಪಡೆಯಿತು. ನಂತರ ಪೊಲೀಸ್ ಇಲಾಖೆಯ ವಸತಿ ಗೃಹದಲ್ಲಿರುವ ಮೃತ ಪರಶುರಾಮ್ ಅವರ ಮನೆಗೆ ತೆರಳಿದರು. ಸ್ಥಳ ಮಹಜರು ನಡೆಸಿದರು. ಸ್ಥಳ ಮಹಜರು ನಡೆಸಿ ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರಿಂದ ಸಿಐಡಿ ತಂಡ ಮಾಹಿತಿ ಪಡೆದರು. ಅಲ್ಲದೇ …
Read More »Monthly Archives: ಆಗಷ್ಟ್ 2024
ಟ್ರ್ಯಾಕ್ಟರ್ ಟ್ರೈಲರ್ ಕಳ್ಳನ ಬಂಧನ: ನಾಲ್ಕು ಟ್ರ್ಯಾಕ್ಟರ್ ಟ್ರೈಲರ್ ವಶ
ಬೈಲಹೊಂಗಲ: ಟ್ರ್ಯಾಕ್ಟರ್ ಟ್ರೈಲರ್ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ₹5 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ಟ್ರೈಲರ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಟ್ರ್ಯಾಕ್ಟರ್ ಎಂಜಿನ್‌ನ್ನು ಗುರುವಾರ ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಸವದತ್ತಿ ತಾಲ್ಲೂಕಿನ ಮರಕುಂಬಿ ಗ್ರಾಮದ ಅಡಿವೆಪ್ಪ ನಾಗಪ್ಪ ಕಳಸನ್ನವರ (34) ಬಂಧಿತ ಆರೋಪಿ. ಈತ ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದ ಹದ್ದಿಯಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಕಳುವು ಮಾಡಿದ್ದ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. …
Read More »ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಾಗರ: ಇಲ್ಲಿನ ಜೋಗ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಮಂಗಳವಾರ ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕರು ಹಾಗೂ ನಿರ್ವಾಹಕರು ಬಸ್‌ನಿಂದ ಇಳಿದು ಪ್ರಯಾಣಿಕರನ್ನು ಬಸ್‌ನಿಂದ ಇಳಿಸಿದ್ದಾರೆ. ಬಸ್‌ನಲ್ಲಿ 12 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ತೊಂದರೆ ಉಂಟಾಗಿಲ್ಲ. ಬಸ್‌ನ ಶೇ 50ರಷ್ಟು ಭಾಗ ಸುಟ್ಟು ಹೋಗಿದೆ.
Read More »ಅತಿವೃಷ್ಟಿಗೆ ಮೆಕ್ಕೆಜೋಳ ಹಾಳು; ರೈತರು ಕಂಗಾಲು
ಶಿರಾಳಕೊಪ್ಪ: ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಳಗುಂದ ಮತ್ತು ಉಡುಗಣಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಬೆಳೆ ಹಾಳಾಗಿದ್ದು, ರೈತರು ಕಂಗಲಾಗಿದ್ದಾರೆ. ಈ ಭಾಗದಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಶೇ 33ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಪ್ರಾಥಮಿಕ ವರದಿಯ ಪ್ರಕಾರ 1,350 ಹೆಕ್ಟೇರ್ ಮೆಕ್ಕೆಜೋಳದ ಬೆಳೆ ಹಾಳಾಗಿದ್ದು, ಅಂದಾಜು ₹ 4.23 ಕೋಟಿ ಮೊತ್ತದ ಬೆಳೆ ನಾಶವಾಗಿದೆ. ನಾಶವಾಗದೆ ಉಳಿದಿರುವ ಮೆಕ್ಕೆಜೋಳದ ಪೈರಿನ ಇಳುವರಿ ಕ್ಷೀಣಿಸುತ್ತಿದ್ದು, ಕೆಲವು ಕಡೆ ಕಂದು ಮತ್ತು ಕೆಂಪು …
Read More »ನಾಗರಪಂಚಮಿಗೆ ಖರೀದಿ ಜೋರು
ಹುಬ್ಬಳ್ಳಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಆಚರಣೆಗೆ ನಗರದಲ್ಲಿ ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆಯನ್ನು ಲೆಕ್ಕಿಸದೆ ಜನರು ಬುಧವಾರ ಇಲ್ಲಿನ ದುರ್ಗದ್‌ಬೈಲ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಗುರುವಾರ, ಶುಕ್ರವಾರ ಪಂಚಮಿ, ನಾಗರಮೂರ್ತಿಗಳಿಗೆ ಹಾಲೆರೆಯುವ ಹಬ್ಬ ನಡೆಯಲಿದ್ದು, ಇಲ್ಲಿನ ಬಟ್ಟೆ ಅಂಗಡಿ, ಅಲಂಕಾರಿಕ ವಸ್ತುಗಳು, ಹೂ, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ನಾಗಪಂಚಮಿಯ ವಿಶೇಷತೆಯಾಗಿರುವ ವಿಧವಿಧವಾದ ಉಂಡಿಗಳನ್ನು ತಯಾರಿಸಲು, ಶೇಂಗಾ, ಎಳ್ಳು, ಕೊಬ್ಬರಿ, ಕಡಲೆಹಿಟ್ಟು, ರವೆ, ಬೆಲ್ಲ, …
