ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕರೆ ಬಹುತೇಕ ನಟಿಯರು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಇದೆ ಶಾರುಖ್ ಹವಾ. ಆದರೆ ನಟಿ ರವೀನಾ ಟಂಡನ್ ಅವರು ಈ ಮೊದಲು ಶಾರುಖ್ ಖಾನ್ ಜೊತೆಗಿನ ಒಂದು ಸಿನಿಮಾವನ್ನು ತಿರಸ್ಕರಿಸಿದ್ದರು. ಆ ಕುರಿತು ಅವರು ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಶಾರುಖ್ ಖಾನ್ ಮತ್ತು ರವೀನಾ ಟಂಡನ್ ಅವರು ಜೊತೆಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಒಂದು ಸಿನಿಮಾದಿಂದ ರವೀನಾ ಟಂಡನ್ ಅವರು …
Read More »Monthly Archives: ಆಗಷ್ಟ್ 2024
ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ಅಂಗನವಾಡಿ ಕಾರ್ಯಕರ್ತರ ಇಬ್ಬರು ಅಮಾನತು
ಕೊಪ್ಪಳ, ಆಗಸ್ಟ್.10: ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ (Egg) ವಂಚನೆ ಆರೋಪ ಕೇಳಿ ಬಂದಿದ್ದು ಅಂಗನವಾಡಿ (Anganwadi) ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾಬೇಗಂ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್ ನಡೆದಿದೆ. ಕಾರ್ಯಕರ್ತೆಯರು ಮಹಿಳಾ ಮತ್ತು …
Read More »ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು,
ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಕೋಟೆಯಲ್ಲಿದ್ದ ಮದ್ದಿನ ಮನೆಯಲ್ಲಿ ಮೋಸ ಮಾಡಿಬಿಟ್ಟರು. ಬ್ರಿಟಿಷರ ಫಿರಂಗಿಗಳು ಕಿತ್ತೂರಿನ ಕೋಟೆಯ ಭಾಗಗಳನ್ನು ಕೆಡವಿದವು. ಕಿತ್ತೂರು ಕಾಪಾಡಲು, ದೇಶವಾಸಿಗಳ ರಕ್ಷಣೆಗೆ ಚೆನ್ನಮ್ಮ ಯತ್ನಿಸುತ್ತಿದ್ದರೆ ಕಿತ್ತೂರು ಸೈನಿಕರು ಕೆಚ್ಚೆದೆಯಿಂದ ಹೋರಾಟ ಮುಂದುವರಿಸಿದರು. …
Read More »ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿರುವುದೇಕೆ?
ಬೆಂಗಳೂರು, ಆಗಸ್ಟ್ 10: ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗದೇ ಇರುವುದು, ಎರಡ್ಮೂರು ತಿಂಗಳುಗಳಿಂದ ಬಾಕಿ ಇರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಹಣ ವರ್ಗಾವಣೆ ಯಾಕೆ ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಗೃಹಲಕ್ಷ್ಮಿ ಯೋಜನೆಗೆ ಪ‌್ರತಿ ತಿಂಗಳಿಗೆ 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾದವು. ಇನ್ನೂ ನಾಲ್ಕೈದು …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..
! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ಅಸುoಡಿ ಗ್ರಾಮದ ಶ್ರೀ ಹನುಮಂತ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ …
Read More »ಗಂಡ ಬಿಟ್ಟಿ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ
ಬೆಂಗಳೂರು, : ಗಂಡನನ್ನು ಬಿಟ್ಟು ಬಾಳು ಕಟ್ಟಿಕೊಂಡಿದ್ದ ಮಹಿಳೆಗೆ ಕಾರು ಚಾಲಕನೋರ್ವ ಬಾಳು ಕೊಡ್ತೀನಿ ಎಂದು ನಂಬಿಸಿ ಮೋಸ (Cheating) ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆಸಿದೆ. ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಒಟ್ಟಿಗೆ ಜೀವನ ನಡೆಸಿ ಆಕೆಯನ್ನು ಬಳಸಿಕೊಂಡು ಇದೀಗ ಬೋರಾದ್ಳು ಎಂದು ಬಿಟ್ಟು ಹೋಗಿದ್ದಾನೆ. ಘಟನೆ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ …
Read More »ಯಶ್ ಕಾರಿನ ಸಂಖ್ಯೆ ವೈರಲ್ ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬ ರೀತಿಯಲ್ಲಿ ಆ ನಂಬರ್ ಪ್ಲೇಟ್
ಹೀರೋಗಳ ಕಾರು ಎಷ್ಟು ಗಮನ ಸೆಳೆಯುತ್ತದೆಯೋ ಅವರ ಕಾರಿನ ನಂಬರ್ಪ್ಲೇಟ್ ಕೂಡ ಗಮನ ಸೆಳೆಯುತ್ತವೆ. ಈಗ ಯಶ್ ಅವರ ಕಾರಿನ ಸಂಖ್ಯೆ ವೈರಲ್ ಆಗುತ್ತಿದೆ. ‘ಕರ್ನಾಟಕಕ್ಕೆ ನಾನೇ ನಂಬರ್ 1 ಬಾಸ್’ ಎಂಬ ರೀತಿಯಲ್ಲಿ ಆ ನಂಬರ್ ಪ್ಲೇಟ್ ಇದೆ. ಈ ಮಾತನ್ನು ಅನೇಕರು ಒಪ್ಪಿದ್ದಾರೆ. ಸದ್ಯ ನಂಬರ್ಪ್ಲೇಟ್ ವೈರಲ್ ಆಗುತ್ತಿದೆ. ಬಾಸ್ ಯಾರು ಎನ್ನುವ ಬಗ್ಗೆ ಚರ್ಚೆ ಮೊದಲಿನಿಂದಲೂ ಇದೆ. ದರ್ಶನ್ ಅಭಿಮಾನಿಗಳು ತಮ್ಮ ಹೀರೋ ಬಾಸ್ ಎನ್ನುತ್ತಾರೆ. …
Read More »ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣ; ಸಿಐಡಿ ತನಿಖೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಇಡಿ
ಧಾರವಾಡ, : ಧಾರವಾಡ ಕೆಐಎಡಿಬಿ(KIADB) ಕಚೇರಿ ಅಂದರೆ ಅಲ್ಲಿ ಅಕ್ರಮಗಳದ್ದೇ ಪಾರುಪತ್ಯ. ಕಳೆದ ವರ್ಷ ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅದಕ್ಕೂ ಮುನ್ನ 20 ಕೋಟಿ ರೂ. ಡಬಲ್ ಪೇಮೆಂಟ್ ಹಗರಣವೂ ನಡೆದು, ಅದರಲ್ಲಿ ಸಜ್ಜನ್ ಮೊದಲನೇ ಆರೋಪಿ ಆಗಿ, ಜೈಲು ಕೂಡ ಕಂಡು ಬಂದಿದ್ದರು. ಡಬಲ್ …
Read More »ಕಾರ್ಖಾನೆ ಆಡಳಿತ ಮಂಡಳಿಯಿಂದ ಮೃತ ಕಾರ್ಮಿಕ ಕುಟುಂಬಕ್ಕೆ 18 ಲಕ್ಷ ರೂ ಪರಿಹಾರ
ಬೆಳಗಾವಿ, ಆಗಸ್ಟ್ 09: ಕಾರ್ಖಾನೆಯಲ್ಲಿ ಅಗ್ನಿ ದುರಂತದಲ್ಲಿ (Fire Tragedy) ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಕುಟುಂಬಕ್ಕೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಒಟ್ಟು 18 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಸಜೀವದಹನವಾಗಿದ್ದ. ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ. ಮುಂಚೆ 10 ಲಕ್ಷ ರೂ. ಪರಿಹಾರ ಬೇಡ …
Read More »ಹಳ್ಳಹಿಡಿದ ಜಲ ಜೀವನ್ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್ಗಳು
ಗದಗ, ಆಗಸ್ಟ್ 09: ಕೇಂದ್ರ ಸರ್ಕಾರ ಪ್ರತಿ ಗ್ರಾಮಗಳ ಮನೆ ಮನೆಗೆ ಕುಡಿಯುವ ನೀರು (water) ಪೂರೈಕೆ ಮಾಡುವ ಉದ್ದೇಶದಿಂದ ಜಲ ಜೀವನ ಮಷಿನ್ ಯೋಜನೆ (Jal Jeevan Yojana) ಜಾರಿ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವ್ರ ಮಹತ್ವಾಕಾಂಕ್ಷಿ ಯೋಜನೆ. ಇದು ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ರಾಜ್ಯದ ಪ್ರತಿಯೊಂದು ಮನೆಗೆ ಕುಡಿಯವ ನೀರು ಸಿಗಲಿ ಅಂತ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಆದ್ರೆ, ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷಗಳು ಕಳೆದ್ರೂ …
Read More »