Read More »ಈಶ್ವರ್ ಖಂಡ್ರೆ ಅವರನ್ನ ಭೇಟಿಯಾದ ಪವನ್ ಕಲ್ಯಾಣ್;
ಬೆಂಗಳೂರು: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಭೇಟಿ ವೇಳೆ ಪವನ್ ಕಲ್ಯಾಣ್ ಅವರು ಆಂಧ್ರದಲ್ಲಿ ಕಾಡಾನೆಗಳ ಸೆರೆ, ಆನೆ ಕಾರ್ಯಾಚರಣೆ, ಆನೆಗಳನ್ನು ಪಳಗಿಸುವುದು, ಮಾವುತರಿಗೆ ತರಬೇತಿಯ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ನಗರದ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪವನ್ …
Read More »ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು,
ಬೆಂಗಳೂರು: ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ (MUDA Scam) ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಾಗಿದೆ. ಬೆಂಗಳೂರಿನ (Bengaluru) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೈಸೂರಿನ (Mysore) ಸ್ನೇಹಮಯಿ ಕೃಷ್ಣ ಎಂಬುವರು ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಆದೇಶ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿಯಲ್ಲಿ …
Read More »ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ಗೆ ಶಾಕ್
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ವಿಪಕ್ಷಗಳು ಹೋರಾಟ ಮಾಡುತ್ತಿರುವ ಬೆನ್ನಲ್ಲೇ ಕೋರ್ಟ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಕ್ ಕೊಟ್ಟಿದೆ. ಆಗಸ್ಟ್ 29ರಂದು ಖುದ್ದು ಹಾಜರಾಗಬೇಕು ಎಂದು ಸಿಎಂ, ಡಿಸಿಎಂಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಇದರಿಂದ ಸಿಎಂ ಮತ್ತು ಡಿಸಿಎಂಗೆ ಸಂಕಷ್ಟ ಎದುರಾಗಿದೆ. ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಖಂಡಿಸಿ …
Read More »ಬೆಳಗಾವಿ: ಬೆಂಕಿ ಅವಘಡ ಸ್ಥಳಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ
ಬೆಳಗಾವಿ: ತಾಲೂಕಿನ ನಾವಗೆ ಕ್ರಾಸ್ ನಲ್ಲಿರುವ ಸ್ನೇಹಂ ಟೇಪಿಂಗ್ ಆಯಂಡ್ ಸೋಲ್ಯೂಶನ್ ಎಂಬ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಬುಧವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆಯಲ್ಲಿ ಅವಘಡ ಸಂಭವಿಸಿದ್ದು ಹೇಗೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗುಲಲುಬಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಪಂ ಸಿಇಒ ರಾಹುಲ್ ಶಿಂಧೆ …
Read More »15 ದಿನದಿಂದ ಜಲಾವೃತಗೊಂಡಿದ್ದ ಯಾದವಾಡ ಸೇತುವೆ ದ್ವಿಚಕ್ರ ವಾಹನ ಸಂಚಾರ ಮುಕ್ತ
ಮುಧೋಳ : ಕಳೆದು ಹದಿನೈದು ದಿನಗಳಿಂದ ಘಟಪ್ರಭಾ ನೀರಿನಿಂದ ಜಲಾವೃತಗೊಂಡಿದ್ದ ಯಾದವಾಡ ಸೇತುವೆ ಗುರುವಾರ (ಆಗಸ್ಟ್ 8) ಬೆಳಗ್ಗೆ ನೀರಿನಿಂದ ಮುಕ್ತವಾಗಿದೆ. ಸೇತುವೆ ಮೇಲೆ ನೀರು ಇಳಿಮುಖವಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಬೈಕ್ ಹೊರತುಪಡಿಸಿ ಮತ್ಯಾವ ವಾಹನಗಳಿಗೂ ಅವಕಾಶ ಕಲ್ಪಿಸಲಾಗಿಲ್ಲ. ಇನ್ನು ಕೆಲದಿನಗಳ ಬಳಿಕ ಸೇತುವೆ ಸ್ಥಿತಿಗತಿ ಅರಿತು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read More »